ತಣ್ಣೀರು ಬಾವಿಯಲ್ಲಿ ಸಮುದ್ರ ಜೀವಿಗಳ ಮ್ಯೂಸಿಯಂ ಸ್ಕೆಚ್ !

ಮಂಗಳೂರು ಸಮೀಪದ ತಣ್ಣೀರುಬಾವಿ ಬೀಚ್‌ನಲ್ಲಿ ಅರಣ್ಯ ಇಲಾಖೆ ನಿರ್ಮಿಸಿರುವ ಟ್ರೀ ಪಾರ್ಕ್‌ನಲ್ಲಿ ಮೆರೈನ್ ಮ್ಯೂಸಿಯಂ ಯೋಜನೆಯೊಂದು ರೂಪುಗೊಳ್ಳುತ್ತಿದೆ.
ರಾಜ್ಯದಲ್ಲಿ ಎಲ್ಲೂ ಇಲ್ಲದ ಮೆರೈನ್ ಮ್ಯೂಸಿಯಂ ಸ್ಥಾಪಿಸಲು ಸುಮಾರು 36 ಕೋಟಿ ರೂ. ಅಗತ್ಯವಿದೆ. ಅಂಡಮಾನ್‌ನಲ್ಲಿ ಐದು ಕೋಟಿ ರೂ. ಮೊತ್ತದ ಸಣ್ಣ ಪ್ರಮಾಣದ ಮ್ಯೂಸಿಯಂ ನಿರ್ಮಿಸಿದ್ದು, ಇದೇ ಮಾದರಿಯಲ್ಲಿ ಸ್ಥಾಪಿಸಲು ನಿರ್ಧರಿಸಲಾಗಿದೆ.
ಟ್ರೀ ಪಾರ್ಕ್ ಸಮುದ್ರ ಕಿನಾರೆಯಲ್ಲಿದ್ದು, ಮ್ಯೂಸಿಯಂ ಮೂಲಕ ಸಂದರ್ಶಕರು, ಪ್ರವಾಸಿಗರು ಸಮುದ್ರದ ಒಳಗಿನ ಅನುಭವ ಪಡೆಯಲಿದ್ದಾರೆ. ಸಮುದ್ರದೊಳಗಿನ ಮೀನುಗಳ ಸಹಿತ ಜಲಚರಗಳನ್ನು ವೀಕ್ಷಿಸುವ ಅವಕಾಶ ಸಿಗಲಿದೆ. ಇದರ ಜತೆಯಲ್ಲಿ ಟ್ರೀ ಪಾರ್ಕ್‌ನಲ್ಲಿ ಎಂಆರ್‌ಪಿಎಲ್‌ನಿಂದ ಐದು ಲಕ್ಷ ರೂ. ವೆಚ್ಚದಲ್ಲಿ ಸೆಲ್ಫಿ ಟರ್ಟಲ್ ನಿರ್ಮಾಣದ ಉದ್ದೇಶ ಕೂಡ ಇಟ್ಟುಕೊಳ್ಳಲಾಗಿದೆ.

Share