ಮಂಗಳೂರು ಸಮೀಪದ ತಣ್ಣೀರುಬಾವಿ ಬೀಚ್‌ನಲ್ಲಿ ಅರಣ್ಯ ಇಲಾಖೆ ನಿರ್ಮಿಸಿರುವ ಟ್ರೀ ಪಾರ್ಕ್‌ನಲ್ಲಿ ಮೆರೈನ್ ಮ್ಯೂಸಿಯಂ ಯೋಜನೆಯೊಂದು ರೂಪುಗೊಳ್ಳುತ್ತಿದೆ.
ರಾಜ್ಯದಲ್ಲಿ ಎಲ್ಲೂ ಇಲ್ಲದ ಮೆರೈನ್ ಮ್ಯೂಸಿಯಂ ಸ್ಥಾಪಿಸಲು ಸುಮಾರು 36 ಕೋಟಿ ರೂ. ಅಗತ್ಯವಿದೆ. ಅಂಡಮಾನ್‌ನಲ್ಲಿ ಐದು ಕೋಟಿ ರೂ. ಮೊತ್ತದ ಸಣ್ಣ ಪ್ರಮಾಣದ ಮ್ಯೂಸಿಯಂ ನಿರ್ಮಿಸಿದ್ದು, ಇದೇ ಮಾದರಿಯಲ್ಲಿ ಸ್ಥಾಪಿಸಲು ನಿರ್ಧರಿಸಲಾಗಿದೆ.
ಟ್ರೀ ಪಾರ್ಕ್ ಸಮುದ್ರ ಕಿನಾರೆಯಲ್ಲಿದ್ದು, ಮ್ಯೂಸಿಯಂ ಮೂಲಕ ಸಂದರ್ಶಕರು, ಪ್ರವಾಸಿಗರು ಸಮುದ್ರದ ಒಳಗಿನ ಅನುಭವ ಪಡೆಯಲಿದ್ದಾರೆ. ಸಮುದ್ರದೊಳಗಿನ ಮೀನುಗಳ ಸಹಿತ ಜಲಚರಗಳನ್ನು ವೀಕ್ಷಿಸುವ ಅವಕಾಶ ಸಿಗಲಿದೆ. ಇದರ ಜತೆಯಲ್ಲಿ ಟ್ರೀ ಪಾರ್ಕ್‌ನಲ್ಲಿ ಎಂಆರ್‌ಪಿಎಲ್‌ನಿಂದ ಐದು ಲಕ್ಷ ರೂ. ವೆಚ್ಚದಲ್ಲಿ ಸೆಲ್ಫಿ ಟರ್ಟಲ್ ನಿರ್ಮಾಣದ ಉದ್ದೇಶ ಕೂಡ ಇಟ್ಟುಕೊಳ್ಳಲಾಗಿದೆ.
Tagged: citykulda
47 ವರ್ಷದಲ್ಲಿ 12,260 ಜೋಡಿಗಳಿಗೆ ಮದುವೆ !
ಇದು ಎಲ್ಲರಿಂದ ಸಾಧ್ಯವಿಲ್ಲದ ಮಾತು. ಆದರೆ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆಯವರಿಂದ ಮಾತ್ರ ಸಾಧ್ಯ. ಕಳೆದ 47 ವರ್ಷದ ಧರ್ಮಸ್ಥಳದ ಸಾಮೂಹಿಕ ವಿವಾಹ ಸಮಾರಂಭದಲ್ಲಿ ಭರ್ತಿ 12,260 ಮಂದಿ ಜೋಡಿಗಳು ಮದುವೆಯಾಗುವ ಮೂಲಕ ಸತಿ ಪತಿಗಳಾಗಿದ್ದಾರೆ.
ಈ ಬಾರಿ 48 ನೇ ವರ್ಷದ ಸಾಮೂಹಿಕ ವಿವಾಹ ನಡೆಯುತ್ತಿದೆ. ಶ್ರೀಕ್ಷೇತ್ರ ಧರ್ಮಸ್ಥಳದ ಅಮೃತವರ್ಷಿಣಿ ಸಭಾಭವನದಲ್ಲಿ ಮೇ 1ರಂದು ಸಂಜೆ 6.48ರ ಗೋಧೂಳಿ ಲಗ್ನ ಸುಮುಹೂರ್ತ ದಲ್ಲಿ 48ನೇ ವರ್ಷದ ಉಚಿತ ಸಾಮೂಹಿಕ ವಿವಾಹ ಸಮಾರಂಭ ನಡೆಯಲಿದ್ದು, 102 ಜೋಡಿ ಹಸೆಮಣೆ ಏರಲಿದ್ದಾರೆ.
ವಿವಾಹ ಸರಳವಾಗಿ, ವರದಕ್ಷಿಣೆ ಇಲ್ಲದೆ ನಡೆದು ಕುಟುಂಬದಲ್ಲಿ ಸುಖ- ಶಾಂತಿ ಕಾಣಬೇಕು ಎಂಬ ಉದ್ದೇಶದಿಂದ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆಯವರು 1972 ರಲ್ಲಿ ಸಾಮೂಹಿಕ ಉಚಿತ ವಿವಾಹವನ್ನು ಶ್ರೀಕ್ಷೇತ್ರ ಧರ್ಮಸ್ಥಳದಲ್ಲಿ ಪ್ರಾರಂಭಿಸಿ ದರು. ಸಮಾಜದ ಹಿತಕ್ಕಾಗಿ ಶ್ರೀಕ್ಷೇತ್ರದ ಮೂಲಕ ಹತ್ತು ಹಲವಾರು ಕಾರ‍್ಯಕ್ರಮಗಳು ಅನುಷ್ಠಾನಗೊಂಡು ಯಶಸ್ಸು ಕಂಡು ರಾಜ್ಯ, ರಾಷ್ಟ್ರದಲ್ಲಿ ಮಾದರಿ ಎನಿಸಿವೆ.
1972 ರ ಮಾ.29ರಂದು ನಡೆದ ಮೊದಲ ವಿವಾಹ ಕಾರ್ಯಕ್ರಮದಲ್ಲಿ 88 ಜೋಡಿ ವಿವಾಹವಾದರು. ಮೇ 1ರಂದು ನಡೆಯುವ 48ನೇ ವರ್ಷದ ಸಾಮೂಹಿಕ ಉಚಿತ ವಿವಾಹ ಕಾರ್ಯಕ್ರಮದಲ್ಲಿ ಸುಮಾರು 102 ಕ್ಕೂ ಹೆಚ್ಚು ಜೋಡಿಗಳು ಹಸೆಮಣೆ ಏರಲಿದ್ದಾರೆ. ಕಳೆದ 47 ವರ್ಷ ಗಳಲ್ಲಿ ಕ್ಷೇತ್ರದಲ್ಲಿ ನಡೆದ ವಿವಾಹಗಳಲ್ಲಿ 12,260 ಜೋಡಿಗಳು ಸತಿಪತಿಗಳಾಗಿ ಸುಖೀ ದಾಂಪತ್ಯ ಜೀವನ ಹೊಂದಿದ್ದಾರೆ.