ಎಂಜಿನಿಯರಿಂಗ್ ಸೇರಿದಂತೆ ಇತರ ವೃತ್ತಿ ಶಿಕ್ಷಣ ಕೋರ್ಸ್‌ಗಳ ಪ್ರವೇಶಕ್ಕೆ ಅವಕಾಶ ಕಲ್ಪಿಸುವ ಸಾಮಾನ್ಯ ಪ್ರವೇಶ ಪರೀಕ್ಷೆ(ಸಿಇಟಿ) ಫಲಿತಾಂಶ ಶನಿವಾರ ಪ್ರಕಟವಾಗಿದೆ. ದಕ್ಷಿಣ ಕನ್ನಡ ಜಿಲ್ಲೆಗೆ ಟಾಪ್ 10 ನಲ್ಲಿ ಒಟ್ಟು 9 ರ‍್ಯಾಂಕ್‌ಗಳು ಬಂದಿವೆ. ಇದರಲ್ಲಿ ಮಂಗಳೂರಿನ ಎಕ್ಸ್‌ಫರ್ಟ್ ಕಾಲೇಜಿಗೆ 8 ರ‍್ಯಾಂಕ್ ಮತ್ತು ಮೂಡುಬಿದರೆ ಆಳ್ವಾಸ್ ಕಾಲೇಜಿಗೆ ಒಂದು ರ‍್ಯಾಂಕ್ ಬಂದಿದೆ.
ಎಕ್ಸ್‌ಪರ್ಟ್ ಪಿಯು ಕಾಲೇಜು ವಿದ್ಯಾರ್ಥಿಗಳಾದ ಆರ್.ಚಿನ್ಮಯ್ ಎಂಜಿನಿಯರಿಂಗ್ 2ನೇ ಮತ್ತು ಫಾರ್ಮಸಿಯಲ್ಲಿ 3ನೇ ರ‍್ಯಾಂಕ್ ಗಳಿಸಿದ್ದಾರೆ. ಭುವನ್ ವಿ.ಬಿ. ಬಿಎಸ್ಸಿ (ಅಗ್ರಿಕಲ್ಚರ್)ನಲ್ಲಿ 3ನೇ ರ‍್ಯಾಂಕ್, ನ್ಯಾಚುರೋಪತಿ ಮತ್ತು ಯೋಗಿಕ್ ಸೈನ್ಸ್‌ನಲ್ಲಿ 6ನೇ ರ‍್ಯಾಂಕ್ ಪಡೆದಿದ್ದಾರೆ.
ಸಮರ್ಥ್ ಮಯ್ಯ ಎಂಜಿನಿಯರಿಂಗ್‌ನಲ್ಲಿ 5ನೇ ರ‍್ಯಾಂಕ್, ಆಶಯ್ ಜೈನ್ ಸಿ.ಎ. ನ್ಯಾಚುರೋಪತಿ ಮತ್ತು ಯೋಗಿಕ್ ಸೈನ್ಸ್‌ನಲ್ಲಿ 7ನೇ ರ‍್ಯಾಂಕ್, ಸುದೇಶ್ ಗೌಡ ಜೆ. ಬಿಎಸ್ಸಿ (ಅಗ್ರಿಕಲ್ಚರ್)ನಲ್ಲಿ 7ನೇ ರ‍್ಯಾಂಕ್, ಯಶ್ ಬನ್ನೂರು ಬಿಎಸ್ಸಿ (ಅಗ್ರಿಕಲ್ಚರ್)ನಲ್ಲಿ 9ನೇ ರ‍್ಯಾಂಕ್ ಪಡೆದಿದ್ದಾರೆ. ಆಳ್ವಾಸ್ ಪಿಯು ಕಾಲೇಜಿನ ಎಸ್.ದರ್ಶನ್ ಸಮರ್ಥ ಬಿಎಸ್ಸಿ (ಅಗ್ರಿಕಲ್ಚರ್)ನಲ್ಲಿ 10ನೇ ರ‍್ಯಾಂಕ್ ಗಳಿಸಿದ್ದಾರೆ.