ಬಿಜಿಎಸ್ ಸಂಸ್ಥೆ ಶಿಕ್ಷಣದಲ್ಲೂ ದಾಖಲೆ ಫಲಿತಾಂಶ

ಮಂಗಳೂರಿನ ಕಾವೂರಿನಲ್ಲಿ ಕಳೆದ 19 ವರ್ಷದಿಂದ ಬಿಜಿಎಸ್ ಸಿಬಿಎಸ್‌ಸಿ ಶಾಲೆ ನಡೆಯುತ್ತಿದ್ದು, ಸತತ 13 ವರ್ಷದಿಂದ ಶೇಕಡಾ ನೂರರ ಫಲಿತಾಂಶದೊಂದಿಗೆ ದಾಖಲಿಸುತ್ತಾ ಬಂದಿದೆ.

ಮಕ್ಕಳಲ್ಲಿ ಸಂಸ್ಕಾರ, ಸಂಸ್ಕೃತಿ ಮೌಲ್ಯಾಧಾರಿತ ಶಿಕ್ಷಣದೊಂದಿಗೆ ಪಠ್ಯ ಹಾಗೂ ಪಠ್ಯೇತರ ಚಟುವಟಿಕೆಗಳೊಂದಿಗೆ ಹೆಮ್ಮರವಾಗಿ ಬೆಳೆಯುತ್ತಿದೆ. ಇದರ ಜತೆಯಲ್ಲಿ ಮಠದ ಪರಿಸರದಲ್ಲಿ ಬಿಜಿಎಸ್ ಮೊಂಟಸರಿ ಕೂಡ ಇದ್ದು, ಅತ್ಯಾಧುನಿಕ ಉಪಕರಣಗಳೊಂದಿಗೆ ವೈವಿಧ್ಯ ಹಾಗೂ ವೈಶಿಷ್ಟ್ಯಪೂರ್ಣವಾಗಿ ವರ್ಣರಂಜಿತವಾಗಿ ನಿರ್ಮಾಣಗೊಂಡಿದೆ.

ಎಲ್ಲ ತರಗತಿಗಳು ಹವಾನಿಯಂತ್ರಣದಿಂದ ಕೂಡಿದ್ದು ಮಕ್ಕಳಿಗೆ ಆರೋಗ್ಯದಾಯಕವಾದ ವಾತಾವರಣವನ್ನು ಕಲ್ಪಿಸಲಾಗಿದೆ. ಮಾತ್ರವಲ್ಲ ನಲಿದು ಕಲಿ, ಕುಣಿದು ಕಲಿ, ಕೇಳಿ ಕಲಿ, ಆಡಿ ಕಲಿ ಎಂಬ ಧ್ಯೇಯದೊಂದಿಗೆ ಸಂಸ್ಕಾರ ಶಿಕ್ಷಣವನ್ನು ನೀಡಲಾಗುತ್ತಿದೆ.

Share