ಮಂಗಳೂರಿನ ಜನತೆಗೆ ಜೀವ ಜಲ ಸಿಗುತ್ತಿರುವ ತುಂಬೆ ವೆಂಟೆಡ್ ಡ್ಯಾಮ್ ನಲ್ಲಿ ನೀರಿನಮಟ್ಟ ದಿನದಿಂದ ದಿನಕ್ಕೆ ಇಳಿಕೆಯಾಗುತ್ತಿದೆ. ಮಂಗಳೂರಿನಲ್ಲಿ ನೀರಿನ ರೇಶನಿಂಗ್ ನಡೆದರೂ ಕೂಡ ಡ್ಯಾಂ ನಲ್ಲಿ ನೀರಿನ ಇಳಿಕೆ ಮುಂದೆ ಸಾಗುತ್ತಿದೆ.
ಒಂದು ಲೆಕ್ಕಾಚಾರ ದ ಪ್ರಕಾರ ಇನ್ನು ಒಂದು ವಾರದಲ್ಲಿ ಮಳೆ ಬರದೇ ಹೋದರೆ ಕುಡ್ಲದ ಜನತೆಗೆ ಈ ಬಾರಿ ನೀರಿನ ಮಹತ್ವದ ಕುರಿತು ಅರಿವಾಗುವ ಜತೆಯಲ್ಲಿ ನೀರಿಗಾಗಿ ಹೊಡೆದಾಡುವ ಸ್ಥಿತಿ ನಿರ್ಮಾಣ ವಾಗಲಿದೆ. ಕಾರಣ ಇನ್ನು ಡ್ಯಾಂ ನಲ್ಲಿ ಹತ್ತರಿಂದ ಹದಿನೈದು ದಿನಕ್ಕೆ ಮಾತ್ರ ನೀರು ಉಳಿದಿದೆ.