ಕರಾವಳಿಯ ಡೆಂಗೆಯ ಅಬ್ಬರ ದಿನದಿಂದ ದಿನಕ್ಕೆ ಏರುಗತಿಯಲ್ಲಿ ಸಾಗುತ್ತಿದೆ. ಕುಡ್ಲದಲ್ಲಿ ಡೆಂಗೆ ಜ್ವರದಿಂದ ಬಳಲುವ ಸಂಖ್ಯೆ 450 ಕ್ಕೆ ಮೀರಿ ನಿಂತಿದೆ. ಐವರು ಈಗಾಗಲೇ ಸಾವನ್ನು ಅಪ್ಪಿದ್ದಾರೆ. ಆದರೂ ಡೆಂಗೆ ಜ್ವರದ ಪ್ರಮಾಣ ತಗ್ಗುತ್ತಿಲ್ಲ.
ಖಾಸಗಿ, ಸರಕಾರಿ ಎರಡರಲ್ಲೂ ರೋಗಿಗಳು ಮಲಗುತ್ತಿದ್ದಾರೆ. ಡೆಂಗೆ ಜ್ವರದ ಬಳಿಕ ರೋಗಿಯ ರಕ್ತದ ಕಿರುಬಿಲ್ಲೆ(ಪ್ಲೇಟ್ಲೆಟ್)ಗಳ ಸಂಖ್ಯೆ ಕುಸಿತ ಕಾಣುತ್ತದೆ. ಇದಕ್ಕೆ ಔಷಧದ ಜತೆಯಲ್ಲಿ ಬೆಲ್ಲ ಹಾಗೂ ಹಸಿ ಈರುಳ್ಳಿಯನ್ನು ತಿನ್ನಬೇಕು. ಇದು ರಕ್ತದ ಕಿರುಬಿಲ್ಲೆಯ ಪ್ರಮಾಣವನ್ನು ಜಾಸ್ತಿ ಮಾಡುತ್ತದೆ. ಜತೆಗೆ ರೋಗ ನಿರೊಧಕ ಶಕ್ತಿ ಕೂಡ ಗಟ್ಟಿಯಾಗುತ್ತದೆ. ಆರ್ಯುವೇದದಲ್ಲೂ ಈ ಕುರಿತು ಉಲ್ಲೇಖವಿದೆ.