Tagged: blood

ಡೆಂಗೆ ರೋಗಿಗೆ ಬೆಲ್ಲ, ಈರುಳ್ಳಿ ಮದ್ದಿನ ಪ್ರಯೋಗ

ಕರಾವಳಿಯ ಡೆಂಗೆಯ ಅಬ್ಬರ ದಿನದಿಂದ ದಿನಕ್ಕೆ ಏರುಗತಿಯಲ್ಲಿ ಸಾಗುತ್ತಿದೆ. ಕುಡ್ಲದಲ್ಲಿ ಡೆಂಗೆ ಜ್ವರದಿಂದ ಬಳಲುವ ಸಂಖ್ಯೆ 450 ಕ್ಕೆ ಮೀರಿ ನಿಂತಿದೆ. ಐವರು ಈಗಾಗಲೇ ಸಾವನ್ನು ಅಪ್ಪಿದ್ದಾರೆ. ಆದರೂ ಡೆಂಗೆ ಜ್ವರದ ಪ್ರಮಾಣ ತಗ್ಗುತ್ತಿಲ್ಲ.

ಖಾಸಗಿ, ಸರಕಾರಿ ಎರಡರಲ್ಲೂ ರೋಗಿಗಳು ಮಲಗುತ್ತಿದ್ದಾರೆ. ಡೆಂಗೆ ಜ್ವರದ ಬಳಿಕ ರೋಗಿಯ ರಕ್ತದ ಕಿರುಬಿಲ್ಲೆ(ಪ್ಲೇಟ್ಲೆಟ್)ಗಳ ಸಂಖ್ಯೆ ಕುಸಿತ ಕಾಣುತ್ತದೆ. ಇದಕ್ಕೆ ಔಷಧದ ಜತೆಯಲ್ಲಿ ಬೆಲ್ಲ ಹಾಗೂ ಹಸಿ ಈರುಳ್ಳಿಯನ್ನು ತಿನ್ನಬೇಕು. ಇದು ರಕ್ತದ ಕಿರುಬಿಲ್ಲೆಯ ಪ್ರಮಾಣವನ್ನು ಜಾಸ್ತಿ ಮಾಡುತ್ತದೆ. ಜತೆಗೆ ರೋಗ ನಿರೊಧಕ ಶಕ್ತಿ ಕೂಡ ಗಟ್ಟಿಯಾಗುತ್ತದೆ. ಆರ್ಯುವೇದದಲ್ಲೂ ಈ ಕುರಿತು ಉಲ್ಲೇಖವಿದೆ.

ಕುಡ್ಲದ ಬ್ಲಡ್ ಬ್ಯಾಂಕ್ ನಲ್ಲಿ ರಕ್ತಕ್ಕೂ ಬರ

ಒಂದೆಡೆ ಶಾಲಾ ಕಾಲೇಜುಗಳಿಗೆ ರಜೆ ಮತ್ತೊಂದು ಕಡೆ ಮುಸ್ಲಿಮರ ಉಪವಾಸ ಎರಡು ಜತೆಯಾದ ಪರಿಣಾಮ ಮಂಗಳೂರಿನ ಪ್ರಮುಖ ಆಸ್ಪತ್ರೆ ಸೇರಿದಂತೆ ಬ್ಲಡ್ ಬ್ಯಾಂಕ್ ಗಳಲ್ಲಿ ರಕ್ತದ ಕೊರತೆ ಕಾಣಿಸಿಕೊಂಡಿದೆ.

ಶಾಲಾ ಕಾಲೇಜಿನ ವಿದ್ಯಾರ್ಥಿಗಳು ಶಿಬಿರಗಳ ಮೂಲಕ ರಕ್ತ‌ನೀಡುತ್ತಿದ್ದರು. ಮುಸ್ಲಿಂ ಸಂಘಟನೆ ಗಳು ಕೂಡ ಇದೇ ರೀತಿಯ ಕೆಲ್ಸ ಮಾಡುತ್ತಿದ್ದರು. ಆದರೆ ಇಬ್ಬರು ಈ ಸಲ ರಕ್ತ ನೀಡದ‌ ಪರಿಣಾಮ ಬ್ಲಡ್ ಬ್ಯಾಂಕ್ ಗಳಲ್ಲಿ ತೀವ್ರ ರಕ್ತದ ಕೊರತೆ ಕಾಣಿಸಿಕೊಂಡಿದೆ.