Kudla City

ಉತ್ತಮ ವಿದ್ಯಾರ್ಥಿಯ ಆಯ್ಕೆಗೆ ರೊಸಾರಿಯೋ

ರೊಸಾರಿಯೋ ಕಾಲೇಜು ಬರೀ ಉತ್ತಮ ಶಿಕ್ಷಣ ನೀಡುವ ಕೆಲಸವನ್ನು ಮಾತ್ರ ಮಾಡುತ್ತಿಲ್ಲ. ವಿದ್ಯಾರ್ಥಿಗಳ ಉಜ್ವಲ ಭವಿಷ್ಯದ ವಿಚಾರಕ್ಕಾಗಿ ರೆಡ್‌ಕ್ರಾಸ್, ಎನ್ನೆಸ್ಸೆಸ್ ಸೇರಿದಂತೆ ಹತ್ತಾರು ಕಾಲೇಜಿನಲ್ಲಿರುವ ವಿಭಾಗಗಳು ವಿದ್ಯಾರ್ಥಿಗಳು ಸಮಾಜದ ಉತ್ತಮ ಶಕ್ತಿಯಾಗಿ ಹೊರಬರಲು ಶ್ರಮ ವಹಿಸುತ್ತಿದೆ.
ಅದರಲ್ಲೂ ಮುಖ್ಯವಾಗಿ ಕಾಲೇಜಿನಲ್ಲಿರುವ ಅತ್ಯುತ್ತಮ ಕಂಪ್ಯೂಟರ್ ಲ್ಯಾಬ್ ಸೆಂಟರ್ ವಿದ್ಯಾರ್ಥಿಗಳ ಐಟಿ ಕನಸ್ಸಿಗೆ ಬಲ ನೀಡುವಂತಿದೆ. ಹೆಚ್ಚಿನ ಮಾಹಿತಿಗೆ ರೊಸಾರಿಯೋ ಕಾಲೇಜನ್ನು ಸಂಪರ್ಕಿಸಬಹುದು.

ವಿಶ್ವಕಪ್ ತಂಡದಲ್ಲಿ ಕುಡ್ಲದ ರಾಹುಲ್ ಸೆಲೆಕ್ಟ್

ವಿಶ್ವಕಪ್ ಕ್ರಿಕೆಟ್ 2019ಕ್ಕೆ ಭಾರತ ತಂಡದ 15 ಮಂದಿಯ ಆಯ್ಕೆಯಲ್ಲಿ ಮಂಗಳೂರಿನ ಹುಡುಗ ಕಣ್ಣನೂರು ಲೋಕೇಶ್ ರಾಹುಲ್ ಆಯ್ಕೆಯಾಗಿದ್ದಾರೆ.
ಬೇಸಿಕಲಿ ಕೆ.ಎಲ್.ರಾಹುಲ್ ಮಂಗಳೂರಿನ ಸುರತ್ಕಲ್ ಎನ್ಐಟಿಕೆಯಲ್ಲಿ ಪ್ರೊಫೆಸರ್ ಆಗಿದ್ದ ಕೆ.ಎನ್. ಲೋಕೇಶ್ ಅವರ ಪುತ್ರ. ಸುರತ್ಕಲ್ ಎನ್ಐ ಟಿಕೆಯ ಕ್ರಿಕೆಟ್ ಮೈದಾನದಲ್ಲಿ ಆಡಿದ ಹುಡುಗ ಕೆ.ಎಲ್.ರಾಹುಲ್ ಈಗ ಭಾರತ ತಂಡದ ನೆಚ್ಚಿನ ಆಟಗಾರರಲ್ಲಿ ಒಬ್ಬರು.
klrahul, indian, cricket, team, suratkal, nitk, lokesh, kudlacity, mangalore, kudlanews

ಕುಡ್ಲದ ಪೂವಮ್ಮರಿಗೆ ಮತ್ತೊಂದು ಪದಕ ಸಿಕ್ತು!

ಮಂಗಳೂರು: ದೋಹಾದಲ್ಲಿ ನಡೆಯುತ್ತಿರುವ ಏಷ್ಯಾನ್ ಅಥ್ಲೆಟಿಕ್ಸ್ ಚಾಂಪಿಯನ್ ಶಿಪ್‌ನಲ್ಲಿ ಭಾರತ ಈಗ ಪದಕ ಗಳಿಕೆಯಲ್ಲಿ ಮೂರನೇ ಸ್ಥಾನದಲ್ಲಿದೆ. ಮಂಗಳೂರಿನ ಎಂ.ಆರ್. ಪೂವಮ್ಮ ಅವರು ಈಗಾಗಲೇ ಕಂಚು ಪದಕ ಪಡೆದುಕೊಂಡಿದ್ದಾರೆ. ಬುಧವಾರ ನಡೆದ ೪* ೪೦೦ ಮಿಕ್ಸೇಡ್ ರಿಲೇಯಲ್ಲಿ ಎಂ.ಆರ್. ಪೂವಮ್ಮ ಜತೆಗೆ ಮಹಮ್ಮದ್ ಅನಾಸ್, ಆರೋಕ್ಯ ರಾಜೀವ್ ಹಾಗೂ ವಿ.ಕೆ.ವಿಸ್ಮಯ ಅವರ ತಂಡ ಬೆಳ್ಳಿ ಪದಕ ಪಡೆದುಕೊಂಡು ಭಾರತದ ಪದಕ ಗಳಿಕೆಗೆ ಕೊಡುಗೆ ನೀಡಿದೆ.

The 4x4000m mixed relay team which was introduced for the first time in this championship, Mohammed Anas, M R Poovamma, V K Vismaya and Arokia Rajiv clocked 3:16.47 to win the silver medal, behind Bahrain.

ಶೈಕ್ಷಣಿಕ ಬದುಕಿನ ಯಶಸ್ಸಿಗೆ ರೊಸಾರಿಯೋ ಕಾಲೇಜು

ಮಂಗಳೂರು: ನಗರದ ರೊಸಾರಿಯೋ ಕಾಲೇಜು ವಿಶೇಷವಾಗಿ ವಿದ್ಯಾರ್ಥಿಗಳ ಶೈಕ್ಷಣಿಕ ಬದುಕಿಗೆ ಒಂದು ವಿಶಿಷ್ಟ ಹಾದಿಯನ್ನು ನಿರ್ಮಾಣ ಮಾಡುತ್ತದೆ. ಅದರಲ್ಲೂ ವಿದ್ಯಾರ್ಥಿನಿಯರಿಗೆ ಕಾಲೇಜು ಪಕ್ಕದಲ್ಲಿಯೇ ಹಾಸ್ಟೆಲ್ ವ್ಯವಸ್ಥೆ ಮಾಡಿಕೊಟ್ಟಿದೆ. ಅವರಿಗೆ ಕಾಲೇಜು ಫೀಸ್ ನಲ್ಲೂ ಬಹಳಷ್ಟು ಕಡಿತವಿದೆ. ಒಂದು ವೇಳೆ ಬಿಕಾಂ ಹಾಗೂ ಬಿಬಿಎ ಮಾಡಬೇಕಾದರೆ ಬರೀ 5500 ಕಟ್ಟಿದರೆ ಸಾಕು.

ಶ್ರೀಲಂಕಾದ ಹತ್ಯಾಕಾಂಡ ಮರುಗಿದ ಕುಡ್ಲದ ಕ್ರೈಸ್ತರು

ಮಂಗಳೂರು: ಮಂಗಳೂರು ಕ್ರೈಸ್ತ ಧರ್ಮಪ್ರಾಂತ್ಯದಿಂದ ಶ್ರೀಲಂಕಾದಲ್ಲಿ ನಡೆದ ಸರಣಿ ಸ್ಪೋಟದಲ್ಲಿ ಮೃತಪಟ್ಟವರಿಗೆ ಮಂಗಳವಾರ ನಗರದ ಮಿಲಾಗ್ರಿಸ್ ದೇವಾಲಯದ ಮೈದಾನದಲ್ಲಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸಲಾಯಿತು. ಧರ್ಮಪ್ರಾಂತ್ಯದ ವಿಕಾರ್ ಜನರಲ್ ಮೊನ್ಸಿಂಜೊರ್ ಮ್ಯಾಕ್ಸಿಂ ನೊರೊನ್ಹಾ ಬಾಂಬ್ ಸ್ಫೋಟದಲ್ಲಿ ಮಡಿದ ಜನರ ಆತ್ಮಗಳಿಗೆ ಶಾಂತಿ ಕೋರಿ ಗಾಯಾಳುಗಳಿಗೆ ಸಾಂತ್ವಾನ ಹೇಳಿದರು. ಬಾಂಬ್ ಸ್ಫೋಟದಲ್ಲಿ ಮಡಿದ ಜನರು ಸತ್ತರೂ ದೇವರಲ್ಲಿ ಜೀಸುತ್ತಾರೆ. ಯೇಸು ಸ್ವಾಮಿಯ ಪುನರುತ್ಥಾನದ ಹಬ್ಬ. ಯೇಸು ಮರಣದ ಮೇಲೆ ಜಯ ಸಾಧಿಸಿದ ಹಬ್ಬ. ಈ ಹಬ್ಬದ ಆಚರಣೆ ಮಾಡಲು ಬಂದ ಜನರು ಯೇಸು ಸ್ವಾಮಿಯಲ್ಲಿ ನಂಬಿಕೆಯುಳ್ಳ ಭಕ್ತಾಧಿಗಳು. ಆದ್ದರಿಂದ ಅವರ ನಂಬಿಕೆಯಿಂದ ದೇವರಲ್ಲಿ ಜೀವಿಸುತ್ತಾರೆ ಎಂಬ ವಿಶ್ವಾಸದ ಮಾತುಗಳನ್ನು ನುಡಿದರು. ಪ್ರಾರ್ಥನಾ ಕೂಟದಲ್ಲಿ ಸೇರಿದ ಜನರೆಲ್ಲರೂ ತಮ್ಮ ಕೈಯಲ್ಲಿ ಬೆಳಗುವ ಮೊಂಬತ್ತಿಯನ್ನು ಹಿಡಿದು ಎರಡು ನಿಮಿಷ ಮೌನವಾಗಿ ನಿಂತು ಮಡಿದ ಜನರಿಗಾಗಿ ಸಂತಾಪ ವ್ಯಕ್ತ ಪಡಿಸಿದರು. ಫಾ.ಜೆ.ಬಿ. ಕ್ರಾಸ್ತ ಮಡಿದವರಿಗಾಗಿ ಮತ್ತು ಗಾಯಾಳುಗಳಿಗಾಗಿ ಪ್ರಾರ್ಥನೆ ಸಲ್ಲಿಸಿದರು.