Kudla City

ಬುರ್ಜ್ ಖಲೀಫಾದಲ್ಲಿ ಕುಡ್ಲದ ಎಂಜಿನಿಯರ್

ಅರಬ್ ಡೆಸಾರ್ಟ್ ಲ್ಯಾಂಡ್‌ನಲ್ಲಿ ಬುರ್ಜ್ ಖಲೀಫಾ ಎದ್ದು ನಿಂತಾಗ ಇಡೀ ವಿಶ್ವವೇ ಸಣ್ಣದಾಗಿ ಹೋಗಿತ್ತು. ತಲೆ ಎತ್ತಿಕೊಂಡು ಈ ಕಟ್ಟಡವನ್ನು ನೋಡಿ ನೂತನ ತಂತ್ರಜ್ಞಾನ ರಂಗಕ್ಕೆ ಸಲಾಮ್ ಹೊಡೆದವರು ಬಹಳಷ್ಟು ಮಂದಿ ಇರಬಹುದು. ಆದರೆ ಈ ಕಟ್ಟಡದ ಬುನಾದಿ ಕಲ್ಲಿನಿಂದ ಹಿಡಿದು ತಲೆ ಎತ್ತಿ ನಿಂತ ಸಮಯದ ವರೆಗೂ ಮಂಗಳೂರಿನ ಯಂಗ್ ಎಂಜಿನಿಯರ್ ಈ ಕೆಲಸದ ಹಿಂದೆ ಇದ್ದರು. ಸುರತ್ಕಲ್ ಹೊಸಬೆಟ್ಟುವಿನ ಎಂಜಿನಿಯರ್ ಸಂದೀಪ್ ಕುಮಾರ್ ಶೆಟ್ಟಿ ಈ ಎಂಜಿನಿಯರ್. ಬುರ್ಜ್ ಖಲೀಫಾದ ವಿನ್ಯಾಸದ ಕೆಲಸವನ್ನು ಅಮೆರಿಕಾದ ಸ್ಕಿಡ್‌ಮೋರ್ ಓವಿಂಗ್ಸ್ ಮಿರಿಲ್( ಎಸ್‌ಒಎಂ)ಕಂಪನಿಗೆ ಲಭಿಸಿತ್ತು. ಅವರಲ್ಲಿ ಕಟ್ಟಡ ನಿರ್ಮಾಣ ಮಾಡುವ ಸಾಮರ್ಥ್ಯವಿತ್ತು. ಆದರೆ ದುಬಾಯಿ ಸರಕಾರದ ರೂಲ್ ಎಂದರೆ ಮಧ್ಯಪ್ರಾಚ್ಯ ದೇಶದಲ್ಲಿ ಕಟ್ಟಡ ನಿರ್ಮಾಣ ಮಾಡುವ ಕಂಪನಿಗೆ ಈ ಕೆಲಸವನ್ನು ವಹಿಸಬೇಕಿತ್ತು. ದುಬಾಯಿಯ ಮೂರು ಖ್ಯಾತ ಕಟ್ಟಡ ನಿರ್ಮಾಣ ಕಂಪನಿಗಳ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿ ನಿಲ್ಲುವ ಹೈದಾರ್ ಕನ್‌ಸಲ್‌ಟೆನ್ಸಿ ಮಿಡಲ್ ಈಸ್ಟ್ ಲಿಮಿಟೆಡ್‌ನ ಬೆನ್ನಿಗೆ ಬಿತ್ತು. ಯಾರು ಊಹಿಸಲು ಸಾಧ್ಯವಾಗದ ಬುರ್ಜ್ ಖಲೀಫಾವನ್ನು ಕಟ್ಟಿ ಕೂರಿಸಿದ್ದು ಹೈದಾರ್ ಕನ್‌ಸಲ್‌ಟೆನ್ಸಿ ತಂಡ. ಇದರಲ್ಲಿ ಯುಕೆ, ಅಮೆರಿಕ,ಸ್ವಿಜರ್‌ಲ್ಯಾಂಡ್ ದೇಶಗಳ ಎಂಜಿನಿಯರ್‌ಗಳು ಸೇರಿದಂತೆ ಕೇರಳದ 8 ಮಂದಿಯ ಜತೆಯಲ್ಲಿ ಕುಡ್ಲದ ಸಂದೀಪ್ ಏಕೈಕ ಎಂಜಿನಿಯರ್.

ಕುಡ್ಲ ಸಿಟಿಯ ಎತ್ತರದ ಕೂಳೂರು ಚರ್ಚ್

ಮಂಗಳೂರು ಸಿಟಿಯೊಳಗಿನ ಚರ್ಚ್‌ಗಳಲ್ಲಿ ಸಂತ ಅಂತೋನಿ ಚರ್ಚ್ ಕೂಳೂರು ಸಾಕಷ್ಟು ವಿಶೇಷತೆಯನ್ನು ಒಳಗೊಂಡಿದೆ. ನಗರ ಪ್ರದೇಶದೊಳಗೆ ಎತ್ತರದಲ್ಲಿ ಇರುವ ಚರ್ಚ್‌ನಲ್ಲಿ ಇದು ಮೊದಲ ಸ್ಥಾನದಲ್ಲಿ ನಿಲ್ಲುತ್ತದೆ. ಮುಖ್ಯವಾಗಿ ಹಳೆಯ ಕಾಲದಲ್ಲಿ ಕೂಳೂರು ಅಸುಪಾಸಿನಲ್ಲಿ ಮಳೆಗಾಲದಲ್ಲಿ ನೀರು ನಿಲ್ಲುವಂತಹ ಸಮಯದಲ್ಲಿ ಈ ಚರ್ಚ್ ಎಲ್ಲರಿಗೂ ಉಳಿಯಲು ನೆರವಾಗುತ್ತಿತ್ತು. ಇದರ ಜತೆಗೆ ಈ ಚರ್ಚ್‌ಗೆ ಹೋಗಿ ನಿಂತು ನೋಡಿದರೆ ಮಂಗಳೂರು ಸುಂದರವಾದ ನೋಟವನ್ನು ಸವಿಯಬಹುದು. ಅಂದಹಾಗೆ ಕೂಳೂರು ಹಳೆಯ ಚರ್ಚ್ ಕಟ್ಟಡ ಹಾಗೂ ಹೊಸ ಕಟ್ಟಡ ಎರಡು ಕೂಡ ಅದ್ಭುತವಾದ ಕಲಾ ಶೈಲಿಯನ್ನು ಒಳಗೊಂಡಿದೆ.

ಕುಡ್ಲದ ಮೊದಲ ರಿಕ್ಷಾ ಚಾಲಕಿ‌ ವಿಜಯಕ್ಕ

ಸುರತ್ಕಲ್ ಪಾರ್ಕ್‌ನಲ್ಲಿ ಸುಮಾರು 10 ವರ್ಷದಿಂದ ರಿಕ್ಷಾ ಚಲಾಯಿಸುತ್ತಿದ್ದ ಹೊಸಬೆಟ್ಟು ನಿವಾಸಿ ದಿ.ಎಚ್.ಟಿ.ಮೂರ್ತಿ ಅವರ ಪತ್ನಿ ಈ ವಿಜಯಲಕ್ಷ್ಮಿ. ಅವರದ್ದು ಬಡ ಕುಟುಂಬ ಬಾಡಿಗೆ ಮನೆಯಲ್ಲಿ ವಾಸ. ಇಬ್ಬರು ಮಕ್ಕಳಿದ್ದಾರೆ. ಪತಿ ಇತ್ತೀಚೆಗೆ ಹೃದಯಾಘಾತದಿಂದ ನಿಧನರಾಗಿದ್ದರು. ಅವರು ತಾನು ನಿಧನರಾಗುವ ಮೊದಲೇ ಪತ್ನಿಗೆ ರಿಕ್ಷಾ ಚಲಾಯಿಸಲು ಕಲಿಸಿ, ಲೈಸನ್ಸ್ ಕೂಡಾ ಮಾಡಿಸಿಕೊಟ್ಟಿದ್ದರು. ಈಗ ರಿಕ್ಷಾದ ಮೂಲಕ ವಿಜಯಕ್ಕ ಬದುಕು ಕಟ್ಟುತ್ತಿದ್ದಾರೆ. ರಿಕ್ಷಾ ಬಿಡುವ ಪುರುಷರ ನಡುವೆ ಇಂತಹ ಕ್ಷೇತ್ರದಲ್ಲಿ ವಿಜಯಕ್ಕ ನೆಲೆ ನಿಂತಿರೋದು ಮಾತ್ರ ಖುಷಿಯ ವಿಚಾರ. ವಿಜಯಕ್ಕನ ಬದುಕು ಈ ರಿಕ್ಷಾದಿಂದ ಗಟ್ಟಿಯಾದರೆ ಸಾವಿರಾರು ಮಹಿಳೆಯರು ಇಂತಹ ಕೆಲಸಕ್ಕೆ ಮುಂದಾಗುತ್ತಾರೆ. #vijayalakshmi #rickshaw #driver #mangalore #surathkal

ಅಕ್ಷರ ಪ್ರೇಮಿ ಹರೇಕಳ ಹಾಜಬ್ಬ ಗ್ರೇಟ್‌ ಮಾರಾಯ್ರೆ

ಇವರು ಕೋಟ್ಯಾಧಿಪತಿಯಲ್ಲ. ಉನ್ನತ ವಿದ್ಯಾಭ್ಯಾಸವಂತೂ ಅವರಿಗೆ ದೂರದ ಬೆಟ್ಟವಾದರೂ ಪಕ್ಕಾ ಅಕ್ಷರ ಸ್ನೇಹಿ. ಮಂಗಳೂರಿನ ರಸ್ತೆ ಬದಿಗಳಲ್ಲಿ ಕಿತ್ತಳೆ ಹಣ್ಣು ಮಾರಿಕೊಂಡು ನಿತ್ಯ ಜೀವನ ಸಾಗಿಸುತ್ತಿರುವ ಹಾಜಬ್ಬನವರು ತಮ್ಮ ಜೀವನ ಸುಖಗಿಂತಲೂ ಬೇರೆಯವರ ನೋವಿಗೆ ಸ್ಪಂದಿಸುವವರು. ಹಾಜಬ್ಬನವರು ಕಿತ್ತಳೆ ವ್ಯಾಪಾರದಿಂದ ಅವರಿಗೆ ದಿನಕ್ಕೆ ಲಭಿಸುವುದು ಕೇವಲ 100 ರಿಂದ 150 ರೂಪಾಯಿ. ಮಂಗಳೂರು ನಗರದಲ್ಲಿ ಕಿತ್ತಳೆ ಹಣ್ಣು ಮಾರುವ ಮೂಲಕ ಅಕ್ಷರದ ಕನಸು ಕಂಡ ಅವರು ತನ್ನೂರಾದ ಹರೇಕಳ ನ್ಯೂಪಡು ಎಂಬ ಪುಟ್ಟ ಹಳ್ಳಿಯಲ್ಲಿ ಬಡ ವಿದ್ಯಾರ್ಥಿಗಳ ಶಿಕ್ಷಣಕ್ಕಾಗಿ ಸರಕಾರಿ ಕಚೇರಿಗಳಿಗೆ ಅಲೆದು ಕೊನೆಗೂ ಪ್ರಾಥಮಿಕ ಶಾಲೆಗೆ ಅನುದಾನ ತಂದು ಕೊಡುವ ಕೆಲಸದಲ್ಲಿ ಯಶಸ್ಸು ಪಡೆದವರು. ವಿಶೇಷ ಎಂದರೆ ಈ ಶಾಲೆಯ ಎಸ್‌ಡಿಎಂಸಿ ಅಧ್ಯಕ್ಷರನ್ನಾಗಿ ಹಾಜಬ್ಬ ಅವರನ್ನು ಆಯ್ಕೆ ಮಾಡಿದ ನಂತರ ಅವರು ನಾನಾ ಇಲಾಖೆಗಳಿಗೆ ಭೇಟಿ ಕೊಟ್ಟು ಅನುದಾನ ಕೊಡುವ ತನಕನೂ ಅಲ್ಲಿಂದ ಕದಲದೇ ಅಧಿಕಾರಿಗಳು ಕೊನೆಗೆ ಅನುದಾನ ಮಂಜೂರು ಮಾಡುವಂತಹ ಸ್ಥಿತಿಗೆ ತಂದು ಬಿಟ್ಟಿದ್ದರು. ನಿಜವಾಗಿಯೂ ಅವರ ಹೋರಾಟದ ಬದುಕು ಈಗ ಜಗತ್ತು ಅರಿತಿದೆ. #Harekala_Hajabba #Fruit #vendor #Newpadpu #Village, #selling #oranges #city #Mangaluru.

ರೊಸಾರಿಯೋದಲ್ಲಿ ವಿದ್ಯಾರ್ಥಿಗಳಿಗೆ ಜಿಮ್ ಫೆಸಿಲಿಟಿ

ಇಲ್ಲಿ ವಿದ್ಯಾರ್ಥಿಗಳಿಗೆ ಬರೀ ಕಲಿಕೆ ಮಾತ್ರವಲ್ಲ ಕ್ರೀಡಾ ಚಟುವಟಿಕೆಗಳಿಗೂ ಸಾಕಷ್ಟು ಮಹತ್ವ ನೀಡಲಾಗುತ್ತದೆ.‌ ವಿಶೇಷವಾಗಿ ವಿದ್ಯಾರ್ಥಿಗಳಿಗೆ ‌ಜಿಮ್ ವ್ಯವಸ್ಥೆ ಮಾಡಲಾಗಿದೆ. ತಮ್ಮ ಶೈಕ್ಷಣಿಕ ವಿಚಾರಗಳ ಬಲವರ್ಧನೆ ಜತೆಗೆ ಫಿಟ್ ಆ್ಯಂಡ್ ಫೈನ್ ಆಗಲು‌‌‌ ಜಿಮ್ ನೆರವು ನೀಡುತ್ತದೆ. ಹೆಚ್ಚಿನ ಮಾಹಿತಿಗೆ ರೊಸಾರಿಯೋ ‌ಕಾಲೇಜನ್ನು ಸಂಪರ್ಕ ಮಾಡಬಹುದು. ಇದರ ಜತೆಗೆ ಮಂಗಳೂರಿನ ರೊಸಾರಿಯೋ ಕೆಥೆಡ್ರಲ್ ನ ಕ್ಯಾಂಪಸ್ ನೊಳಗೆ ಎಲ್ ಕೆಜಿಗೆ ಭರ್ತಿ ಯಾದರೆ ಸಾಕು. ಪದವಿ ಮುಗಿಸಿಕೊಂಡು ಹೊರಗಡೆ ಬರಬಹುದು. ಇಂತಹ ಎಲ್ಲ ಅವಕಾಶ ಇರುವ ಶಿಕ್ಷಣ ಸಂಸ್ಥೆ ಗಳು ಮಂಗಳೂರಿನಲ್ಲಿ ಸಿಗೋದು ಬಹಳ ಅಪರೂಪ. ಹೆಚ್ಚಿನ ಮಾಹಿತಿಗೆ ಸಂಪರ್ಕ ಮಾಡಿ www.rosariocollege.com/