ಬುರ್ಜ್ ಖಲೀಫಾದಲ್ಲಿ ಕುಡ್ಲದ ಎಂಜಿನಿಯರ್

ಅರಬ್ ಡೆಸಾರ್ಟ್ ಲ್ಯಾಂಡ್‌ನಲ್ಲಿ ಬುರ್ಜ್ ಖಲೀಫಾ ಎದ್ದು ನಿಂತಾಗ ಇಡೀ ವಿಶ್ವವೇ ಸಣ್ಣದಾಗಿ ಹೋಗಿತ್ತು. ತಲೆ ಎತ್ತಿಕೊಂಡು ಈ ಕಟ್ಟಡವನ್ನು ನೋಡಿ ನೂತನ ತಂತ್ರಜ್ಞಾನ ರಂಗಕ್ಕೆ ಸಲಾಮ್ ಹೊಡೆದವರು ಬಹಳಷ್ಟು ಮಂದಿ ಇರಬಹುದು. ಆದರೆ ಈ ಕಟ್ಟಡದ ಬುನಾದಿ ಕಲ್ಲಿನಿಂದ ಹಿಡಿದು ತಲೆ ಎತ್ತಿ ನಿಂತ ಸಮಯದ ವರೆಗೂ ಮಂಗಳೂರಿನ ಯಂಗ್ ಎಂಜಿನಿಯರ್ ಈ ಕೆಲಸದ ಹಿಂದೆ ಇದ್ದರು. ಸುರತ್ಕಲ್ ಹೊಸಬೆಟ್ಟುವಿನ ಎಂಜಿನಿಯರ್ ಸಂದೀಪ್ ಕುಮಾರ್ ಶೆಟ್ಟಿ ಈ ಎಂಜಿನಿಯರ್. ಬುರ್ಜ್ ಖಲೀಫಾದ ವಿನ್ಯಾಸದ ಕೆಲಸವನ್ನು ಅಮೆರಿಕಾದ ಸ್ಕಿಡ್‌ಮೋರ್ ಓವಿಂಗ್ಸ್ ಮಿರಿಲ್( ಎಸ್‌ಒಎಂ)ಕಂಪನಿಗೆ ಲಭಿಸಿತ್ತು. ಅವರಲ್ಲಿ ಕಟ್ಟಡ ನಿರ್ಮಾಣ ಮಾಡುವ ಸಾಮರ್ಥ್ಯವಿತ್ತು. ಆದರೆ ದುಬಾಯಿ ಸರಕಾರದ ರೂಲ್ ಎಂದರೆ ಮಧ್ಯಪ್ರಾಚ್ಯ ದೇಶದಲ್ಲಿ ಕಟ್ಟಡ ನಿರ್ಮಾಣ ಮಾಡುವ ಕಂಪನಿಗೆ ಈ ಕೆಲಸವನ್ನು ವಹಿಸಬೇಕಿತ್ತು. ದುಬಾಯಿಯ ಮೂರು ಖ್ಯಾತ ಕಟ್ಟಡ ನಿರ್ಮಾಣ ಕಂಪನಿಗಳ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿ ನಿಲ್ಲುವ ಹೈದಾರ್ ಕನ್‌ಸಲ್‌ಟೆನ್ಸಿ ಮಿಡಲ್ ಈಸ್ಟ್ ಲಿಮಿಟೆಡ್‌ನ ಬೆನ್ನಿಗೆ ಬಿತ್ತು. ಯಾರು ಊಹಿಸಲು ಸಾಧ್ಯವಾಗದ ಬುರ್ಜ್ ಖಲೀಫಾವನ್ನು ಕಟ್ಟಿ ಕೂರಿಸಿದ್ದು ಹೈದಾರ್ ಕನ್‌ಸಲ್‌ಟೆನ್ಸಿ ತಂಡ. ಇದರಲ್ಲಿ ಯುಕೆ, ಅಮೆರಿಕ,ಸ್ವಿಜರ್‌ಲ್ಯಾಂಡ್ ದೇಶಗಳ ಎಂಜಿನಿಯರ್‌ಗಳು ಸೇರಿದಂತೆ ಕೇರಳದ 8 ಮಂದಿಯ ಜತೆಯಲ್ಲಿ ಕುಡ್ಲದ ಸಂದೀಪ್ ಏಕೈಕ ಎಂಜಿನಿಯರ್.

Share