ಕುಡ್ಲ ಸಿಟಿಯ ಎತ್ತರದ ಕೂಳೂರು ಚರ್ಚ್

ಮಂಗಳೂರು ಸಿಟಿಯೊಳಗಿನ ಚರ್ಚ್‌ಗಳಲ್ಲಿ ಸಂತ ಅಂತೋನಿ ಚರ್ಚ್ ಕೂಳೂರು ಸಾಕಷ್ಟು ವಿಶೇಷತೆಯನ್ನು ಒಳಗೊಂಡಿದೆ. ನಗರ ಪ್ರದೇಶದೊಳಗೆ ಎತ್ತರದಲ್ಲಿ ಇರುವ ಚರ್ಚ್‌ನಲ್ಲಿ ಇದು ಮೊದಲ ಸ್ಥಾನದಲ್ಲಿ ನಿಲ್ಲುತ್ತದೆ. ಮುಖ್ಯವಾಗಿ ಹಳೆಯ ಕಾಲದಲ್ಲಿ ಕೂಳೂರು ಅಸುಪಾಸಿನಲ್ಲಿ ಮಳೆಗಾಲದಲ್ಲಿ ನೀರು ನಿಲ್ಲುವಂತಹ ಸಮಯದಲ್ಲಿ ಈ ಚರ್ಚ್ ಎಲ್ಲರಿಗೂ ಉಳಿಯಲು ನೆರವಾಗುತ್ತಿತ್ತು. ಇದರ ಜತೆಗೆ ಈ ಚರ್ಚ್‌ಗೆ ಹೋಗಿ ನಿಂತು ನೋಡಿದರೆ ಮಂಗಳೂರು ಸುಂದರವಾದ ನೋಟವನ್ನು ಸವಿಯಬಹುದು. ಅಂದಹಾಗೆ ಕೂಳೂರು ಹಳೆಯ ಚರ್ಚ್ ಕಟ್ಟಡ ಹಾಗೂ ಹೊಸ ಕಟ್ಟಡ ಎರಡು ಕೂಡ ಅದ್ಭುತವಾದ ಕಲಾ ಶೈಲಿಯನ್ನು ಒಳಗೊಂಡಿದೆ.

Share