Kudla City

ಅಷ್ಟಮಿಗೆ ಫ್ಲೆಕ್ಸ್ ಶಾಸಕರ ಹೊಸ ಕಲ್ಪನೆ

ಕುಡ್ಲಸಿಟಿಯ ನಿರಂತರ ಅಭಿಯಾನಕ್ಕೆ ಮಂಗಳೂರು ದಕ್ಷಿಣ ಶಾಸಕ ಡಿ. ವೇದವ್ಯಾಸ ಕಾಮತ್ ಪೂರ್ಣ ರೂಪದ ಬೆಂಬಲ ಸೂಚಿಸುವ ಮೂಲಕ ಮಂಗಳೂರಿನಲ್ಲಿ ಇನ್ನು ತಮ್ಮ ಯಾವುದೇ ಬ್ಯಾನರ್ ಬಿದ್ದರೂ ಕೂಡ ಅದು ಪ್ಲಾಸ್ಟಿಕ್ ಬದಲು ಬಟ್ಟೆಯ ಫ್ಲೆಕ್ಸ್ ಹಾಕುವ ನಿರ್ಧಾರಕ್ಕೆ ಬಂದಿದ್ದಾರೆ.

ಈ ಹಿಂದೆ ಕುಡ್ಲ ಸಿಟಿ ಜವಾಬ್ದಾರಿಯುತ ಶಾಸಕರ‌ ಅಭಿಮಾನಿಗಳು ಫ್ಲೆಕ್ಸ್ ಹಾಕುವ ಮೂಲಕ ತಮ್ಮ ಅಭಿಮಾನವನ್ನು ಮೆರೆದಿರುವ ವಿಚಾರದಲ್ಲಿ ಶಾಸಕರ ಗಮನಕ್ಕೆ ಸಾಮಾಜಿಕ ಜಾಲತಾಣದ ಮಾಹಿತಿ ಹಂಚಲಾಗಿತ್ತು.

ಸಾರ್ವಜನಿಕರು ನೀವು ಮಾಡುತ್ತಿರುವ ಕೆಲಸ ಸರಿಯಲ್ಲ ಎಂದು ಕರೆ,ಸಾಮಾಜಿಕ ಜಾಲತಾಣದಲ್ಲಿ ಅಭಿಪ್ರಾಯ ಮಂಡಿಸಿದ ಬಳಿಕ ಸುಧಾರಿಸಿಕೊಂಡ ಅಭಿಮಾನಿಗಳು ಫ್ಲೆಕ್ಸ್ ತೆರವು ಮಾಡುವ‌‌ ಮೂಲಕ ಗಮನ ಸೆಳೆದಿದ್ದರು. ಈಗ ಪ್ರಧಾನಿ ಅವರ ಮಾತಿನಂತೆ‌ ನಡೆದುಕೊಳ್ಳುವ ಕಾರ್ಯವಾಗುತ್ತಿದೆ. ಜೈ ಮೋದಿಜೀ

ಅಷ್ಟಮಿಗೆ ಮಕ್ಕಳ ಪಾಲಿನ ದೇವರಾದ ರವಿಯಣ್ಣ

ಕಟಪಾಡಿಯ ಸಾಮಾನ್ಯ ಒಬ್ಬ ಗಾರೆ ಕೆಲಸದ ರವಿಯಣ್ಣ ಜಾಸ್ತಿ ಓದಿದವರಲ್ಲ ದೊಡ್ಡ ಹೇಳಿಕೊಳ್ಳುವ ಕೆಲಸನೂ ಇಲ್ಲ ಆದರೆ ಕಳೆದ ಐದು ವರ್ಷದಲ್ಲಿ ಅಷ್ಟಮಿಯಲ್ಲಿ ಭಿನ್ನವಾದ ವೇಷ ಹಾಕಿಕೊಂಡು ಅನಾರೋಗ್ಯ ಪೀಡಿತ ಮಕ್ಕಳ ಚಿಕಿತ್ಸೆ ಗೆ ನೆರವಾಗುವ ವಿಚಾರ ಇದೆಯಲ್ಲ ಅದು ಎಂದಿಗೂ ಸಣ್ಣ ಮಾತೇ ಅಲ್ಲ. ಈ ಬಾರಿ ದೀ ವ್ಯಾಂಪರ್ಸ್ ವೇಷದಲ್ಲಿ ಉಡುಪಿಯಲ್ಲಿ ಎರಡು ದಿನ ಕಾಣಿಸಿಕೊಳ್ಳಲಿದ್ದಾರೆ ಅವರಿಗೆ ಬೆನ್ನು ತಟ್ಟುವ ಕೆಲಸ ವಾಗಲಿ.

ಕಳೆದ ಐದು ವರ್ಷಗಳಲ್ಲಿ ಸಂಗ್ರಹಿಸಿದ ಒಟ್ಟು 35ಲಕ್ಷ ರೂ. ಹಣವನ್ನು 29 ಬಡ ಮಕ್ಕಳ ಚಿಕಿತ್ಸೆಗೆ ನೀಡಲಾಗಿದೆ. ಅದೇ ರೀತಿ ಈ ವರ್ಷವೂ ಕೂಡ ರವಿ ಮತ್ತು ಫ್ರೆಂಡ್ಸ್ ಕಟಪಾಡಿ ತಂಡ ಆ ಕಾರ್ಯ ಕ್ಕೆ ಮುಂದಾಗುತ್ತಿದೆ. ಲೀವರ್ ಕ್ಯಾನ್ಸರ್ನಿಂದ ಬಳಲುತ್ತಿರುವ ಮಂದರ್ತಿ ಮೂಡುಬಾರಳಿಯ ಕುಶಲ ಮತ್ತು ಉಷಾ ದಂಪತಿಯ ಮಗ ಶ್ರೀತನ್(3), ಬಳಿರಕ್ತ ಕಣ ಉತ್ಪತ್ತಿ ಯಾಗದ ಕಾಯಿಲೆಯಿಂದ ಬಳಲುತ್ತಿರುವ ಕುಂದಾಪುರ ವಕ್ವಾಡಿಯ ರವೀಂದ್ರ ಮತ್ತು ಯಶೋಧ ದಂಪತಿಯ ಮಗ ಪ್ರಥಮ್(5), ಮೆದಳಿನ ರಕ್ತಸ್ರಾವ ಕಾಯಿಲೆಗೆ ತುತ್ತಾಗಿರುವ ಹಿರಿಯಡಕ ಪಂಚನಬೆಟ್ಟು ಕೃಷ್ಣಮೂರ್ತಿ ಆಚಾರ್ಯ ಮತ್ತು ಕುಶಲ ದಂಪತಿಯ ಮಗ ಕಿರಣ್(18) ಸೇರಿದಂತೆ ಐದು ಮಕ್ಕಳ ಚಿಕಿತ್ಸೆ ಸಹಾಯ ಮಾಡಲಾಗುತ್ತದೆ. ಸಂಗ್ರಹವಾದ ಹಣವನ್ನು ಸೆ.3ರಂದು ಸಂಜೆ 5ಗಂಟೆಗೆ ಕಟಪಾಡಿ ಸಾರ್ವ ಜನಿಕ ಶ್ರೀಗಣೇಶೋತ್ಸವ ವೇದಿಕೆ ಯಲ್ಲಿ‌‌ ನೀಡಲಾಗುತ್ತದೆ.

ಕುಡ್ಲದ ಈ ಕಾಲೇಜಿನಲ್ಲಿ ಅಷ್ಟಮಿ ಹುಲಿವೇಷ ಗ್ಯಾರಂಟಿ !

ಕರಾವಳಿಗೆ ಹುಲಿವೇಷ ಹೊಸತು ಏನೂ ಅಲ್ಲ. ಆದರೆ ಅಷ್ಟಮಿಗೆ ಇಲ್ಲಿನ ವಿದ್ಯಾರ್ಥಿಗಳೇ ಹುಲಿವೇಷ ಹಾಕಿಕೊಂಡು ಭರ್ಜರಿಯಾಗಿ ಸ್ಟೆಪ್ ಹಾಕುವ ಮೂಲಕ ಹೊಸ ದಾಖಲೆಯನ್ನು ಕಳೆದ ಕೆಲವು ವರ್ಷಗಳಿಂದ ಮಾಡುತ್ತಾ ಬರುತ್ತಿದ್ದಾರೆ. ಹೌದು. ಇದು ಮಂಗಳೂರಿನ ಪಾಂಡೇಶ್ವರದಲ್ಲಿರುವ ಶ್ರೀನಿವಾಸ್ ಕಾಲೇಜಿನ ವಿದ್ಯಾರ್ಥಿಗಳ ಮಾತು.

ಬಿಜಿಎಸ್‌ನಲ್ಲಿ ಕೃಷ್ಣ ಲೀಲೆಗಳ ನಂದ ಗೋಕುಲ

ಕಾವೂರಿನ ಬಿಜಿಎಸ್ ವಿದ್ಯಾ ಸಂಸ್ಥೆಯ ಪ್ರತಿಯೊಂದು ಭಾರತೀಯ ಹಬ್ಬಗಳನ್ನು ತುಂಬಾ ಸಂಭ್ರಮದಿಂದ ಆಚರಣೆ ಮಾಡುತ್ತಿದೆ. ಅದರಲ್ಲೂ ನಾಗರಪಂಚಮಿ, ರಕ್ತಬಂಧನ ಈಗ ಕೃಷ್ಣ ಜನ್ಮಾಷ್ಟಮಿಯನ್ನು ಕೂಡ ವಿಶೇಷವಾಗಿ ಆಚರಣೆ ಮಾಡಲಾಗಿದೆ.
ಬಿಜಿಎಸ್ ಶಿಕ್ಷಣ ಸಂಸ್ಥೆಯ ಪುಟಾಣಿ ವಿದ್ಯಾರ್ಥಿಗಳು ಕೃಷ್ಣ ಲೀಲೆಗಳ ಪ್ರದರ್ಶನದ ಮೂಲಕ ಸಂಸ್ಥೆಯ ಆವರಣವನ್ನು ನಂದಗೋಕುಲ ಮಾಡಿದ್ದಾರೆ. ಕಾವೂರು ಗಾಂಧಿನಗರದಲ್ಲಿರುವ ಶ್ರೀ ಆದಿಚುಂಚನಗಿರಿ ಶಾಖಾ ಮಠದ ಉಸ್ತುವಾರಿ ಹೊತ್ತಿರುವ ಶ್ರೀಧರ್ಮಪಾಲನಾಥ ಸ್ವಾಮೀಜಿ ಅವರ ಮಾರ್ಗದರ್ಶನದಲ್ಲಿ ಸಂಸ್ಥೆ ಉತ್ತಮ ಶೈಕ್ಷಣಿಕ ಸಂಸ್ಥೆಯ ಜತೆಯಲ್ಲಿ ವಿದ್ಯಾರ್ಥಿಗಳಲ್ಲಿ ದೇಶಿಯ ಮೌಲ್ಯವನ್ನು ಬಿತ್ತುವ ಕಾರ‍್ಯವನ್ನು ಮಾಡುತ್ತಿದೆ.

ಕುಡ್ಲ ಸಿಟಿ ಇಂಪ್ಯಾಕ್ಟ್: ‘ಫ್ಲೆಕ್ಸ್’ ಶಾಸಕರ ಅಭಿಮಾನಿಗಳಿಂದ ತೆರವು

ಕುಡ್ಲ ಸಿಟಿಯಲ್ಲಿ ಆ.19ರಂದು ‘ಫ್ಲಾಸ್ಟಿಕ್ ಮುಕ್ತ ಕುಡ್ಲಕ್ಕೆ ಫ್ಲೆಕ್ಸ್ ಶಾಸಕರ ಕೊಡುಗೆ ಅಪಾರ’ ಎನ್ನುವ ಪೋಸ್ಟ್ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವೈರಲ್ ಆಗಿರುವ ಜತೆಯಲ್ಲಿ ಪರ-ವಿರೋಧಗಳ ಅಲೆಗಳಿಂದ ಮಂಗಳೂರು ದಕ್ಷಿಣ ಶಾಸಕ ಡಿ. ವೇದವ್ಯಾಸ ಕಾಮತ್ ಅವರ ಪರವಾಗಿ ನಗರದ ಉರ್ವ ಸೇರಿದಂತೆ ಕೆಲವು ಭಾಗದಲ್ಲಿ ಹಾಕಲಾಗಿರುವ ಫ್ಲೆಕ್ಸ್‌ವನ್ನು ಆ. 20 ರಂದು ಪೂರ್ಣ ಪ್ರಮಾಣದಲ್ಲಿ ತೆರವಿನ ಮೂಲಕ ನಗರ ಸ್ವಚ್ಛತೆಯಲ್ಲಿ ತಮ್ಮ ಜವಾಬ್ದಾರಿ ಏನೂ ಎನ್ನುವ ಮಾತನ್ನು ಶಾಸಕರ ಜತೆಗೆ ಅಭಿಮಾನಿಗಳು ಕಲಿತುಕೊಂಡಿದ್ದಾರೆ ಎನ್ನುವ ಮಾತು ಈ ತೆರವಿನ ಮೂಲಕ ರುಜುವಾತು ಆಗಿದೆ.

ಜನರಿಂದ ಆಯ್ಕೆಯಾದ ಮಂಗಳೂರಿನ ಶಾಸಕ ಡಿ.ವೇದವ್ಯಾಸ ಕಾಮತ್ ಅವರು ಇತರರಿಗೆ ಮಾದರಿಯಾಗಬೇಕು ಎನ್ನುವ ಸಂದೇಶ ನೀಡಲು ಹೊರಟ ಕುಡ್ಲಸಿಟಿಯ ಕಾಳಜಿ ಗೆದ್ದಿದೆ ಎನ್ನುವುದು ಇದರಿಂದ ಸಾಬೀತಾಗಿದೆ. ಇದರ ಜತೆಯಲ್ಲಿ ನಗರದ ಕೆಲವು ಭಾಗದಲ್ಲಿ ಹಬ್ಬಕ್ಕೆ, ಸಾವಿಗೂ ಫ್ಲೆಕ್ಸ್ ಹಾಕಿ ಗಮನ ಸೆಳೆಯುವ ಕಾರ‍್ಯಕ್ಕೆ ಶಾಸಕರು ಬುನಾದಿ ಹಾಕುವ ಮೂಲಕ ಮತ್ತಷ್ಟು ಸಮಸ್ಯೆಗೆ ಕಾಮತ್ ಅವರ ಅಭಿಮಾನಿಗಳು ಕಾರಣವಾಗುತ್ತಿರುವುದು ಬುದ್ದಿವಂತ ಕುಡ್ಲದ ಜನರಿಗೆ ಸಮಸ್ಯೆಯಾಗಿದೆ.

ಈ ಕುರಿತು ಈಗಾಗಲೇ ಮಹಾನಗರ ಪಾಲಿಕೆಯ ಜತೆಯಲ್ಲಿ ಇತರ ಅಧಿಕಾರಿ, ಇಲಾಖೆಗಳು ಎಚ್ಚರಗೊಳ್ಳದೇ ಹೋದರೆ ಕುಡ್ಲ ಸಿಟಿಯಲ್ಲಿ ಮತ್ತೆ ಫ್ಲೆಕ್ಸ್ ಸಂಸ್ಕೃತಿ ಗೆಲ್ಲುವ ಸಾಧ್ಯತೆಯಿದೆ.