ಕಟಪಾಡಿಯ ಸಾಮಾನ್ಯ ಒಬ್ಬ ಗಾರೆ ಕೆಲಸದ ರವಿಯಣ್ಣ ಜಾಸ್ತಿ ಓದಿದವರಲ್ಲ ದೊಡ್ಡ ಹೇಳಿಕೊಳ್ಳುವ ಕೆಲಸನೂ ಇಲ್ಲ ಆದರೆ ಕಳೆದ ಐದು ವರ್ಷದಲ್ಲಿ ಅಷ್ಟಮಿಯಲ್ಲಿ ಭಿನ್ನವಾದ ವೇಷ ಹಾಕಿಕೊಂಡು ಅನಾರೋಗ್ಯ ಪೀಡಿತ ಮಕ್ಕಳ ಚಿಕಿತ್ಸೆ ಗೆ ನೆರವಾಗುವ ವಿಚಾರ ಇದೆಯಲ್ಲ ಅದು ಎಂದಿಗೂ ಸಣ್ಣ ಮಾತೇ ಅಲ್ಲ. ಈ ಬಾರಿ ದೀ ವ್ಯಾಂಪರ್ಸ್ ವೇಷದಲ್ಲಿ ಉಡುಪಿಯಲ್ಲಿ ಎರಡು ದಿನ ಕಾಣಿಸಿಕೊಳ್ಳಲಿದ್ದಾರೆ ಅವರಿಗೆ ಬೆನ್ನು ತಟ್ಟುವ ಕೆಲಸ ವಾಗಲಿ.
ಕಳೆದ ಐದು ವರ್ಷಗಳಲ್ಲಿ ಸಂಗ್ರಹಿಸಿದ ಒಟ್ಟು 35ಲಕ್ಷ ರೂ. ಹಣವನ್ನು 29 ಬಡ ಮಕ್ಕಳ ಚಿಕಿತ್ಸೆಗೆ ನೀಡಲಾಗಿದೆ. ಅದೇ ರೀತಿ ಈ ವರ್ಷವೂ ಕೂಡ ರವಿ ಮತ್ತು ಫ್ರೆಂಡ್ಸ್ ಕಟಪಾಡಿ ತಂಡ ಆ ಕಾರ್ಯ ಕ್ಕೆ ಮುಂದಾಗುತ್ತಿದೆ. ಲೀವರ್ ಕ್ಯಾನ್ಸರ್ನಿಂದ ಬಳಲುತ್ತಿರುವ ಮಂದರ್ತಿ ಮೂಡುಬಾರಳಿಯ ಕುಶಲ ಮತ್ತು ಉಷಾ ದಂಪತಿಯ ಮಗ ಶ್ರೀತನ್(3), ಬಳಿರಕ್ತ ಕಣ ಉತ್ಪತ್ತಿ ಯಾಗದ ಕಾಯಿಲೆಯಿಂದ ಬಳಲುತ್ತಿರುವ ಕುಂದಾಪುರ ವಕ್ವಾಡಿಯ ರವೀಂದ್ರ ಮತ್ತು ಯಶೋಧ ದಂಪತಿಯ ಮಗ ಪ್ರಥಮ್(5), ಮೆದಳಿನ ರಕ್ತಸ್ರಾವ ಕಾಯಿಲೆಗೆ ತುತ್ತಾಗಿರುವ ಹಿರಿಯಡಕ ಪಂಚನಬೆಟ್ಟು ಕೃಷ್ಣಮೂರ್ತಿ ಆಚಾರ್ಯ ಮತ್ತು ಕುಶಲ ದಂಪತಿಯ ಮಗ ಕಿರಣ್(18) ಸೇರಿದಂತೆ ಐದು ಮಕ್ಕಳ ಚಿಕಿತ್ಸೆ ಸಹಾಯ ಮಾಡಲಾಗುತ್ತದೆ. ಸಂಗ್ರಹವಾದ ಹಣವನ್ನು ಸೆ.3ರಂದು ಸಂಜೆ 5ಗಂಟೆಗೆ ಕಟಪಾಡಿ ಸಾರ್ವ ಜನಿಕ ಶ್ರೀಗಣೇಶೋತ್ಸವ ವೇದಿಕೆ ಯಲ್ಲಿ ನೀಡಲಾಗುತ್ತದೆ.