ಪಿಲಿಕುಳದ ‘ರಾಣಿ’ಗೆ ಐದು ಮರಿಗಳು ! ಮಂಗಳೂರು: ಪಿಲಿಕುಳ ನಿಸರ್ಗಧಾಮದಲ್ಲಿರುವ ೮ ವರ್ಷದ ರಾಣಿ ಎನ್ನುವ ಹೆಣ್ಣು ಹುಲಿ ಮುದ್ದಾದ 3 ಹೆಣ್ಣು ಹಾಗೂ 2 ಗಂಡು ಮರಿಗಳಿಗೆ ಜನ್ಮ ನೀಡಿದೆ.
ಕೆಲವು ದಿನಗಳ ಹಿಂದೆಯಷ್ಟೇ ರಾಣಿ ಮರಿ ಹಾಕಿದ್ದು, ಎಲ್ಲ ಮರಿಗಳು ಆರೋಗ್ಯವಾಗಿವೆ. ಅವುಗಳಿಗೆ ಸೋಂಕು ಉಂಟಾಗದಂತೆ ಎಚ್ಚರಿಕೆ ವಹಿಸಲಾಗುತ್ತಿದ್ದು, ತಾಯಿ-ಮರಿಗಳನ್ನು ಬೋನಿನಲ್ಲಿಡಲಾಗಿದೆ. ಸದ್ಯ ಸಾರ್ವಜನಿಕರ ವೀಕ್ಷಣೆಗೆ ಅವಕಾಶ ಇರುವುದಿಲ್ಲ. 2-3 ತಿಂಗಳ ಬಳಿಕ ಅವುಗಳಿಗೆ ಚುಚ್ಚು ಮದ್ದು- ಲಸಿಕೆ ನೀಡಿ ಆರೋಗ್ಯ ಪರಿಶೀಲಿಸಿದ ಬೋನಿನಿಂದ ಹೊರ ಬಿಡಲಾಗುವುದು ಎಂದು ಪಿಲಿಕುಳದ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ರಾಣಿಯನ್ನು ಮೂರು ವರ್ಷಗಳ ಹಿಂದೆ ಬನ್ನೇರುಘಟ್ಟದಿಂದ ತರಲಾಗಿತ್ತು. ಸದ್ಯ ಮರಿಗಳು ತಾಯಿಯ ಹಾಲನ್ನಷ್ಟೇ ಸೇವಿಸುತ್ತಿದ್ದು, ಕೆಲವೇ ದಿನಗಳಲ್ಲಿ ಮಾಂಸಾಹಾರ ನೀಡಲಾ ಗುತ್ತದೆ. 3 ವರ್ಷಗಳ ಬಳಿಕ ಮರಿಗಳನ್ನು ಬೇರೆ ಮೃಗಾಲಯಗಳಿಗೆ ಕಳು ಹಿಸುವ ಯೋಚನೆಯಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
Kudla City
ಪರಿಸರ ಸ್ನೇಹಿ ಗಣಪನಿಗೆ ಮೊದಲ ವಂದನೆ
ಇತ್ತೀಚಿನ ಕೆಲ ವರ್ಷಗಳಿಂದ ಪರಿಸರ ಸ್ನೇಹಿ ಗಣಪನ ಮೂರ್ತಿಗಳಿಗೆ ಬೇಡಿಕೆ ಹೆಚ್ಚಿದ್ದು, ಇದಕ್ಕೆ ಪೂರಕವಾಗಿ ಇಂತಹ ಗಣೇಶ ವಿಗ್ರಹಗಳಲ್ಲೂ ವೈವಿಧ್ಯತೆ ಕಾಣ ಸಿಗುತ್ತದೆ.
ಮಂಗಳೂರಿನ ಪಕ್ಷಿಕೆರೆಯ ನಿತಿನ್ ವಾಸ್ ಪರಿಸರ ಪೂರಕ ಗಣಪತಿ ಮೂರ್ತಿಯನ್ನು ರಚಿಸುವ ಮೂಲಕ ಗಮನ ಸೆಳೆಯುತ್ತಿದ್ದಾರೆ. ಅವರು ಗಣಪತಿ ಮೂರ್ತಿ ರಚನೆಗೆ ಬಳಸುವುದು ಪರಿಸರ ಸ್ನೇಹಿ ಕಾಗದದ ತಿರುಳು ಮತ್ತು ಬೀಜಗಳನ್ನು. ಇವು ನೀರಿನಲ್ಲಿ ಸುಲಭವಾಗಿ ಕರಗಿ ಹೋಗುತ್ತವೆ, ಹೊರತು ಪ್ರಕೃತಿಗೆ ಮಾರಕವಲ್ಲ.
ಈ ಮೂರ್ತಿಗಳ ರಚನೆಗೆ ನಾನು ಪರಿಸರಕ್ಕೆ ಮಾರಕವಾದ ಯಾವುದೇ ವಸ್ತುಗಳನ್ನು ಬಳಸುವುದಿಲ್ಲ. ಈ ಮೂರ್ತಿಗಳನ್ನು ವಿಸರ್ಜಿಸಿದ ಬಳಿಕ ಬಳಸಲಾಗಿರುವ ಬೀಜಗಳು , ಗಿಡವಾಗಿ ಬೆಳೆಯಬಲ್ಲವು ಎನ್ನುತ್ತಾರೆ ನಿತಿನ್. ಕೇವಲ ಗಣೇಶ ವಿಗ್ರಹ ಅಷ್ಟೇ ಅಲ್ಲ, ಪರಿಸರ ಪ್ರೇಮಿ ನಿತಿನ್ ಗಿಡವಾಗಿ ಅರಳುವ ತ್ರಿವರ್ಣ ಧ್ವಜ, ಪೆನ್ಸಿಲ್, ಪೇಪರ್ ಪೆನ್‌ಗಳನ್ನು ತಯಾರಿಸಿ ಕೂಡ ಗಮನ ಸೆಳೆದಿದ್ದಾರೆ.
ಮೊಂತಿ ಹಬ್ಬಕ್ಕೆ ಮಕ್ಕಳ ಪುಷ್ಪ ನಮನ
ಕರಾವಳಿಯ ಕ್ರೈಸ್ತ ಹಬ್ಬಗಳಲ್ಲಿ ವಿಶೇಷವಾಗಿ ಮೊಂತಿ ಹಬ್ಬ(ತೆನೆ ಹಬ್ಬ)ಕ್ಕೆ ವಿಶೇಷವಾದ ಮನ್ನಣೆಯಿದೆ. ಈ ಬಾರಿ ಆಗಸ್ಟ್ 30 ರಿಂದ ಸೆಪ್ಟೆಂಬರ್7ರ ವರೆಗೆ ನೊವೆನಾ ಜತೆಯಲ್ಲಿ ಕನ್ಯಾ ಮರಿಯಮ್ಮರಿಗೆ ಪುಷ್ಪ ನಮನವಂತೂ ವಿಶೇಷವಾಗಿರುತ್ತದೆ.
ಕುರಲ್ ಹಬ್ಬ, ತೆನೆ ಹಬ್ಬ, ಮೊಂತಿ ಹಬ್ಬ ಎನ್ನುವ ನಾನಾ ಹೆಸರಿನಲ್ಲಿ ಗುರುತಿಸುವ ಹಬ್ಬದ ವಿಶೇಷತೆ ಎಂದರೆ ಪೂರ್ಣ ಸಸ್ಯಹಾರ ಈ ಹಬ್ಬದ ವಿಶೇಷತೆ. ಕರಾವಳಿಯ ಕ್ರೈಸ್ತರು ಈ ಹಬ್ಬವನ್ನು ತುಳುವರ ಹಬ್ಬ( ಚೌತಿ)ಯಿಂದ ಪ್ರೇರಣೆ ಪಡೆದುಕೊಂಡು ಮಾಡುತ್ತಿದ್ದಾರೆ ಎನ್ನುವುದು ಈ ಹಬ್ಬದ ಇತಿಹಾಸ.
ಕುಡ್ಲದ ಮೊದಲ ರಿಕ್ಷಾ ಚಾಲಕಿ ವಿಜಯಕ್ಕ !
ಸುರತ್ಕಲ್ ಪಾರ್ಕ್‌ನಲ್ಲಿ ಸುಮಾರು 10 ವರ್ಷದಿಂದ ರಿಕ್ಷಾ ಚಲಾಯಿಸುತ್ತಿದ್ದ ಹೊಸಬೆಟ್ಟು ನಿವಾಸಿ ದಿ.ಎಚ್.ಟಿ.ಮೂರ್ತಿ ಅವರ ಪತ್ನಿ ಈ ವಿಜಯಲಕ್ಷ್ಮಿ. ಅವರದ್ದು ಬಡ ಕುಟುಂಬ ಬಾಡಿಗೆ ಮನೆಯಲ್ಲಿ ವಾಸ. ಇಬ್ಬರು ಮಕ್ಕಳಿದ್ದಾರೆ.
ಪತಿ ಇತ್ತೀಚೆಗೆ ಹೃದಯಾಘಾತದಿಂದ ನಿಧನರಾಗಿದ್ದರು. ಅವರು ತಾನು ನಿಧನರಾಗುವ ಮೊದಲೇ ಪತ್ನಿಗೆ ರಿಕ್ಷಾ ಚಲಾಯಿಸಲು ಕಲಿಸಿ, ಲೈಸನ್ಸ್ ಕೂಡಾ ಮಾಡಿಸಿಕೊಟ್ಟಿದ್ದರು. ಈಗ ರಿಕ್ಷಾದ ಮೂಲಕ ವಿಜಯಕ್ಕ ಬದುಕು ಕಟ್ಟುತ್ತಿದ್ದಾರೆ.
ರಿಕ್ಷಾ ಬಿಡುವ ಪುರುಷರ ನಡುವೆ ಇಂತಹ ಕ್ಷೇತ್ರದಲ್ಲಿ ವಿಜಯಕ್ಕ ನೆಲೆ ನಿಂತಿರೋದು ಮಾತ್ರ ಖುಷಿಯ ವಿಚಾರ. ವಿಜಯಕ್ಕನ ಬದುಕು ಈ ರಿಕ್ಷಾದಿಂದ ಗಟ್ಟಿಯಾದರೆ ಸಾವಿರಾರು ಮಹಿಳೆಯರು ಇಂತಹ ಕೆಲಸಕ್ಕೆ ಮುಂದಾಗುತ್ತಾರೆ.
ಕುಡ್ಲದ ಸಿಟಿ ಬಸ್ ನಲ್ಲಿ ಟಿಕೇಟ್ ಇಲ್ಲದೇ ಫ್ರಿಯಾಗಿ ಪ್ರಯಾಣಿಸಿ
ಕುಡ್ಲದ ಸಿಟಿ ಬಸ್‌ನಲ್ಲಿ ಪ್ರಯಾಣಿಸುವವರ ಗಮನಕ್ಕೆ ಸೆಪ್ಟೆಂಬರ್ ಒಂದರಿಂದ ಸಿಟಿ ಬಸ್ ನಲ್ಲಿ ಪ್ರಯಾಣ ಮಾಡುವಾಗ ಕಂಡಕ್ಟರ್ ಟಿಕೆಟ್ ನೀಡದೇ ಇದ್ದರೆ ನೀವು ಫ್ರಿಯಾಗಿ ಈ ಬಸ್ ನಲ್ಲಿ ಪ್ರಯಾಣ ಬೆಳೆಸಬಹುದು ಇಂತಹ ಹೊಸ ಯೋಜನೆಯನ್ನು ಮಂಗಳೂರು ಸಿಟಿ ಬಸ್ ಮಾಲೀಕರ ಸಂಘ ಹಮ್ಮಿಕೊಳ್ಳುತ್ತಿದೆ. ಕಂಡಕ್ಟರ್ ಟಿಕೇಟ್ ಪ್ರಯಾಣಿಕರಿಗೆ ನೀಡಬೇಕು ಎಂದು ಎಷ್ಟು ಬಾರಿ ಹೇಳಿದ್ರು ಸಂಬಂಧಪಟ್ಟ ಜನರು ಕೇಳಿಸದ ಪರಿಣಾಮವಾಗಿ ಈ ಯೋಜನೆ ಜಾರಿಗೆ ಬರುತ್ತಿದೆ.
ಅಂದಹಾಗೆ ಸ್ಟೇಟ್ ಬ್ಯಾಂಕ್ ನಿಂದ ತಲಪಾಡಿ 27, ಸ್ಟೇಟ್‌ಬ್ಯಾಂಕ್- ಮಂಗಳಾದೇವಿಯ 5 ಹಾಗೂ ಸ್ಟೇಟ್ ಬ್ಯಾಂಕ್ ನಿಂದ ಉಳ್ಳಾಲ ಕಡೆ ಸಾಗುವ 13 ಬಸ್ ಗಳಲ್ಲಿ ಈ ಅವಕಾಶ ಸಿಗಲಿದೆ. ಪ್ರಯಾಣಿಕರು ಈ ಅವಕಾಶವನ್ನು ಬಳಸಿಕೊಳ್ಳುವ ಮೂಲಕ ಕಂಡಕ್ಟರ್ ಗೆ ಬುದ್ದಿ ಕಲಿಸಬಹುದು ಎನ್ನುವುದು ಸಂಘದ ಹಿಂದಿರುವ ಉದ್ದೇಶ.