ಪರಿಸರ ಸ್ನೇಹಿ ಗಣಪನಿಗೆ ಮೊದಲ ವಂದನೆ

ಇತ್ತೀಚಿನ ಕೆಲ ವರ್ಷಗಳಿಂದ ಪರಿಸರ ಸ್ನೇಹಿ ಗಣಪನ ಮೂರ್ತಿಗಳಿಗೆ ಬೇಡಿಕೆ ಹೆಚ್ಚಿದ್ದು, ಇದಕ್ಕೆ ಪೂರಕವಾಗಿ ಇಂತಹ ಗಣೇಶ ವಿಗ್ರಹಗಳಲ್ಲೂ ವೈವಿಧ್ಯತೆ ಕಾಣ ಸಿಗುತ್ತದೆ.
ಮಂಗಳೂರಿನ ಪಕ್ಷಿಕೆರೆಯ ನಿತಿನ್ ವಾಸ್ ಪರಿಸರ ಪೂರಕ ಗಣಪತಿ ಮೂರ್ತಿಯನ್ನು ರಚಿಸುವ ಮೂಲಕ ಗಮನ ಸೆಳೆಯುತ್ತಿದ್ದಾರೆ. ಅವರು ಗಣಪತಿ ಮೂರ್ತಿ ರಚನೆಗೆ ಬಳಸುವುದು ಪರಿಸರ ಸ್ನೇಹಿ ಕಾಗದದ ತಿರುಳು ಮತ್ತು ಬೀಜಗಳನ್ನು. ಇವು ನೀರಿನಲ್ಲಿ ಸುಲಭವಾಗಿ ಕರಗಿ ಹೋಗುತ್ತವೆ, ಹೊರತು ಪ್ರಕೃತಿಗೆ ಮಾರಕವಲ್ಲ.
ಈ ಮೂರ್ತಿಗಳ ರಚನೆಗೆ ನಾನು ಪರಿಸರಕ್ಕೆ ಮಾರಕವಾದ ಯಾವುದೇ ವಸ್ತುಗಳನ್ನು ಬಳಸುವುದಿಲ್ಲ. ಈ ಮೂರ್ತಿಗಳನ್ನು ವಿಸರ್ಜಿಸಿದ ಬಳಿಕ ಬಳಸಲಾಗಿರುವ ಬೀಜಗಳು , ಗಿಡವಾಗಿ ಬೆಳೆಯಬಲ್ಲವು ಎನ್ನುತ್ತಾರೆ ನಿತಿನ್. ಕೇವಲ ಗಣೇಶ ವಿಗ್ರಹ ಅಷ್ಟೇ ಅಲ್ಲ, ಪರಿಸರ ಪ್ರೇಮಿ ನಿತಿನ್ ಗಿಡವಾಗಿ ಅರಳುವ ತ್ರಿವರ್ಣ ಧ್ವಜ, ಪೆನ್ಸಿಲ್, ಪೇಪರ್ ಪೆನ್‌ಗಳನ್ನು ತಯಾರಿಸಿ ಕೂಡ ಗಮನ ಸೆಳೆದಿದ್ದಾರೆ.

Share