ಮಂಗಳೂರಿನ ಹುಡುಗ ಕಣ್ಣನೂರು ಲೋಕೇಶ್ ರಾಹುಲ್ ವಿಶ್ವಕಪ್ ಕ್ರಿಕೆಟ್ ಟೂರ್ನಿಯ ಶ್ರೀಲಂಕಾ ವಿರುದ್ಧದ ಪಂದ್ಯದಲ್ಲಿ 111 ರನ್ ಗಳನ್ನು ಸಿಡಿಸುವ ಮೂಲಕ ವಿಶ್ವ ಕಪ್ ನಲ್ಲಿ ತನ್ನ ಮೊದಲ ಶತಕ ದಾಖಲಿಸಿಕೊಂಡರು. ಅವರು ಬೇಸಿಕಲಿ ಮಂಗಳೂರಿನ ಸುರತ್ಕಲ್ ಎನ್ಐಟಿಕೆಯಲ್ಲಿ ಪ್ರೊಫೆಸರ್ ಆಗಿದ್ದ ಕೆ.ಎನ್. ಲೋಕೇಶ್ ಅವರ ಪುತ್ರ. ಸುರತ್ಕಲ್ ಎನ್ಐ ಟಿಕೆಯ ಕ್ರಿಕೆಟ್ ಮೈದಾನದಲ್ಲಿ ಆಡಿದ ಹುಡುಗ ಕೆ.ಎಲ್.ರಾಹುಲ್ ಶತಕದ ಮೂಲಕ ವಿಶ್ವಕಪ್ ನಲ್ಲಿ ಭಾರತಕ್ಕೆ ಗೆಲುವಿನ ದಡ ಸೇರಿಸಿದ ಕೀರ್ತಿ ಅವರಿಗೆ ಸಲ್ಲುತ್ತದೆ.
Kudla City
ಮಕ್ಕಳ ಜೋಪಾನಕ್ಕೆ ಬಾಲ್ಕನಿಗೊಂದು ನೆಟ್ ಅಳವಡಿಸಿ
ಫ್ಲ್ಯಾಟ್, ಅಪಾರ್ಟ್‌ಮೆಂಟ್ ಸೇರಿದಂತೆ ಯಾವುದೇ ಬೃಹತ್ ವಸತಿ ಕಟ್ಟಡಗಳು ಇರಲಿ ಅಲ್ಲಿ ದೊಡ್ಡವರ ಜತೆಯಲ್ಲಿ ಮಕ್ಕಳು ಕೂಡ ವಾಸವಾಗಿದ್ದರೆ ಅಂತಹ ಕಟ್ಟಡಗಳಲ್ಲಿ ಸೇಫ್ಟಿ ನೆಟ್ ಅಳವಡಿಸಿಕೊಳ್ಳುವುದು ಬಹಳ ಅವಶ್ಯಕ.
ಪ್ರತಿಯೊಬ್ಬ ಹೆತ್ತವರಿಗೆ ಅವರ ಮಕ್ಕಳು ಎಷ್ಟು ಅಮೂಲ್ಯ ಅವರ ಬದುಕಿನ ಸುರಕ್ಷತೆ, ಭದ್ರತೆಯ ಜವಾಬ್ದಾರಿ ಕೂಡ ಅವರ ಹೆಗಲಿಗಿದೆ ಎನ್ನುವ ವಿಚಾರವನ್ನು ಮರೆಯಕೂಡದು ಈ ಕಾರಣದಿಂದ ಇಂತಹ ಸೇಫ್ಟಿ ನೆಟ್ಸ್‌ಗಳನ್ನು ಅಳವಡಿಸುವ ತಂಡ ಬೆಂಗಳೂರು ಸೇರಿದಂತೆ ಮಂಗಳೂರಿನಲ್ಲೂ ಕೆಲಸ ಮಾಡುತ್ತಿದೆ.
ಬೆಂಗಳೂರಿನ ಯಶವಂತಪುರದಲ್ಲಿರುವ ಮಂಜುನಾಥ ಎಂಟರ್‌ಪ್ರೈಸಸ್‌ನ ಉತ್ಸಾಹಿ ಯುವಕ ಮಂಜುನಾಥ ಅವರ ತಂಡ ಇಂತಹ ಬಾಲ್ಕನಿ ಸೇಫ್ಟಿ ನೆಟ್ಸ್, ಬರ್ಡ್ಸ್ ಪ್ರೊಟೆಕ್ಷನ್ ನೆಟ್ಸ್, ಕೋಕನಟ್ ಸೇಫ್ಟಿ ನೆಟ್ಸ್, ಬಿಲ್ಡಿಂಗ್ ಸೇಫ್ಟಿ ನೆಟ್ಸ್, ಗ್ಲಾಸ್ ಸೇಫ್ಟಿ ನೆಟ್ಸ್, ಸ್ಪೋಟ್ಸ್ ನೆಟ್ಸ್, ಮಂಕಿ ಸೇಫ್ಟಿ ನೆಟ್ಸ್ ಇಂತಹ ನೆಟ್‌ಗಳಲ್ಲಿ ಕಾಣಿಸಿಕೊಳ್ಳುವ ಸಮಸ್ಯೆಗಳ ಪರಿಹಾರ ವಿಚಾರದಲ್ಲಿ ಬಹಳ ತ್ವರಿತವಾಗಿ ನಿಮ್ಮ ಮನೆ ಬಾಗಿಲಿಗೆ ಬಂದು ಅಳವಡಿಸುವ ಕಾರ‍್ಯವನ್ನು ಮಾಡುತ್ತಾರೆ.
ಬೆಂಗಳೂರಿನ ಮೂಲೆ ಮೂಲೆಯಲ್ಲೂ ಇವರ ತಂಡ ಪೂರ್ಣ ಪ್ರಮಾಣದಲ್ಲಿ ದುಡಿಯುತ್ತಿದೆ. ಮಂಜುನಾಥ್ ಅವರನ್ನು ಸಂಪರ್ಕ ಮಾಡಲು 9900827799,9916721019ತಕ್ಷಣ ಕರೆ ಮಾಡಿ ನಿಮ್ಮವರ ಭದ್ರ ಬದುಕಿಗೆ ನೀವೇ ಯೋಚಿಸಿ. ಯಾರು ಮಾಡದಂತಹ ಸಿಂಪಲ್ ಬಜೆಟ್‌ನೊಳಗೆ ನಿಮ್ಮ ಬಾಲ್ಕನಿಗೊಂದು ಹೊಸ ಅರ್ಥ ನೀಡುತ್ತಾರೆ. ಸಿಂಪಲ್ ಬಜೆಟ್ ಬಾಲ್ಕನಿ ಲುಕ್ಸ್ ಸೂಪರ್….
http://www.manjusafetynets.com/
ಕುಡ್ಲದ ಏರ್‌ಫೋರ್ಟ್‌ನಲ್ಲೂ ‘ತುಳು’ ಸಂಸ್ಕೃತಿಯ ಮೆರಗು
ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ತುಳು ನಾಡಿದ ಸಾಂಸ್ಕೃತಿಕ ವೈಭವ ಅನಾವರಣಗೊಂಡಿದ್ದು, ದೇಶ, ವಿದೇಶಗಳ ಪ್ರಯಾಣಿಕರನ್ನು ಆಕರ್ಷಿಸುತ್ತಿದೆ.
ಪ್ರಸಿದ್ಧ ಜನಪದ ಕ್ರೀಡೆ ಕಂಬಳ, ಪಿಲಿನಲಿಕೆ, ಮೀನುಗಾರಿಕೆ ಬೋಟ್, ಕಲಾಕೃತಿಗಳು, ಯಕ್ಷಗಾನದ ಬಣ್ಣದ ವೇಷ ಸೇರಿದಂತೆ ಹಲವು ಜಾನಪದದ ಸೊಗಡನ್ನು ಬಿತ್ತರಿಸುವ ಪ್ರತಿಕೃತಿಗಳು ವಿಮಾನ ನಿಲ್ದಾಣದ ಟರ್ಮಿನಲ್‌ನಲ್ಲಿ ವಿನ್ಯಾಸಗೊಳಿಸಲಾಗಿದೆ.
ವಿಮಾನ ನಿಲ್ದಾಣದಲ್ಲಿ ಅಳವಡಿಸಲಾದ ತುಳುನಾಡಿನ ಸಾಂಸ್ಕೃತಿಕ ವೈಭವವನ್ನು ಸಾರುವ ಪ್ರತಿಕೃತಿಗಳು ಈಗ ಸೆಲ್ಫಿ ಪಾಯಿಂಟ್ ಆಗಿ ಪ್ರಸಿದ್ಧಿ ಪಡೆದಿದೆ. ಅನೇಕ ಮಂದಿ ಪ್ರವಾಸಿಗರು ಕಂಬಳ, ಪಿಲಿನಲಿಕೆ, ಯಕ್ಷಗಾನ ವೇಷಗಳ ಮುಂದೆ ನಿಂತು ಸೆಲ್ಫಿ, ಫೋಟೋ ತೆಗೆಸಿಕೊಂಡು ಸಂಭ್ರಮಿಸ್ತುತಿದ್ದಾರೆ.
tgas: mangalore, airport, tulunadu,costal, culture,kambala, fishery, pilinalike, boat, kudlacity, kudla
ಕುಡ್ಲದಲ್ಲಿರುವ ಆರ್ಮಿ ಫ್ಯಾಮಿಲಿ ಕತೆ
ದೇಶ ಸೇವೆಗೂ ಕುಡ್ಲದ ಮಂದಿಗೂ ಆಗಿ ಬರುವುದಿಲ್ಲ ಎನ್ನುವ ಮಾತೇ ಎಲ್ಲೆಡೆ ಜೋರಾಗಿ ಕೇಳಿ ಬರುತ್ತಿದ್ದಾಗ ಕುಡ್ಲದ ಅರ್ಮಿ ಫ್ಯಾಮಿಲಿಯ ಕತೆ ತುಂಬಾನೇ ವಿಶೇಷವಾಗಿದೆ.
ಒಂದೇ ಫ್ಯಾಮಿಲಿಯ ಎಲ್ಲರೂ ಅರ್ಮಿಯಲ್ಲಿದ್ದಾರೆ. ತಂದೆ, ಮಗ, ಸೊಸೆ, ತಾಯಿ ಎಲ್ಲರೂ ದೇಶಸೇವೆಗೆ ತಮ್ಮ ಭಕ್ತಿಯನ್ನು ಮುಡಿಪಾಗಿಟ್ಟುಕೊಂಡಿದ್ದಾರೆ. ಅದರಲ್ಲಿ ಪುತ್ರ ಯುದ್ದದಲ್ಲಿ ಮೃತಪಡುತ್ತಾನೆ.
ಇದು ಕುಲಶೇಖರದ ಪ್ಲೈಟ್ ಲೆಫ್ಟಿನಂಟ್ ರೊನಾಲ್ಡ್ ಕೇವಿನ್ ಸೆರಾವೋ ಎನ್ನುವ ವೀರ ಯೋಧನ ಕತೆ. ಕುಲಶೇಖರದಲ್ಲಿ ಇವರ ಹೆಸರಿನ ರಸ್ತೆ ಕೂಡ ಇದೆ. ಕೆವಿನ್ ತಂದೆ ಜೋನ್ ಸೆರಾವೋ ಭಾರತೀಯ ಸೇನಾ ಪಡೆಯಲ್ಲಿ ತೋಪು ಪಡೆಯ ಲೆಫ್ಟಿನಂಟ್ ಕರ್ನಲ್ , ಆರ್ಮಿಯಲ್ಲಿ ವೈದ್ಯರಾಗಿ ದುಡಿದ ಡಾ. ಜೆಸ್ಸಿಕಾ ಸೆರಾವೋ, ನಂತರ ಅವರ ಸೊಸೆ ಪ್ಲೈಟ್ ಲೆಫ್ಟಿನಂಟ್ ದೀಪಿಕಾ. ಈ ಕುಟುಂಬದ ಕೇವಿನ್ 2007ರ ಇದೇ ಗಣರಾಜೋತ್ಸವದ ಪೆರೇಟ್‌ನಲ್ಲಿ ಫ್ಲೈ ಪಾಸ್ಟ್ ಏರ್ ಶೋನಲ್ಲಿ ಭಾಗವಹಿಸಲು ಯುದ್ಧ ವಿಮಾನ ಜಾಗ್ವರ್ ನಲ್ಲಿ ಅಭ್ಯಾಸ ನಡೆಸುತ್ತಿದ್ದಾಗ 2007ರಲ್ಲಿ ವೀರಮರಣ ಪಡೆದವರು.
ಕುಡ್ಲದಲ್ಲಿ ಎರಡು ಆರ್ಮಿ ರಸ್ತೆ ! ಭಾರತೀಯ ಸೇನಾ ಪಡೆಯಲ್ಲಿ ವಿಶೇಷವಾದ ಸ್ಥಾನ ಪಡೆದುಕೊಂಡು ಮೃತರಾದ ಎರಡು ಆರ್ಮಿಯ ಆಫೀಸರ್‌ಗಳ ಸವಿನೆನಪಿಗಾಗಿ ಮಂಗಳೂರಿನಲ್ಲಿ ಎರಡು ರಸ್ತೆಗಳನ್ನು ಅವರ ಹೆಸರುಗಳಿಂದ ಕರೆಯಲಾಗುತ್ತಿದೆ.
ಕದ್ರಿಯ ಒಂದು ರಸ್ತೆಯನ್ನು ನೌಕಾ ಪಡೆಯ ಹಿರಿಯ ಅಧಿಕಾರಿ ಮಂಗಳೂರು ಮೂಲದ ಈಗ ದಿವಂಗತ ಜಾನ್ ಮಾರ್ಟಿಸ್ ಅವರ ರಸ್ತೆ ಎಂದು ಕರೆದರೆ, ಕುಲಶೇಖರದ ಕುಚ್ಚಿಕಾಡ್ ರಸ್ತೆಯನ್ನು ಪ್ಲೈಟ್ ಲೆಫ್ಟಿನಂಟ್ ಕೆವಿನ್ ರೋನಾಲ್ಡ್ ಸೆರಾವೋ ಎಂಬ ಹೆಸರಿನಿಂದ ಕರೆಯಲಾಗುತ್ತಿದೆ. ಇದು ಕುಡ್ಲದ ಎರಡು ಸೇನಾ ರಸ್ತೆಗಳೆಂದು ಈಗಾಗಲೇ ಮಾತಾಗಿದೆ.
ಕುಡ್ಲದ ಜನರಿಗೆ ಮಾತ್ರ ಗೊತ್ತು ಈ ಎಣ್ಣೆ
ಯಾವುದೇ ಕೈ ಕಾಲು ನೋವು ಇರಲಿ ಕಡೆಂಜಿ ತ್ಯಾಂಪಣ್ಣ ಭಂಡಾರಿ ಅವರ ಎಣ್ಣೆಯನ್ನು ಹಚ್ಚಿ ಸ್ವಲ್ಪ ಹೊತ್ತಿನ ಬಳಿಕ ನಿಧಾನವಾಗಿ ಬಿಸಿ ನೀರಿನ ಶಾಕ ಕೊಡುತ್ತಾ ಹೋದರೆ ಸಾಕು ನೋವು ಮಂಗ ಮಾಯವಾಗಿ ಬಿಡುತ್ತದೆ. ಇದೇ ಕಾರಣದಿಂದ ಈ ಎಣ್ಣೆಯ ಕುರಿತು ಕುಡ್ಲದ ಜನರಿಗೆ ಬಹಳಷ್ಟು ತಿಳಿದಿದಿದೆ.