Kudla City

ವಿಶ್ವದಲ್ಲಿಯೇ ಕುಡ್ಲ ಸೇಫ್ ಸಿಟಿ

ಅಮೆರಿಕದ ಚಿಕಾಗೊ ಮೂಲದ ’ಟ್ರಿಬ್ಯೂನ್’ ಪತ್ರಿಕೆಯ ಸೋದರ ಸಂಸ್ಥೆ ‘ದಿ ಡೈಲಿ ಮೇಲ್’ ಎಂಬ ಪ್ರವಾಸ ಹಾಗೂ ಆಹಾರ ಕುರಿತ ವೆಬ್‌ಸೈಟ್ 2018ರ ಅಕ್ಟೋಬರ್‌ನಲ್ಲಿ ನಡೆಸಿದ ಸಮೀಕ್ಷೆಯಲ್ಲಿ ವಿಶ್ವದಲ್ಲಿ ಮಂಗಳೂರು 31ನೇ ಸ್ಥಾನ ಪಡೆದಿದೆ. ವೆಬ್‌ಸೈಟ್ ಪ್ರಕಾರ ಸುರಕ್ಷತೆಯ ವಿಷಯದಲ್ಲಿ ಕಡಲ ನಗರಿ ಮಂಗಳೂರು ಎಂದಿಗೂ ಸೇಫ್ ಸಿಟಿ ಎನ್ನುವ ಖ್ಯಾತಿ ಪಡೆದುಕೊಂಡಿದೆ. ವಿಶೇಷವಾಗಿ ವಿಶ್ವದ 50 ಪಟ್ಟಿಯಲ್ಲಿ ಮಂಗಳೂರು ಬಂದಿರೋದು ಇಲ್ಲಿನ ಮಂದಿಗೆ ಹೆಮ್ಮೆಯ ವಿಚಾರ ಎನ್ನಬಹುದು.

ಕುಡ್ಲದ ಹುಡುಗಿ ಪ್ರಿಯಾರ ಮುಡಿಗೆ ಮಿಸ್ ಯೂನಿವರ್ಸ್ ಆಸ್ಟ್ರೇಲಿಯಾ ಕಿರೀಟ

ಆಸೀಸ್ ನೆಲದಲ್ಲಿ ಕುಡ್ಲದ ಹುಡುಗಿಯೊಬ್ಬರು ಮಿಸ್ ಯೂನಿವರ್ಸ್ ಆಸ್ಟ್ರೇಲಿಯಾ ಕಿರೀಟವನ್ನು ಗೆದ್ದುಕೊಳ್ಳುವುದೇ ಹೆಮ್ಮೆಯ ವಿಚಾರ. ಆಸ್ಟ್ರೇಲಿಯಾದ ವಿಕ್ಟೋರಿಯಾ ಕಾನೂನು ಕಾಲೇಜಿನಲ್ಲಿ ಪದವಿ ಪಡೆದ ಕಾರ್ಕಳ ಬೇಸಿಕಲಿ ಬೆಳ್ಮಣ್ಣುವಿನ ಪ್ರಿಯಾ ಅವರು ಪ್ರಶಸ್ತಿ ಗೆದ್ದು ಬಂದಿದ್ದಾರೆ. ಅವರು ಹುಟ್ಟಿದ್ದು ಬೆಳ್ಮಣ್ಣು ಪ್ರದೇಶ ಓದು, ಬೆಳವಣಿಗೆ ಎಲ್ಲವೂ ಮಸ್ಕತ್, ಮೆಲ್ಬೋರ್ನ್‌ನಲ್ಲಿ ನಡೆದಿದೆ. ತಂದೆ, ತಾಯಿ ಇಬ್ಬರು ಕುಡ್ಲದವರು.

104 ವರ್ಷವಾದರೂ ಅವರು ಇನ್ನು ಕಾರ್ ಬಿಡ್ತಾರೆ !

ಜೀವನ ಉತ್ಸಾಹ ಅಂದರೆ ಇದೇ ಇರಬೇಕು ಮಾರಾಯ್ರೆ. ಮಂಗಳೂರಿನ ಹ್ಯಾಟ್ ಹಿಲ್ ನಿವಾಸಿ ಮೈಕಲ್ ಡಿಸೋಜ ಅವರಿಗೆ ಈಗ ಜಸ್ಟ್ 104 ವರ್ಷವಷ್ಟೆ ಆದರೆ ಈಗಲೂ ಕಾರು ಬಿಡುತ್ತಾರೆ.
ಶತಮಾನದ ಹೊಸ್ತಿಲು ದಾಟಿದರೂ ತನ್ನ ೮೫ ವರ್ಷಗಳಿಂದ ಚಾಲನೆ ಮಾಡುವ ಪ್ರವೃತ್ತಿಯನ್ನು ಇನ್ನೂ ಬಿಡಲಿಲ್ಲ ….” ನನ್ನನ್ನು ಕರೆದುಕೊಂಡು ಹೋಗಲು ದೇವರು ಗಾಡಿ ತಂದಾಗಲೇ ನಾನು ವಾಹನ ಚಾಲನೆ ಮಾಡುವುದನ್ನು ನಿಲ್ಲಿಸುತ್ತೇನೆ ಎಂದು ನಗುತ್ತಾರೆ. ಇಷ್ಟು ವರ್ಷದ ಚಾಲನೆಯಲ್ಲಿ ಒಂದು ಬಾರಿ ಮಾತ್ರ ಇವ್ರ್ ಮೇಲೆ ಫೈನ್ ಬಿದ್ದಿದೆಯಂತೆ ಊಟಿಯಲ್ಲಿ ಜನಿಸಿದ ಇವರು ನಂತರ ಕೆಲಸ ನಿಮಿತ್ತ ಮಂಗಳೂರು ಬಂದ ಇವರು ಬಳಿಕ ಇಲ್ಲಿಯೇ ನೆಲೆಸಿದರು. ಮೈಕಲ್ ಮಾಮನಿಗೊಂದು ವಿಶ್ ಇರಲಿ.

ನಿಮ್ಮವರ ಬದುಕು ಉಳಿಸುವ ‘ಬಾಲ್ಕನಿ ಸೇಫ್ಟಿ’ ನೆಟ್

ಬೆಂಗಳೂರಿನಂತಹ ಮೆಟ್ರೋ ನಗರದಲ್ಲಿ ಬದುಕು ಕಟ್ಟುವ ಬಹುತೇಕ ಮಂದಿ ಅಪಾರ್ಟ್‌ಮೆಂಟ್, ಫ್ಲ್ಯಾಟ್‌ಗಳಲ್ಲಿಯೇ ಕಾಲ ಕಳೆಯುತ್ತಾರೆ. ನಿಮ್ಮ ಮಕ್ಕಳು, ಮಹಿಳೆಯರು ಜತೆಗೆ ಹಿರಿಯರು ಬಾಲ್ಕನಿ ವಿಚಾರದಲ್ಲಿ ಮಾಡುವ ಕೆಲವೊಂದು ತಪ್ಪುಗಳು ಅವರನ್ನು ಕಳೆದುಕೊಳ್ಳುವಂತಹ ಸ್ಥಿತಿ ನಿರ್ಮಾಣವಾದ ಘಟನೆಗಳು ಇರಬಹುದು. ಆದರೆ ಈಗ ಇಂತಹ ಅಪಾಯಕಾರಿ ಬಾಲ್ಕನಿಗಳಿಗೆ ಸುಂದರವಾದ ನೆಟ್‌ಗಳನ್ನು ಅಳವಡಿಸುವ ಮೂಲಕ ನಿಮ್ಮವರ ಅಮೂಲ್ಯ ಬದುಕಿಗೆ ಭದ್ರತೆ ನೀಡುವ ತಂಡವೊಂದು ಕೆಲಸ ಮಾಡುತ್ತಿದೆ.

ಬೆಂಗಳೂರಿನ ಯಶವಂತಪುರದಲ್ಲಿರುವ ಮಂಜುನಾಥ ಎಂಟರ್‌ಪ್ರೈಸಸ್‌ನ ಉತ್ಸಾಹಿ ಯುವಕ ಮಂಜುನಾಥ ಅವರ ತಂಡ ಇಂತಹ ಬಾಲ್ಕನಿ ಸೇಫ್ಟಿ ನೆಟ್ಸ್, ಬರ್ಡ್ಸ್ ಪ್ರೊಟೆಕ್ಷನ್ ನೆಟ್ಸ್, ಕೋಕನಟ್ ಸೇಫ್ಟಿ ನೆಟ್ಸ್, ಬಿಲ್ಡಿಂಗ್ ಸೇಫ್ಟಿ ನೆಟ್ಸ್, ಗ್ಲಾಸ್ ಸೇಫ್ಟಿ ನೆಟ್ಸ್, ಸ್ಪೋಟ್ಸ್ ನೆಟ್ಸ್, ಮಂಕಿ ಸೇಫ್ಟಿ ನೆಟ್ಸ್ ಇಂತಹ ನೆಟ್‌ಗಳಲ್ಲಿ ಕಾಣಿಸಿಕೊಳ್ಳುವ ಸಮಸ್ಯೆಗಳ ಪರಿಹಾರ ವಿಚಾರದಲ್ಲಿ ಬಹಳ ತ್ವರಿತವಾಗಿ ನಿಮ್ಮ ಮನೆ ಬಾಗಿಲಿಗೆ ಬಂದು ಅಳವಡಿಸುವ ಕಾರ‍್ಯವನ್ನು ಮಾಡುತ್ತಾರೆ.

ಬೆಂಗಳೂರಿನ ಮೂಲೆ ಮೂಲೆಯಲ್ಲೂ ಇವರ ತಂಡ ಪೂರ್ಣ ಪ್ರಮಾಣದಲ್ಲಿ ದುಡಿಯುತ್ತಿದೆ. ಮಂಜುನಾಥ್ ಅವರನ್ನು ಸಂಪರ್ಕ ಮಾಡಲು 9900827799,9916721019ತಕ್ಷಣ ಕರೆ ಮಾಡಿ ನಿಮ್ಮವರ ಭದ್ರ ಬದುಕಿಗೆ ನೀವೇ ಯೋಚಿಸಿ. ಯಾರು ಮಾಡದಂತಹ ಸಿಂಪಲ್ ಬಜೆಟ್‌ನೊಳಗೆ ನಿಮ್ಮ ಬಾಲ್ಕನಿಗೊಂದು ಹೊಸ ಅರ್ಥ ನೀಡುತ್ತಾರೆ. ಸಿಂಪಲ್ ಬಜೆಟ್ ಬಾಲ್ಕನಿ ಲುಕ್ಸ್ ಸೂಪರ್….
http://www.manjusafetynets.com/

ಗೆದ್ದಲು ನಾಶಕ್ಕೆ ದಡ್ಡಾಲ ಮರದ ತೊಗಡೆಯ ಮೆಡಿಸಿನ್

ಕರಾವಳಿಯ ಬೆಟ್ಟ ಗುಡ್ಡಗಳಲ್ಲಿ ಹೇರಳವಾಗಿ ಬೆಳೆಯುವ ದಡ್ಡಾಲ ಮರದ ತೊಗಟೆಯನ್ನು ಬಳಸಿಕೊಂಡು ಗೆದ್ದಲು ನಾಶಕ ದ್ರಾವಣ ತಯಾರಿಸುವ ಪುತ್ತೂರಿನ ವಿದ್ಯಾರ್ಥಿನಿಯರಿಬ್ಬರ ಸಂಶೋಧನೆ ಅಂತಾರಾಷ್ಟ್ರೀಯ ಮಟ್ಟದ ಜೀನಿಯಸ್ ಒಲಿಂಪಿಯಾಡ್‌ನಲ್ಲಿ ರಜತ ಪದಕ ಗಳಿಸಿದೆ.

ಪುತ್ತೂರಿನ ಖಾಸಗಿ ಶಾಲೆಯ ವಿದ್ಯಾರ್ಥಿನಿಯರಾದ ಸ್ತುತಿ ಎಂ.ಎಸ್. ಮತ್ತು ಸಂಧ್ಯಾ ಪ್ರಭು ಈ ಸಾಧನೆ ಮಾಡಿದ ವಿದ್ಯಾರ್ಥಿನಿಯರು. ಇವರಿಬ್ಬರೂ ಅಮೆರಿಕಾದ ನ್ಯೂಯಾರ್ಕ್‌ನ ಓಸ್‌ವೆಗೊ ಯುನಿವರ್ಸಿಟಿಯಲ್ಲಿ ಜೂನ್ 17 ರಂದು ಜರುಗಿದ ಅಂತಾರಾಷ್ಟ್ರೀಯ ಮಟ್ಟದ ಜೀನಿಯಸ್ ಒಲಿಂಪಿಯಾಡ್‌ನಲ್ಲಿ ಭಾಗವಹಿಸಿ ತಮ್ಮ ಪ್ರಾಜೆಕ್ಟ್ ಮಂಡಿಸಿ ಜಾಗತಿಕ ಮಟ್ಟದಲ್ಲಿ ಸೈ ಎನಿಸಿಕೊಂಡಿದ್ದಾರೆ.

ಯಾವುದೇ ಕೃತಕ ವಸ್ತುವಾಗಲೀ, ರಾಸಾಯನಿಕವಾಗಲೀ ಬಳಸದೆ ಕೇವಲ ದಡ್ಡಾಲ ಮರದ ತೊಗಟೆಯನ್ನು ಬಳಸಿಕೊಂಡು ಅದರಿಂದ ಈ ಜಲೀಯ ಸಾರ ತಯಾರಿಸಲಾಗಿತ್ತು. ಸಾಮಾನ್ಯವಾಗಿ ಮನೆಯ ಒಳಗೆ, ಹೊರಗೆ ಕಾಣಿಸುವ ಗೆದ್ದಲುಗಳನ್ನು ಈ ಸಾರದ ಮೂಲಕ ಸುಲಭವಾಗಿ ನಿರ್ಮೂಲನೆ ಮಾಡಬಹುದಾಗಿದೆ ಮತ್ತು ಇದರಿಂದ ಪರಿಸರಕ್ಕೆ ಮತ್ತು ಆರೋಗ್ಯಕ್ಕೆ ಹಾನಿಯಿಲ್ಲ ಎಂಬುದನ್ನು ಪ್ರಾಜೆಕ್ಟ್ ಮೂಲಕ ತೋರಿಸಿಕೊಡಲಾಗಿತ್ತು.