Kudla City

ಅಡಕೆ ಹಾಳೆ ಟೋಪಿಯಲ್ಲಿ ಮೆಡಿಸಿನ್ ಪವರ್

ಅಡಕೆ ಹಾಳೆ ಟೋಪಿಗೆ ಅಂತಾರಾಷ್ಟ್ರ ಮಟ್ಟದ ಹೆಸರು ಸಲ್ಲುತ್ತಿದೆ. ಅಡಕೆ ಹಾಳೆ ಟೋಪಿಯಲ್ಲಿ ಔಷಧೀಯ ಗುಣಗಳ ಕುರಿತು ಅಧ್ಯಯನ ನಡೆಸಲು, ಅಂತಾರಾಷ್ಟ್ರೀಯ ಮಟ್ಟದಲ್ಲಿ ವಿಸ್ತರಿಸುವುದಕ್ಕಾಗಿ ಲಂಡನ್‌ನ ಪ್ರಮುಖ ಪರಿಸರ ವಿಜ್ಞಾನಿ ಗ್ಯಾರಿಡೆ ಲಾ ಪೊಮೆರೊಯಿನ್, ಮಹಾರಾಷ್ಟ್ರದ ಪುಣೆ ನಿವಾಸಿ, ಯುಎಸ್‌ನಲ್ಲಿರುವ ಸೆನ್ನಿವೆಲ್ ಕಂಪನಿ ಮಾಲೀಕ ಮುಗಧಾಮುಲ್ಲ ಅವರನ್ನು ಒಳಗೊಂಡ ತಂಡ ಜೂ. 29 ರಿಂದ ಜು.1ರ ತನಕ ಕೇರಳ-ಕರ್ನಾಟಕ ಗಡಿ ಪ್ರದೇಶವಾದ ಜಾಲ್ಸೂರಿಗೆಆಗಮಿಸಲಿದೆ.

ಪರಿಸರವಾದಿ ಹಾಗೂ ಅಂತಾರಾಷ್ಟ್ರೀಯ ಖ್ಯಾತಿಯ ಡಾ. ಆರ್.ಕೆ.ನಾಯರ್ ಅವರ ಜಾಲ್ಸೂರಿನಲ್ಲಿರುವ ನಿವಾಸಕ್ಕೆ ಆಗಮಿಸಲಿದ್ದಾರೆ. ಈಗಾಗಲೇ ದೇಶದ ೯ ರಾಜ್ಯಗಳಲ್ಲಿ 7 ಲಕ್ಷದಷ್ಟು ಸಸಿಗಳನ್ನು ನೆಟ್ಟು ಗಮನ ಸೆಳೆದಿದ್ದಾರೆ ಡಾ. ಆರ್. ಕೆ.ನಾಯರ್. ಅವರಿಗೆ ನೇಪಾಳದಲ್ಲಿ ನೀಡಿದ ಸ್ವಾಗತ ಕಾರ‍್ಯಕ್ರಮದಲ್ಲಿ ಗ್ಯಾರಿಡಾ ಲಾ ಪೊಮೆರೊಯಿನ್ ಹಾಗೂ ಮುಗದಮುಲ್ಲಾ ಎಂಬವರ ಪರಿಚಯವಾಗಿದೆ. ಡಾ. ಆರ್.ಕೆ.ನಾಯರ್ ಅವರ ತಲೆಯಲ್ಲಿದ್ದ ಅಡಕೆ ಹಾಳೆಯ ಟೋಪಿಯನ್ನು ಸುಮಾರು 15 ನಿಮಿಷಗಳ ಕಾಲ ತಲೆ ಮೇಲಿಟ್ಟಾಗ ಉಂಟಾದ ಅನುಭವದ ಹಿನ್ನೆಲೆಯಲ್ಲಿ ಸಂಶೋಧನೆ ನಡೆಸಲು ಪ್ರೇರಣೆಯಾಗಿದೆ.

ಹಾಳೆ ಟೋಪಿ ಧರಿಸಿದರೆ ತಲೆನೋವು, ಕಣ್ಣು ನೋವು, ಸಂಧಿ ನೋವು, ಸ್ನಾಯು ಸೆಳೆತ ನಿವಾರಣೆಯಾಗುತ್ತದೆ ಎಂಬುದನ್ನು ಈಗಾಗಲೇ ನಡೆಸಿದ ಸಂಶೋಧನೆಯಿಂದ ತಿಳಿಯಲಾಗಿದೆ. ಮಾತ್ರವಲ್ಲ ಈ ಟೋಪಿ ಧರಿಸಿದರೆ ಒಳ್ಳೆಯ ನಿದ್ರೆ ಮಾಡಲು ಸಹ ಸಹಾಯವಾಗುತ್ತದೆ ಎಂಬುದೂ ಸಹ ಸಂಶೋಧನೆಯ ಮೂಲಕವೇ ಕಂಡುಕೊಳ್ಳಲಾಗಿದೆ. ಅಲ್ಲದೇ, ಮೊಬೈಲ್ ಟವರ್ ಗಳ ವಿಕಿರಣವನ್ನು ತಡೆಯಲುಈ ಹಾಳೆ ಟೋಪಿ ಧರಿಸಿದರೆ ಸಾಧ್ಯವಾಗುತ್ತದೆ ಎಂಬುದುಸಾಬೀತಾಗಿದೆ. ಮೆದುಳಿನ ಕಾರ‍್ಯಚಟುವಟಿಕೆ ನಿಯಂತ್ರಣದಲ್ಲೂಹಾಳೆಯ ಪರಿಣಾಕಾರಿಯಾಗಿದೆ.

ಕರ್ನಾಟಕ, ಆಂಧ್ರ, ತಮಿಳುನಾಡು, ಕೇರಳದ ಕಾಸರಗೋಡು ಜಿಲ್ಲೆಗಳಲ್ಲಿ ಹಾಳೆ ಟೋಪಿಗಳನ್ನು ವ್ಯಾಪಕವಾಗಿ ಬಳಸಲಾಗುತ್ತಿದೆ. ಬಯಲುಗಳಲ್ಲಿ ತೋಟಗಳಲ್ಲಿ ಕೆಲಸ ಮಾಡುವ ಕಾರ್ಮಿಕರು ಈಗಲೂ ಬಳಸುತ್ತಿದ್ದಾರೆ. ಕೃಷಿ ಸಂಬಂಧಿತ ನಾನಾ ಕಾರ‍್ಯಕ್ರಮಗಳಲ್ಲಿ ಈಗಲೂ ವೇದಿಕೆಯಲ್ಲಿ ಅತಿಥಿಗಳು ಹಾಳೆ ಟೋಪಿ ಧರಿಸುತ್ತಾರೆ.

ಬಿಜಿಎಸ್ ವಿದ್ಯಾರ್ಥಿಗಳೆಂದರೆ ಶಿಸ್ತಿನ ಸಿಪಾಯಿಗಳು

ಮಂಗಳೂರಿನ ಕಾವೂರಿನಲ್ಲಿರುವ ಬಿಜಿಎಸ್ ಶಿಕ್ಷಣ ಸಂಸ್ಥೆಗಳ ಶೈಕ್ಷಣಿಕ ಗುಣಮಟ್ಟ ಇಡೀ ಮಂಗಳೂರಿನ ಕಾಲೇಜುಗಳಲ್ಲಿ ವಿಭಿನ್ನ ಎನ್ನುವ ಮಾತಿದೆ. ಇದಕ್ಕೆ ಈ ಬಾರಿ ಮಂಗಳೂರು ಸಂತ ಅಲೋಶಿಯಸ್ ಕಾಲೇಜಿನ ನಿವೃತ್ತ ವೈಸ್ ಪ್ರಿನ್ಸಿಪಾಲ್ ರೊನಾಲ್ಡ್ ಪಿಂಟೋ ಅವರು ಮತ್ತೆ ಸಾಕ್ಷಿ ನೀಡಿದ್ದಾರೆ.
ಬಿಜಿಎಸ್ ಪದವಿ ಕಾಲೇಜಿನಲ್ಲಿ ಅವರು ಸೋಮವಾರ ಬಿಕಾಂ ವಿದ್ಯಾರ್ಥಿಗಳಿಗೆ ಕೇರಿಯರ್ ಗೈಡೆನ್ಸ್ ಕುರಿತು ಉಪನ್ಯಾಸ ನೀಡಿದ್ದರು. ಈ ಸಮಯದಲ್ಲಿ ಅವರ ಉಪನ್ಯಾಸ ವನ್ನು ಬಹಳ ಶಿಸ್ತಿನಿಂದ ಕೇಳಿದರು ಇಂತಹ ಕಾಲೇಜಿನ ವಿದ್ಯಾರ್ಥಿಗಳು ಮಂಗಳೂರು ವಿಶ್ವವಿದ್ಯಾನಿಲಯದಲ್ಲಿ ಯೇ ಇಲ್ಲ ಎಂದು ಬಿಟ್ಟರು. ಬರೀ ಮಾತಿಗೆ ಮಾತ್ರ ಈ ಮಾತು ಬಂದಿಲ್ಲ ತಮ್ಮ ಭಾವನೆಗಳನ್ನು ಕೂಡ ಫೇಸ್ ಬುಕ್ ನಲ್ಲಿ ಹಾಕಿ ಸಂಭ್ರಮ ಪಟ್ಟಿದ್ದಾರೆ.

ಒಣಮೀನು ಎಂದರೆ ಕುಡ್ಲದ ಬ್ರ್ಯಾಂಡ್

ಒಣಮೀನು ಕುಡ್ಲದ ಭಾಷೆಯಲ್ಲಿ ಹೇಳುವುದಾದರೆ ನುಂಗೆಲ್ ಮೀನ್. ಕುಡ್ಲ ಅರ್ಥಾತ್ ಕರಾವಳಿಯ ಬ್ರ್ಯಾಂಡ್ ಪಟ್ಟಿಯಲ್ಲಿ ಒಂದಾಗಿದೆ. ಕಾರಣ ಮಂಗಳೂರಿನ ಬೆಂಗ್ರೆ, ಹೊಯಿಗೆ ಬಜಾರ್, ಬೊಂಬು ಬಜಾರ್ ಎಲ್ಲವೂ ನುಂಗೇಲ್ ಮೀನಿಗೆ ಫೇಮಸ್ ಸ್ಥಳಗಳು.

ಗುಜರಾತ್ ಹಾಗೂ ಉಡುಪಿಯ ಮಲ್ಪೆಯಿಂದಲೂ ಒಣಮೀನು ಮಂಗಳೂರಿನ ಬೊಂಬು ಬಜಾರ್ ನ ಗೋದಾಮುಗಳಲ್ಲಿ ತುಂಬಿಸಲಾಗುತ್ತದೆ. ಆದರೆ ಎಲ್ಲಿಂದಲ್ಲೂ ಒಣಮೀನು ತಂದರೂ‌ಕೂಡ ಕರಾವಳಿಯ ಒಣಮೀನಿನ ಮುಂದೆ ಯಾವುದು ಇಲ್ಲ ಕಾರಣ ಇಲ್ಲಿನ ಬಿಸಿಲು ಜತೆಗೆ‌ ಕಡಲಿನ ನೀರು ಸೇರುವ ಉಪ್ಪು ಎಲ್ಲವೂ ಒಣಮೀನಿಗೆ ಉತ್ತಮ ವ್ಯಾಲು ತಂದು ಕೊಡುತ್ತದೆ. ಇಲ್ಲಿಂದ ಹೊರರಾಜ್ಯಗಳಿಗೆ ಸೇರಿದಂತೆ ವಿದೇಶಗಳಿಗೂ ಕುಡ್ಲದ ನುಂಗೆಲ್ ಮೀನ್ ರಫ್ತು ಅಗುತ್ತಿದೆ ಎನ್ನುವುದು ಹೆಮ್ಮೆಯ ವಿಚಾರ.

ಕುಡ್ಲ ದಕ್ಕೆಯಲ್ಲಿ ಓಮನ್,ಮದ್ರಾಸ್ ದರ ಗಲಾಟೆ !

ಕುಡ್ಲದ ಮೀನುಗಾರಿಕೆ ದಕ್ಕೆಯಲ್ಲಿ ವಿಶಿಷ್ಟ ರೀತಿಯ ದರ ವಿಚಾರದಲ್ಲಿ ಗಲಾಟೆ ಆರಂಭವಾಗಿದೆ. ಇದರ ಪರಿಣಾಮ ಬೂತಾಯಿ ಮೀನು ಕೆಜಿ ಗೆ 80 ರ ಅಸುಪಾಸಿಗೆ ಗ್ರಾಹಕರಿಗೆ ಸಿಗುವಂತಹ ಭಾಗ್ಯ ಭಾನುವಾರ ಲಭ್ಯವಾಗಿದೆ.

ಕಾರಣ ಇಷ್ಟೇ ಮಂಗಳೂರಿನಲ್ಲಿ ಮೀನುಗಾರಿಕೆಗೆ ರಜೆ ಯಾವ ಬೋಟುಗಳು ಮೀನುಗಾರಿಕೆಗೆ ಇಳಿಯುತ್ತಿಲ್ಲ ಓಮನ್ ಹಾಗೂ‌ ಮದ್ರಾಸ್ ಕಡೆಯಿಂದ ಬೂತಾಯಿ ಮೀನು ಸಾಕಷ್ಟು ಪ್ರಮಾಣದಲ್ಲಿ ಬರುವುದರಿಂದ ಬೂತಾಯಿ ದರ ಮೀನುಗಾರಿಕೆ ರಜೆ ಅವಧಿಯಲ್ಲಿ ಮೊದಲ ಬಾರಿಗೆ ರೇಟ್ ಕಡಿಮೆಯಾಗಿದೆ.

ದೇಶದಲ್ಲಿಯೇ ಅಪೂರ್ವ ಕುಡ್ಲದ ಮಳೆ ರಸ್ತೆ

ದೇಶದ ಯಾವುದೇ ನಗರದಲ್ಲೂ ಮಳೆ ಬಂದಾಗ ನೀರು ರಸ್ತೆಯ ಬದಿಯಲ್ಲಿರುವ ಚರಂಡಿ ಮೂಲಕ ಹರಿದು ಹೋಗುತ್ತದೆ. ಆದರೆ ಮಂಗಳೂರಿನಲ್ಲಿ ಮಾತ್ರ ಮಳೆ ನೀರು ರಸ್ತೆಯಲ್ಲೇ ಸಾಗುತ್ತದೆ. ಸ್ಮಾರ್ಟ್ ಸಿಟಿ ಮಂಗಳೂರು ಮಳೆ ರಸ್ತೆ ನೋಡುವುದು ಚೆಂದ ಸಮಸ್ಯೆಗಳು ಮಾತ್ರ ಬಹಳವಿದೆ.