ಒಣಮೀನು ಕುಡ್ಲದ ಭಾಷೆಯಲ್ಲಿ ಹೇಳುವುದಾದರೆ ನುಂಗೆಲ್ ಮೀನ್. ಕುಡ್ಲ ಅರ್ಥಾತ್ ಕರಾವಳಿಯ ಬ್ರ್ಯಾಂಡ್ ಪಟ್ಟಿಯಲ್ಲಿ ಒಂದಾಗಿದೆ. ಕಾರಣ ಮಂಗಳೂರಿನ ಬೆಂಗ್ರೆ, ಹೊಯಿಗೆ ಬಜಾರ್, ಬೊಂಬು ಬಜಾರ್ ಎಲ್ಲವೂ ನುಂಗೇಲ್ ಮೀನಿಗೆ ಫೇಮಸ್ ಸ್ಥಳಗಳು.
ಗುಜರಾತ್ ಹಾಗೂ ಉಡುಪಿಯ ಮಲ್ಪೆಯಿಂದಲೂ ಒಣಮೀನು ಮಂಗಳೂರಿನ ಬೊಂಬು ಬಜಾರ್ ನ ಗೋದಾಮುಗಳಲ್ಲಿ ತುಂಬಿಸಲಾಗುತ್ತದೆ. ಆದರೆ ಎಲ್ಲಿಂದಲ್ಲೂ ಒಣಮೀನು ತಂದರೂಕೂಡ ಕರಾವಳಿಯ ಒಣಮೀನಿನ ಮುಂದೆ ಯಾವುದು ಇಲ್ಲ ಕಾರಣ ಇಲ್ಲಿನ ಬಿಸಿಲು ಜತೆಗೆ ಕಡಲಿನ ನೀರು ಸೇರುವ ಉಪ್ಪು ಎಲ್ಲವೂ ಒಣಮೀನಿಗೆ ಉತ್ತಮ ವ್ಯಾಲು ತಂದು ಕೊಡುತ್ತದೆ. ಇಲ್ಲಿಂದ ಹೊರರಾಜ್ಯಗಳಿಗೆ ಸೇರಿದಂತೆ ವಿದೇಶಗಳಿಗೂ ಕುಡ್ಲದ ನುಂಗೆಲ್ ಮೀನ್ ರಫ್ತು ಅಗುತ್ತಿದೆ ಎನ್ನುವುದು ಹೆಮ್ಮೆಯ ವಿಚಾರ.