Kudla City

ಕುಡ್ಲದಲ್ಲಿ ಪರಿಚಯವಾದ ಚಾಂದಿನಿ ಮೀನು !

ಮಳೆಗಾಲದಲ್ಲಿ ಮೀನು ಮಾರುಕಟ್ಟೆಯಲ್ಲಿ ಸಮುದ್ರದ ತಾಜಾ ಮೀನು ವಿರಳವಾಗುತ್ತಿದ್ದಂತೆ ಹೊಳೆ ಮೀನುಗಳು ಬರಲಾರಂಭಿಸುತ್ತವೆ. ಈಗ ಉತ್ತರ ಕನ್ನಡ ಕಡೆಯ ಡ್ಯಾಮ್‌ಗಳಲ್ಲಿ ಗಾಳ ಹಾಕಿ ಹಿಡಿಯಲಾಗುವ ಅಪರೂಪದ ಚಾಂದಿನಿ ಮೀನು ಮಾರುಕಟ್ಟೆಗೆ ಬರಲಾರಂಭವಾಗಿದೆ.
ಇದು ನೋಡಲು ಸಮುದ್ರದ ಕೆಂಬೇರಿ ಮೀನಿನ ಮಾದರಿಯದ್ದು. ರುಚಿಯಲ್ಲೂ ಅದೇ ಹೋಲಿಕೆ. ಹಾಗಾಗಿ ತಾಜಾ ಚಾಂದಿನಿ ಮೀನನ್ನು ಗ್ರಾಹಕರು ಇಷ್ಟಪಡುವಂತಾಗಿದೆ. ಹೊಟೇಲುಗಳಲ್ಲಿಯೂ ಈ ಮೀನು ಬೇಡಿಕೆ ಗಳಿಸಿದೆ.
ಕೆಜಿಯೊಂದಕ್ಕೆ 300 ರೂ. ಬೆಲೆ ಇದೆ. ಸುಮಾರು 3 ಕೆಜಿಯಷ್ಟು ತೂಕದ ಮೀನು ಕೂಡ ಮೀನು ಮಾರಾಟ ಮಹಿಳೆಯ ಬಳಿ ಕಾಣಸಿಕ್ಕಿದೆ. ಸಿಹಿ ನೀರಿನ ಬಲು ಅಪರೂಪದ ಈ ಮೀನನ್ನು ಒಳನಾಡಿನ ಕೆಲವೆಡೆ ಕೃಷಿ ಮಾಡುತ್ತಾರೆ. ವ್ಯಾಪಾರಿಗಳು ತರಿಸಿ ವ್ಯಾಪಾರ ಮಾಡುತ್ತಿದ್ದಾರೆ. ಒಮ್ಮೆ ಖರೀದಿಸಿದ ಮಂದಿ ಮತ್ತೆ ಕೇಳುತ್ತಿದ್ದಾರೆ ಎನ್ನುವುದು ಫಿಶ್ ಮಾರ್ಕೆಟ್‌ನವರ ಮಾತು.

ಕುಡ್ಲ ಪೊಲೀಸರ ಹೈಟೆಕ್ ಮಂತ್ರ

ಪೊಲೀಸ್ ಎಂದಾಕ್ಷಣ ಏನೋ ಅವರ ಕುರಿತು ಭಾವನೆಯೊಂದು ಬೆಳೆದು ಬಿಡುತ್ತದೆ. ಆದರೆ ಇಂತಹ ಭಾವನೆಗಳನ್ನು ಬದಲಿಸುವ ಜತೆಯಲ್ಲಿ ಜನರು ಕೂಡ ಪೊಲೀಸ್ ರಿಗೆ ನೆರವಾಗಿ ಎನ್ನುವ ಮಾತು ಪದೇ ಪದೇ ಇಲಾಖೆ ಹೇಳುತ್ತಾ ಬಂದಿದೆ.

ಆದರೆ‌ ಕುಡ್ಲದ ಪೊಲೀಸ್ ಕಮೀಷನರ್ ಸಂದೀಪ್ ಪಾಟೀಲ್ ಒಂದು ಹೆಜ್ಜೆ ಮುಂದೆ ಹೋಗಿ ನಿಮ್ಮ ಸಮಸ್ಯೆಯನ್ನು ನೇರವಾಗಿ ನನಗೆ ತಿಳಿಸಿ ಯಾವುದೇ ಮಾಹಿತಿ‌ ಇದ್ದರೂ ಸಾಮಾಜಿಕ ಜಾಲತಾಣ ವಾದ ವ್ಯಾಟ್ಸಪ್ , ಟ್ವಿಟರ್ ಜತೆಗೆ ಇಮೇಲ್ ಮೂಲಕವೂ ಹಂಚಿಕೊಳ್ಳುವ ಕೆಲಸ ಮಾಡಿ ಎಂದಿದ್ದಾರೆ. ಈ ಮೂಲಕ ಪೊಲೀಸ್ ಕಮೀಷನರ್ ಜನರ ಸಮಸ್ಯೆಗಳಿಗೆ ಕಿವಿ ಯಾಗಿದ್ದಾರೆ.

ಕುಡ್ಲದ ಮಲ್ಲಿಗೆ ಮಕ್ಕಳಿಗೆ ವಿದ್ಯೆ ‌ಕೊಟ್ಟಿತು!

ಸರಕಾರಿ ಶಾಲೆಗಳಲ್ಲಿ ಸರಕಾರ ನೀಡಿದ ಶಿಕ್ಷಕರ ಸಂಖ್ಯೆ ಸಾಲದಾದಾಗ ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಶಾಲಾಭಿವೃದ್ಧಿ ಸಮಿತಿ ಗೌರವ ಶಿಕ್ಷಕರನ್ನು ನೇಮಿಸುತ್ತದೆ. ಆದರೆ ಹೀಗೆ ನೇಮಕ ಮಾಡುವ ಗೌರವ ಶಿಕ್ಷಕರಿಗೆ ವೇತನ ನೀಡಲು ಪರದಾಡುವಂತಹ ಪರಿಸ್ಥಿತಿ ಇದೆ. ಇದಕ್ಕೆ ಭಿನ್ನವಾಗಿ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಕುಳ ಗ್ರಾಮದ ಓಜಲ ಶಾಲೆ ಮಲ್ಲಿಗೆ ಬೆಳೆದು ಶಿಕ್ಷಕಿಯರ ವೇತನ ಭರಿಸುತ್ತಿದೆ.

ಇದು ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಕುಳ ಗ್ರಾಮದ ಓಜಲ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ. ಈ ಶಾಲೆಯ ಒಳಗೆ ವಿದ್ಯಾಭ್ಯಾಸ ನಡೆಯುತ್ತಿದ್ದರೆ ಹೊರಗೆ ಮಲ್ಲಿಗೆ ಗಿಡಗಳ ಕಂಪು ಶಾಲೆಯನ್ನು ಅಲಂಕರಿಸಿದೆ. ಈ ಮಲ್ಲಿಗೆ ಗಿಡ ನೆಟ್ಟದ್ದು ಶಾಲೆಯ ಅಲಂಕಾರಕ್ಕೆ ಅಲ್ಲ. ಈ ಶಾಲೆಯ ಗೌರವ ಶಿಕ್ಷಕಿಯರಿಗೆ ನೀಡುವ ವೇತನ ಭರಿಸಲು ಎನ್ನುವುದು ವಿಶೇಷ.

ಇಲ್ಲಿ ಇರುವ ಮಲ್ಲಿಗೆ ಗಿಡಗಳಿಂದ ದಿನಕ್ಕೆ ಒಂದು ಅಟ್ಟೆ ಮಲ್ಲಿಗೆ ಹೂಗಳು ಸಿಗುತ್ತದೆ . ಮಲ್ಲಿಗೆ ಹೂಗಳನ್ನು ಮುಂಜಾನೆ ಶಾಲೆ ಆರಂಭಕ್ಕೆ ಮುನ್ನ ವಿದ್ಯಾರ್ಥಿಗಳು ಶಿಕ್ಷಕರು ಕೊಯ್ದಿಟ್ಟರೆ ಶಾಲೆಯ ಸಿಬ್ಬಂದಿಯೊಬ್ಬರು ಅದನ್ನು ಪೋಣಿಸುತ್ತಾರೆ. ಹೀಗೆ ಮಲ್ಲಿಗೆ ಗಿಡಗಳಿಂದ ಸಿಗುವ ಹೂವನ್ನು ಹೂವಿನ ಅಂಗಡಿಗೆ ನೀಡುವ ಮೂಲಕ ವರುಷಕ್ಕೆ 40ರಿಂದ 50 ಸಾವಿರದವರೆಗೆ ಆದಾಯ ಬರುತ್ತದೆ. ಈ ಆದಾಯದಲ್ಲಿ ಮೂರು ಗೌರವ ಶಿಕ್ಷಕರ ಪೈಕಿ ಪೂರ್ವ ಶಿಕ್ಷಕಿಗೆ ವೇತನ ನೀಡಲು ಸಾಕಾಗುತ್ತದೆ. ಉಳಿದ ಶಿಕ್ಷಕರ ವೇತನಕ್ಕೆ ಬೇರೆ ಮೂಲಗಳನ್ನು ಅವಳ ಮೀಸಲಾಗುತ್ತದೆ ಎನ್ನುತ್ತಾರೆ ಓಜಾಲ ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಹೊನ್ನಪ್ಪ ಗೌಡ ಅವರು.

ಶಾಲೆಯ ಇತರ ಶಿಕ್ಷಕರಿಗೆ ನೀಡುವ ವೇತನದ ಆದಾಯಕ್ಕಾಗಿ ಇನ್ನಷ್ಟು ಮಲ್ಲಿಗೆ ಗಿಡಗಳನ್ನು ನೀಡಬಹುದಾದರೂ ಅದರ ನಿರ್ವಹಣೆ ಕಷ್ಟ. ಆದುದರಿಂದ ಇತರ ಮೂಲದ ಆದಾಯವನ್ನು ಎನ್ನುತ್ತಾರೆ ಶಾಲೆಯ ಮುಖ್ಯ ಶಿಕ್ಷಕಿ ವಿಲ್ಮಾ ಸಿಕ್ವೇರಾ.

ಈ ಶಾಲೆಯಲ್ಲಿ ಸರಕಾರದ ಇಬ್ಬರು ಶಿಕ್ಷಕರಿದ್ದಾರೆ. ಇಲ್ಲಿರುವ ವಿದ್ಯಾರ್ಥಿಗಳ ಸಂಖ್ಯೆಗನುಗುಣವಾಗಿ ಇಬ್ಬರು ಶಿಕ್ಷಕರು ಸಾಲದು ಎಂದು ಮೂವರು ಗೌರವ ಶಿಕ್ಷಕರನ್ನು ನೇಮಿಸಿ ಅದಕ್ಕೆ ಬೇಕಾದ ಆದಾಯವನ್ನು ಶಾಲೆಯಲ್ಲಿ ಮಲ್ಲಿಗೆ ಗಿಡಗಳನ್ನು ನೆಡುವ ಮೂಲಕ ಮಾಡಿರುವ ಪ್ರಯತ್ನ ಶ್ಲಾಘನೀಯವಾದದ್ದು

ಕುಡ್ಲದ ಹುಡುಗಿಯ ಟ್ವೀಟ್ ಗೆ ಕೇಂದ್ರ ಸಚಿವರೇ ಅನ್ಸರ್ ಕೊಟ್ರು !

ಕುಡ್ಲದ ಪೊಣ್ಣು ದೀಪ್ತಿಕಾ ಪುತ್ರನ್ ಅವರ ಒಂದೇ ಒಂದು ಟ್ವೀಟ್‌ಗೆ ಕೇಂದ್ರ ಸರಕಾರದ ಯುವಜನ ಮತ್ತು ಕ್ರೀಡಾ ಸಚಿವ ಕಿರಣ್ ರಿಜಿಜು ಪೂರ್ಣ ರೂಪದಲ್ಲಿ ಸ್ಪಂಧಿಸುವ ಮೂಲಕ ಕ್ರೀಡಾಪಟುಗಳ ಅಳಲನ್ನು ಕೇಳುವ ಮಂದಿ ಇದ್ದಾರೆ ಎನ್ನುವ ವಿಚಾರವನ್ನು ಸಾಬೀತು ಮಾಡುವ ಜತೆಗೆ ಸಹಾಯದ ಭರವಸೆಯನ್ನು ನೀಡಿದ್ದಾರೆ.

ಹೌದು. ಮಂಗಳೂರಿನ ಕ್ರೀಡಾಪ್ರತಿಭೆ ದೀಪ್ತಿಕಾ ಪುತ್ರನ್ ಮೇ.27 ರಂದು ತಮಿಳುನಾಡಿನ ಗುಡಿಯಟ್ಟಂನಲ್ಲಿ ನಡೆದ ರಾಷ್ಟ್ರೀಯ ಪವರ್ ಲಿಫ್ಟಿಂಗ್ ಸ್ಪರ್ಧೆಯಲ್ಲಿ ಬೆಳ್ಳಿ ಪದಕವನ್ನು ಬಾಚುವ ಮೂಲಕ ಅಂತಾರಾಷ್ಟ್ರೀಯ ಮಟ್ಟದ ಪವರ್ ಲಿಫ್ಟಿಂಗ್ ಸ್ಪರ್ಧೆಗೆ ಆಯ್ಕೆಯಾಗಿದ್ದಾರೆ ಆದರೆ ಅವರಿಗೆ ಇರುವ ಒಂದೇ ಒಂದು ಸಮಸ್ಯೆ ಎಂದರೆ ಅಲ್ಲಿಗೆ ಹೋಗಲು ಹಣದ ಚಿಂತೆ ಏನಾದರೂ ಮಾಡಿಕೊಂಡು ಇಂಟರ್‌ನ್ಯಾಶನಲ್ ಅಂಗಳದಲ್ಲಿ ಮೆಡಲ್ ಪಡೆಯಬೇಕು ಎನ್ನುವ ಕನಸ್ಸಿಗೆ ಈ ಬಾರಿ ಕೇಂದ್ರ ಸಚಿವರೇ ಖುದ್ದಾಗಿ ಟ್ವೀಟ್ ಮೂಲಕ ಸ್ಪಂಧಿಸುವ ಕಾರ‍್ಯ ಮಾಡಿದ್ದಾರೆ.

ಆರೋಗ್ಯ ಸಮಸ್ಯೆಗಳಿಗೆ ಆಯುರ್‌ನಲ್ಲಿ ಪರಿಪೂರ್ಣ ಚಿಕಿತ್ಸೆ

ಮನುಷ್ಯರಿಗೆ ಕಾಯಿಲೆ ಬರುವುದು ಸರ್ವೆ ಸಾಮಾನ್ಯ. ಆದರೆ ಮನುಷ್ಯರ ದೇಹ ಪ್ರಕೃತಿಗೆ ತಕ್ಕಂತೆ ಯಾವ ವಿಧಾನದಲ್ಲಿ ಯಾವ ಚಿಕಿತ್ಸೆ ಎನ್ನುವ ವಿಚಾರ ಬಹಳಷ್ಟು ಮಂದಿಗೆ ಗೊತ್ತೇ ಇರುವುದಿಲ್ಲ.

ಇದೇ ಕಾರಣದಿಂದ ವೈದ್ಯರ ಬಳಿಗೆ ರೋಗಿ ಹೋಗಿ ತನ್ನ ಕಾಯಿಲೆಗೆ ಚಿಕಿತ್ಸೆ ಪಡೆದರೂ ಕೂಡ ಪೂರ್ಣ ರೂಪದಲ್ಲಿ ಗುಣವಾಗುವುದಿಲ್ಲ. ಒಂದು ವೇಳೆ ಗುಣವಾದರೂ ಕೂಡ ಅದರ ಸೈಡ್ ಎಫೆಕ್ಟ್‌ಗಳನ್ನು ಅನುಭವಿಸಿಕೊಂಡು ಬದುಕು ದೂಡುವ ಅನಿವಾರ್ಯತೆ ಸೃಷ್ಟಿಯಾಗುತ್ತದೆ.

ಆದರೆ ಕುದ್ರೋಳಿಯ ಆಯುರ್ ಹೆಲ್ತ್ ಕ್ಲಿನಿಕ್‌ನಲ್ಲಿ ಪೂರ್ವ ಮತ್ತು ನಂತರದ ಮದುವೆ ಸಮಾಲೋಚನೆ, ಹಿಜಾಮಾ ಅಧಿಗಳು, ಬೆನ್ನುನೋವಿನ ಚಿಕಿತ್ಸೆ, ಬಂಜೆತನಕ್ಕೂ ಪರಿಹಾರ, ಶೀತ ಮತ್ತು ಜ್ವರದ ಚಿಕಿತ್ಸೆ, ಬೊಜ್ಜು ಚಿಕಿತ್ಸೆ, ಮಂಡಿ ನೋವು ಮತ್ತು ಪಾದದ ಕೀಲು ನೋವಿಗೂ ಚಿಕಿತ್ಸೆ, ತಲೆನೋವು ಮತ್ತು ಸೈನಸ್‌ಗೆ ಸಂಬಂಧಪಟ್ಟ ಚಿಕಿತ್ಸೆ ಹೀಗೆ ಅನಾರೋಗ್ಯಕ್ಕೆ ಸಂಬಂಧಪಟ್ಟಂತಹ ಎಲ್ಲ ರೀತಿಯ ಚಿಕಿತ್ಸೆಯನ್ನು ಆಯುರ್ ಕ್ಲಿನಿಕ್‌ನ ಪರಿಣತ ವೈದ್ಯರು ನೀಡುತ್ತಾರೆ.

ಮಂಗಳೂರಿನ ಕುದ್ರೋಳಿಯ ಕರ್ಬಲ ರಸ್ತೆಯ ಎಚ್.ಬಿ.ಟಿ ಶಾಮಿಯಾನ ಎದುರುಗಡೆ ಕ್ಲಿನಿಕ್ ಬೆಳಗ್ಗೆ 10 ರಿಂದ ಮಧ್ಯಾಹ್ನ 2ರ ತನಕ ತೆರೆದಿರುತ್ತದೆ. ಸಂಪರ್ಕ ಮಾಡಲು 9886727569 ಹಾಗೂ 9886327569ಗೆ ಕರೆ ಮಾಡಿ ಆರೋಗ್ಯ ಸಮಸ್ಯೆಗಳಿಗೆ ಪರಿಪೂರ್ಣ ಪರಿಹಾರ.