ಕುಡ್ಲದ ಹುಡುಗಿಯ ಟ್ವೀಟ್ ಗೆ ಕೇಂದ್ರ ಸಚಿವರೇ ಅನ್ಸರ್ ಕೊಟ್ರು !

ಕುಡ್ಲದ ಪೊಣ್ಣು ದೀಪ್ತಿಕಾ ಪುತ್ರನ್ ಅವರ ಒಂದೇ ಒಂದು ಟ್ವೀಟ್‌ಗೆ ಕೇಂದ್ರ ಸರಕಾರದ ಯುವಜನ ಮತ್ತು ಕ್ರೀಡಾ ಸಚಿವ ಕಿರಣ್ ರಿಜಿಜು ಪೂರ್ಣ ರೂಪದಲ್ಲಿ ಸ್ಪಂಧಿಸುವ ಮೂಲಕ ಕ್ರೀಡಾಪಟುಗಳ ಅಳಲನ್ನು ಕೇಳುವ ಮಂದಿ ಇದ್ದಾರೆ ಎನ್ನುವ ವಿಚಾರವನ್ನು ಸಾಬೀತು ಮಾಡುವ ಜತೆಗೆ ಸಹಾಯದ ಭರವಸೆಯನ್ನು ನೀಡಿದ್ದಾರೆ.

ಹೌದು. ಮಂಗಳೂರಿನ ಕ್ರೀಡಾಪ್ರತಿಭೆ ದೀಪ್ತಿಕಾ ಪುತ್ರನ್ ಮೇ.27 ರಂದು ತಮಿಳುನಾಡಿನ ಗುಡಿಯಟ್ಟಂನಲ್ಲಿ ನಡೆದ ರಾಷ್ಟ್ರೀಯ ಪವರ್ ಲಿಫ್ಟಿಂಗ್ ಸ್ಪರ್ಧೆಯಲ್ಲಿ ಬೆಳ್ಳಿ ಪದಕವನ್ನು ಬಾಚುವ ಮೂಲಕ ಅಂತಾರಾಷ್ಟ್ರೀಯ ಮಟ್ಟದ ಪವರ್ ಲಿಫ್ಟಿಂಗ್ ಸ್ಪರ್ಧೆಗೆ ಆಯ್ಕೆಯಾಗಿದ್ದಾರೆ ಆದರೆ ಅವರಿಗೆ ಇರುವ ಒಂದೇ ಒಂದು ಸಮಸ್ಯೆ ಎಂದರೆ ಅಲ್ಲಿಗೆ ಹೋಗಲು ಹಣದ ಚಿಂತೆ ಏನಾದರೂ ಮಾಡಿಕೊಂಡು ಇಂಟರ್‌ನ್ಯಾಶನಲ್ ಅಂಗಳದಲ್ಲಿ ಮೆಡಲ್ ಪಡೆಯಬೇಕು ಎನ್ನುವ ಕನಸ್ಸಿಗೆ ಈ ಬಾರಿ ಕೇಂದ್ರ ಸಚಿವರೇ ಖುದ್ದಾಗಿ ಟ್ವೀಟ್ ಮೂಲಕ ಸ್ಪಂಧಿಸುವ ಕಾರ‍್ಯ ಮಾಡಿದ್ದಾರೆ.

Share