ಸರಿಯಾಗಿ ಮೂರು ವರ್ಷಗಳ ಹಿಂದೆ ಅಂದ್ರೆ 2016 ಸೆಪ್ಟೆಂಬರ್ 10 ರಂದು ಬೋಂದೆಲ್‌ನಲ್ಲಿರುವ ಎಂ.ಎಸ್.ಎನ್. ಎಮ್ ಬೆಸೆಂಟ್ ಸ್ನಾತಕೋತ್ತರ ಮ್ಯಾನೇಜ್‌ಮೆಂಟ್ ಸಂಸ್ಥೆಯ ನೇತ್ರಾವತಿ ಸಭಾಂಗಣದಲ್ಲಿ ನಡೆದ ಮಣೇಲ್ ಶ್ರೀನಿವಾಸ್ ನಾಯಕ್ ಸ್ಮಾರಕ ಸಂವಾದ ಮಾಲಿಕೆಯ ಕಾರ್ಯಕ್ರಮದಲ್ಲಿ ಖುದ್ಧು ಕೆಫೆ ಕಾಫೀ ಡೇ ಸಿದ್ಧಾರ್ಥ್ ವಿ.ಜಿ ಅವರು ತಮ್ಮ ಹಾಗೂ ಕುಡ್ಲದ ಕತೆಯನ್ನು ಬಹಳ ಚೆನ್ನಾಗಿ ಬಿಡಿಸಿ ಹೇಳಿದ್ದರು. ಕುಡ್ಲಕ್ಕೂ ತಮಗಿರುವ ಸಂಬಂಧವನ್ನು ಅವರ ಮಾತಿನಲ್ಲಿ ಇಲ್ಲಿ ಕೇಳಿ…
ಕರಾವಳಿಯ ಅಲೋಶಿಯಸ್ ಶಿಕ್ಷಣ ಸಂಸ್ಥೆ ಯಲ್ಲಿ ನನ್ನ ಬದುಕು ರೂಪುಗೊಂಡಿತು. ಈ ಬಳಿಕ ಮಂಗಳೂರು ವಿವಿಯಲ್ಲಿ ಅರ್ಥಶಾಸ್ತ್ರ ವಿಚಾರದಲ್ಲಿ ಸ್ನಾತಕೋತ್ತರ ಶಿಕ್ಷಣ ಪೂರೈಸಿದೆ. ಹಂಪನಕಟ್ಟೆಯಲ್ಲಿರುವ ಪುಸ್ತಕ ಅಂಗಡಿಯೊಂದರಲ್ಲಿ ಸಿಗುತ್ತಿದ್ದ ಅಮೂಲ್ಯವಾದ ಪುಸ್ತಕಗಳು ನನ್ನ ಓದುವಿಕೆಯ ಹಸಿವನ್ನು ಜಾಸ್ತಿ ಮಾಡಿತು. ಪಿಯುಸಿಯಲ್ಲಿದ್ದಾಗಲೇ ಎನ್‌ಡಿಎ ಪರೀಕ್ಷೆ ಬರೆದು ಪಾಸ್ ಮಾಡಿದ್ದೆ. ಆದರೆ ಯೋಧನಾಗುವ ಕನಸ್ಸು ಒಂದು ಗೂಡಲೇ ಇಲ್ಲ. ಅಲ್ಲಿಂದ ಇನ್‌ವೆಸ್ಟ್ ಬ್ಯಾಂಕರ್ ಕನಸು ಕಂಡೆ ಅದು ಅಲ್ಲಿಗೆ ಬಿದ್ದು ಹೋಯಿತು. ಎಲ್ಲವೂ ಬಿಟ್ಟು ಕಾಫಿ ಕ್ಷೇತ್ರದಲ್ಲಿ ಬೆಳೆದು ಬಂದಿದ್ದೇನೆ ಎಂದು ಕರಾವಳಿ ಜತೆಗಿನ ಒಡನಾಟವನ್ನು ವಿ.ಜಿ. ಸಿದ್ದಾರ್ಥ ಬಿಚ್ಚಿ ಇಟ್ಟಿದ್ದರು.