Tagged: students

ಸರಕಾರಿ ಶಾಲೆಗೆ ಬಲಕೊಟ್ಟ ಜೋಳದ ರೊಟ್ಟಿ

ರಾಜ್ಯದ ಉತ್ತರ ಕರ್ನಾಟಕ ಸೇರಿದಂತೆ ಬೇರೆ ರಾಜ್ಯಗಳಲ್ಲಿ ನಾನಾ ಹೆಸರುಗಳಲ್ಲಿ ಆಚರಿಸುವ ಸಂಕ್ರಾಂತಿ ಹಬ್ಬ. ಕರಾವಳಿಯ ಗ್ರಾಮೀಣ ಭಾಗದ ಶಾಲೆಯ ಆರ್ಥಿಕತೆಗೆ ಮುನ್ನುಡಿ ಬರೆಯಲು ಸಾಧ್ಯವಾಗಿದೆ. ಸಂಕ್ರಾಂತಿ ಹಬ್ಬದ ದಿನವೇ ಸರಕಾರಿ ಶಾಲೆಯಲ್ಲಿ ಜೋಳದ ರೊಟ್ಟಿ ಮಾಡುವ ಮೂಲಕ ಅಡುಗೆ ಸಿಬ್ಬಂದಿಗಳ ವೇತನದ ಜತೆಗೆ ಶಾಲೆಯನ್ನು ಬಲಪಡಿಸುವ ಕಾರ್ಯವಾಗುತ್ತಿದೆ.

ಹೌದು. ಬಂಟ್ವಾಳ ತಾಲೂಕಿನ ಕೊಳ್ನಾಡು ಗ್ರಾಮದ `ಕಟ್ಟತ್ತಿಲ’ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯ ಆರ್ಥಿಕ ಬಲಕ್ಕಾಗಿ ಜೋಳದ ರೊಟ್ಟಿಯನ್ನು ನೆಚ್ಚಿಕೊಂಡಿದ್ದಾರೆ. ಇದಕ್ಕೆ ಸಾಥ್ ಕೊಟ್ಟವರು ಕರಸೇವಾ ಟ್ರಸ್ಟ್ ಎನ್ನುವ ವೈದ್ಯ ವಿದ್ಯಾರ್ಥಿಗಳು. ಸಂಕ್ರಾಂತಿ ಹಬ್ಬದಂದು ಈ ಜೋಳದ ರೊಟ್ಟಿ ಯೋಜನೆಗೆ ಚಾಲನೆ ನೀಡುವ ಕಾರ್ಯವಾಗಿದೆ.

ಸಾಲೆತ್ತೂರಿನಿಂದ ಐದಾರು ಕಿಮೀ ದೂರದಲ್ಲಿರುವ ಕಟ್ಟತ್ತಿಲ್ಲ ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಬಹಳಷ್ಟು ಹಳ್ಳಗಾಡಿನಲ್ಲಿರುವ ಶಾಲೆ. ವಿಶೇಷವಾಗಿ ಮಕ್ಕಳ ಕೊರತೆ, ಮೂಲಭೂತ ಸವಲತ್ತುಗಳ ಸಮಸ್ಯೆಯಿಂದಾಗಿ ಶಾಲೆ ಬಹಳಷ್ಟು ಸಂಕಷ್ಟಕ್ಕೆ ಬಿದ್ದಿತ್ತು. 2016ರ ಹೊತ್ತಿನಲ್ಲಿ 17 ಮಕ್ಕಳು ಇದ್ದ ಶಾಲೆ ನಂತರದ ದಿನಗಳಲ್ಲಿ 35ಕ್ಕೆ ವಿದ್ಯಾರ್ಥಿಗಳ ಸಂಖ್ಯೆಯನ್ನು ಹೆಚ್ಚಿಸಿಕೊಂಡಿದೆ. ವಿಶೇಷವಾಗಿ ಕರ ಸೇವಾ ಟ್ರಸ್ಟ್ ಎನ್ನುವ ವೈದ್ಯ ವಿದ್ಯಾರ್ಥಿಗಳ ಎನ್‍ಜಿಒ ಸಂಸ್ಥೆ ಈ ಶಾಲೆಯನ್ನು ನೆಚ್ಚಿಕೊಂಡ ಬಳಿಕದಿಂದ ಶಾಲೆ ಅಭಿವೃದ್ಧಿಯ ಕಡೆಗೆ ಹೆಜ್ಜೆ ಹಾಕಿದೆ.

ಕರ ಸೇವಾ ಟ್ರಸ್ಟ್ ಎನ್ನುವುದು ಮಂಗಳೂರಿನ ದೇರಳಕಟ್ಟೆಯಲ್ಲಿರುವ ಯೆನೆಪೆÇೀಯ ಮೆಡಿಕಲ್ ಕಾಲೇಜಿನಲ್ಲಿ ಕಲಿಯುವ ಎಂಟು ಮಂದಿ ವಿದ್ಯಾರ್ಥಿಗಳ ತಂಡದ ಸಂಸ್ಥೆ. ಇದರ ಅಧ್ಯಕ್ಷ ಡಾ. ಅನುಮೋಲ್ ಹೇಳುವಂತೆ ಆರಂಭದಲ್ಲಿ ಶಾಲೆಯಲ್ಲಿ ಯಾವುದೇ ಸವಲತ್ತು ಇರಲಿಲ್ಲ. ನಾವು ಶುಕ್ರವಾರ ಮಧ್ಯಾಹ್ನದ ಬಳಿಕ ಶಾಲೆಯ ವಿದ್ಯಾರ್ಥಿಗಳ ಆರೋಗ್ಯ ತಪಾಸಣೆ ಸೇರಿದಂತೆ ಇತರ ಕೆಲಸಗಳಿಗೆ ಹೋಗುತ್ತಿದ್ದೇವು ದಾನಿಗಳ ನೆರವಿನಿಂದ ಬಾವಿ, ಶಾಲೆಗೆ ಬಣ್ಣ ಕೊಡುವ ಜತೆಯಲ್ಲಿ ಇತರ ಕೆಲಸಗಳನ್ನು ಮಾಡುತ್ತಾ ಬಂದೇವು ಆದರೆ ಪ್ರತಿ ಬಾರಿಯೂ ದಾನಿಗಳಲ್ಲಿ ನೆರವು ಬೇಡುವ ಕೆಲಸ ಕಷ್ಟವಾಗುತ್ತಿತ್ತು. ಇದಕ್ಕಾಗಿ ರಾಜ್ಯದ ಪ್ರತಿಷ್ಠಿತ ಗಣ್ಯರಿಗೆ ಹಾಗೂ ದಾನಿಗಳ ಇಮೇಲ್ ತೆಗೆದುಕೊಂಡು ಅವರಿಗೆ ಮೇಲ್ ಕಳುಹಿಸಲಾಯಿತು. ಆದರೆ ಸೆಲ್ಕೋ ಸಂಸ್ಥೆಯ ಹರೀಶ್ ಹಂದೆ ಇದಕ್ಕೆ ಪ್ರತಿಸ್ಪಂಧಿಸಿದರು ಎನ್ನುತ್ತಾರೆ ಅವರು.
ಹೀಗೆ ಅವರಿಂದ ರಿಪ್ಲೈ ಬಂದ ಬಳಿಕ ಅವರ ತಂಡ ಈ ಶಾಲೆಗೆ ಬಂದು ಪರಿಶೀಲನೆ ಮಾಡಿತು. ಸುತ್ತಮುತ್ತಲಿನ ಜನರನ್ನು ಮಾತನಾಡಿಸಿಕೊಂಡು ಏನೂ ಮಾಡಿದರೆ ಉತ್ತಮ ಎನ್ನುವ ವಿಚಾರವನ್ನು ತಿಳಿದುಕೊಂಡಿತು. ಈ ಬಳಿಕ ಸಂಸ್ಥೆ ಜೋಳದ ರೊಟ್ಟಿ ತಯಾರಿಸಿದರೆ ಒಳ್ಳೆಯ ಆದಾಯ ವೃದ್ಧಿಯಾಗಬಹುದು ಎನ್ನುವುದನ್ನು ಅರಿತು ನಮ್ಮನ್ನು ಸಂಪರ್ಕ ಮಾಡಿತು. ಕರಾವಳಿಯಲ್ಲಿ ಜೋಳದ ರೊಟ್ಟಿ ತಿನ್ನುವವರು ಕಡಿಮೆ ಅದಕ್ಕಾಗಿ ಯೆನೆಪೆÇೀಯ ಆಸ್ಪತ್ರೆಗೆ ದಿನನಿತ್ಯನೂ ಉತ್ತರ ಕರ್ನಾಟಕ ಭಾಗದಿಂದ ರೋಗಿಗಳು ಬರುತ್ತಾರೆ. ಅವರ ಜತೆಯಲ್ಲಿ ಯಾರಾದರೂ ಬಂದೇ ಬರುತ್ತಾರೆ. ಇದಕ್ಕಾಗಿ ಯೆನೆಪೆÇೀಯ ವಿವಿಯ ಕ್ಯಾಂಟೀನ್‍ಗೆ ಈ ಜೋಳದ ರೊಟ್ಟಿಯನ್ನು ನೀಡಿದರೆ ಶಾಲೆಗೂ, ಅಡುಗೆ ಕೆಲಸದವರಿಗೂ ಲಾಭವಾಗುತ್ತದೆ ಎನ್ನುವ ದೃಷ್ಟಿಯಿಂದ ಜೋಳದ ರೊಟ್ಟಿ ಮಾಡುವ ಯೋಜನೆಗೆ ಸಂಕ್ರಾಂತಿಯಂದು ಚಾಲನೆ ನೀಡಲಾಯಿತು ಎನ್ನುವುದು ಡಾ. ಅನ್‍ಮೋಲ್ ಮಾತು. ಜೋಳದ ರೊಟ್ಟಿಯ ಯಂತ್ರಕ್ಕೆ ಕರಾ ಸೇವಾ ಟ್ರಸ್ಟ್‍ನಿಂದ 32 ಸಾವಿ ರೂ. ಖರ್ಚು ಮಾಡಲಾಗಿದೆ. ಸೆಲ್ಕೋ ಅವರು ಸೋಲಾರ್ ಯಂತ್ರವನ್ನು ಅದಕ್ಕೆ ನೀಡುವ ಮೂಲಕ 32 ಸಾವಿರ ರೂ. ಖರ್ಚು ಮಾಡಿದ್ದಾರೆ. ಒಟ್ಟು 64 ಸಾವಿರ ರೂ. ಖರ್ಚುಮಾಡಲಾಗಿದೆ. ಉಳಿದಂತೆ ಸೋಲಾರ್ ಲೈಟ್‍ಗಳನ್ನು ಶಾಲೆಗೆ ಹಾಕಲಾಗಿದೆ ಎನ್ನುತ್ತಾರೆ ಅವರು.

ಕಟ್ಟತ್ತಿಲ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕರಾದ ಚಿತ್ರಕಲಾ ಅವರು ಹೇಳುವಂತೆ ಈಗ 1ರಿಂದ 5ರ ವರೆಗೆ ತರಗತಿ ಇದೆ. ಮುಂದೆ ಹೆಚ್ಚುವರಿ ತರಗತಿಗೆ ಮನವಿ ಮಾಡಲಾಗಿದೆ. ಇರುವ ಅಡುಗೆ ಮನೆಯಲ್ಲಿಯೇ ಜೋಳದ ರೊಟ್ಟಿ ಮಾಡುವ ಯಂತ್ರವನ್ನು ಇಡಲಾಗಿದೆ. ಅಡುಗೆ ಸಿಬ್ಬಂದಿಯೊಬ್ಬರು ಮಕ್ಕಳಿಗೆ ಊಟ ನೀಡಿದ ಬಳಿಕ ಈ ಜೋಳದ ರೊಟ್ಟಿಯ ಕೆಲಸ ಮಾಡುತ್ತಾರೆ. ಅವರಿಗೆ ಮತ್ತೊಬ್ಬ ಮಹಿಳೆ ಸಾಥ್ ಕೊಡಲಿದ್ದಾರೆ. ಈಗಾಗಲೇ ರೊಟ್ಟಿಯನ್ನು ಮಾಡಿಕೊಂಡು ಯೆನೆಪೆÇೀಯ ಕ್ಯಾಂಟೀನ್‍ಗೆ ನೀಡುವ ಕೆಲಸ ಮಾಡಲಿದ್ದೇವೆ. ಈ ಮೂಲಕ ಶಾಲೆ ಆರ್ಥಿಕವಾಗಿ ಬಲಗೊಳ್ಳುವ ಜತೆಗೆ ಅಡುಗೆ ಸಿಬ್ಬಂದಿಗೂ ಕೊಂಚ ಆದಾಯವಾಗುತ್ತದೆ. ಶಾಲೆಯ ಮಕ್ಕಳಿಗೆ ವ್ಯಾನ್ ಮಾಡಿಸಿದ್ದೇವೆ ಜತೆಗೆ ಅನ್‍ಲೈನ್ ಇಂಗ್ಲೀಷ್ ಕೋಚಿಂಗ್ ಕೂಡ ನೀಡಲಾಗುತ್ತಿದೆ ಇದರ ಜತೆಯಲ್ಲಿ ಯೂನಿಫಾರ್ಮ್ ಕೂಡ ಮಕ್ಕಳಿಗೆ ನೀಡಿದ್ದೇವೆ ಎನ್ನುತ್ತಾರೆ ಅವರು. ಒಟ್ಟಾರೆ ಸರಕಾರಿ ಶಾಲೆಯೊಂದನ್ನು ಬಲಗೊಳಿಸಲು ಶಾಲೆಯ ಶಿಕ್ಷಕರ ಜತೆಗೆ ಯುವಜನತೆಯ ಕೆಲಸವಂತೂ ಶ್ಲಾಘನೀಯ.

ವಿದ್ಯಾರ್ಥಿಗಳಿಂದ ಸಂತ ಆಂತೋನಿ ಆಶ್ರಮ ಭೇಟಿ

ಇಂದಿನ ವಿದ್ಯಾರ್ಥಿಗಳಿಗೆ ಆಶ್ರಮ ವಾಸಿಗಳ ಪರಿಚಯವೇ ಇರುವುದಿಲ್ಲ. ಓದು, ಕಲಿಕೆ ಜತೆಗೆ ಮೊಬೈಲ್ ಎನ್ನುವ ಜಂಗಮದೊಂದಿಗೆ ಆಟ ಬಿಟ್ಟರೆ ಉಳಿದ ಎಲ್ಲ ವಿಚಾರಗಳಲ್ಲಿಯೂ ಅವರು ಉತ್ಸಾಹ ತೋರಿಸುವುದೇ ಕಡಿಮೆ.
ಆಶ್ರಮವಾಸಿಗಳ ಬದುಕು, ಬವಣೆ, ಕಷ್ಟ- ಸುಖಗಳನ್ನು ಹತ್ತಿರದಿಂದ ನೋಡುವ ಜತೆಗೆ ಅವರ ಜತೆಯಲ್ಲಿ ಸ್ವಲ್ಪ ಕಾಲ ಕಳೆಯುವ ಈ ಮೂಲಕ ಅಶ್ರಮದಲ್ಲಿ ವಾಸವಾಗಿರುವ ಮೊಗದಲ್ಲಿ ನೆಮ್ಮದಿ ತರುವ ಕೆಲಸವೊಂದು ನಡೆದಿದೆ.
ಹೌದು. ಮಂಗಳೂರಿನ ಸಂತ ಆಂತೋನಿ ಆಶ್ರಮ ಜೆಪ್ಪುವಿಗೆ ಹ್ಯಾಟ್‌ಹಿಲ್‌ನ ಬ್ಯಾರೀಸ್ ಪಬ್ಲಿಕ್ ಸ್ಕೂಲ್‌ನ ಮೊಂಟೆಸರಿಯಿಂದ ಹತ್ತನೇ ತರಗತಿಯ ವರೆಗಿನ ನೂರಕ್ಕೂ ಅಧಿಕ ವಿದ್ಯಾರ್ಥಿಗಳು ಭೇಟಿ ನೀಡಿ ತಾವು ಆಶ್ರಮವಾಸಿಗಳಿಗೆ ತಂದ ಉಡುಗೊರೆಯನ್ನು ಕೊಟ್ಟು ಆಶ್ರಮವಾಸಿಗಳನ್ನು ಖುಷಿ ಪಡಿಸಿದರು.

ಕುಡ್ಲದ ಈ ಕಾಲೇಜಿನಲ್ಲಿ ಅಷ್ಟಮಿ ಹುಲಿವೇಷ ಗ್ಯಾರಂಟಿ !

ಕರಾವಳಿಗೆ ಹುಲಿವೇಷ ಹೊಸತು ಏನೂ ಅಲ್ಲ. ಆದರೆ ಅಷ್ಟಮಿಗೆ ಇಲ್ಲಿನ ವಿದ್ಯಾರ್ಥಿಗಳೇ ಹುಲಿವೇಷ ಹಾಕಿಕೊಂಡು ಭರ್ಜರಿಯಾಗಿ ಸ್ಟೆಪ್ ಹಾಕುವ ಮೂಲಕ ಹೊಸ ದಾಖಲೆಯನ್ನು ಕಳೆದ ಕೆಲವು ವರ್ಷಗಳಿಂದ ಮಾಡುತ್ತಾ ಬರುತ್ತಿದ್ದಾರೆ. ಹೌದು. ಇದು ಮಂಗಳೂರಿನ ಪಾಂಡೇಶ್ವರದಲ್ಲಿರುವ ಶ್ರೀನಿವಾಸ್ ಕಾಲೇಜಿನ ವಿದ್ಯಾರ್ಥಿಗಳ ಮಾತು.

ಕುಡ್ಲದ ವಿದ್ಯಾರ್ಥಿಗಳ ಮನಸ್ಸು ಗೆದ್ದ ಡಿಸಿ ಸೆಂಥಿಲ್ !

ದಕ್ಷಿಣ ಕನ್ನಡದ ಜಿಲ್ಲಾಧಿಕಾರಿ ಸಸಿಕಾಂತ್ ಸೆಂಥಿಲ್ ಅವರಿಗೆ ಈ ಬಾರಿ ಸ್ವಾತಂತ್ರೋತ್ಸವದಲ್ಲಿ ಧ್ವಜಾರೋಹಣ ಮಾಡುವ ಜತೆಯಲ್ಲಿ ಸಂದೇಶ ನೀಡುವ ವಿಶೇಷ ಅವಕಾಶ ಒದಗಿ ಬಂದಿತ್ತು.
ವಿಶೇಷವಾಗಿ ಸಂದೇಶದ ತುಂಬಾ ಕರಾವಳಿಯಲ್ಲಿ ಕಾಣಿಸಿಕೊಂಡ ನೆರೆಗೆ ಜನರು ಸ್ಪಂಧಿಸಿದ ರೀತಿ ಎಲ್ಲವನ್ನು ಮುಕ್ತವಾಗಿ ಹಂಚಿಕೊಳ್ಳುವ ಜತೆಯಲ್ಲಿ ಕರಾವಳಿಯ ಜನರು ಭಯಬೀಳುವ ಅಗತ್ಯವಿಲ್ಲ ಜಿಲ್ಲಾಡಳಿತ ನಿಮ್ಮ ಜತೆಯಲ್ಲಿ ಇದೆ ಎನ್ನುವ ಭರವಸೆ ತುಂಬುವ ಮಾತುಗಳು ಇಡೀ ಜಿಲ್ಲೆಯ ಜನರಿಗೆ ಹೊಸ ವಿಶ್ವಾಸವನ್ನು ತಂದುಕೊಟ್ಟಿದೆ.
ಅವರ ಮಾತಿನಲ್ಲಿ ಹೇಳುವುದಾದರೆ ಒಂದು ಪೀಳಿಗೆ ಸ್ವಾತಂತ್ರ್ಯಕ್ಕಾಗಿ ತಮ್ಮ ಜೀವನವನ್ನೇ ತ್ಯಾಗ ಮಾಡಿ ಇತಿಹಾಸ ಸೃಷ್ಟಿಸಿತು. ಈಗ ನಾವೆಲ್ಲ ಭಾರತವನ್ನು ವಿಶ್ವತ ಅತ್ಯುನ್ನತ ಸ್ಥಾನಕ್ಕೆ ಏರಿಸಲು ನಮ್ಮ ಜೀವನವನ್ನು ತೊಡಗಿಸಿಕೊಂಡು ಇತಿಹಾಸ ಸೃಷ್ಟಿಸೋಣ. ಸಮಾಜದ ಕಟ್ಟ ಕಡೆಯ ವ್ಯಕ್ತಿಯೂ ಶಾಂತಿಯಿಂದ ಬಾಳು ಕಟ್ಟಿಕೊಳ್ಳಲು ಶ್ರಮಿಸೋಣ ಎನ್ನುವುದು ಇಡೀ ಸಂದೇಶದ ಸಾರ.
ಅಂದಹಾಗೆ ಡಿಸಿ ಸೆಂಥಿಲ್ ಬರೀ ಕರಾವಳಿಯ ಜನರಿಗೆ ಮಾತ್ರವಲ್ಲ ಇಲ್ಲಿ ಶೈಕ್ಷಣಿಕ ಬದುಕು ಕಟ್ಟಲು ಬಂದವರಿಗೂ ಅವರೆಂದರೆ ಬಹಳ ಇಷ್ಟ. ಮಳೆ ಬಂದಾಗ ಅವರು ಮಕ್ಕಳು ಕುರಿತು ವಹಿಸುವ ಕಾಳಜಿಯಿಂದ ಮಕ್ಕಳ ಪ್ರೀತಿಯ ಡಿಸಿ ಆಗಿದ್ದಾರೆ ಎನ್ನುವುದಕ್ಕೆ ಇಂದಿನ ಕಾರ‍್ಯಕ್ರಮದಲ್ಲಿ ಸೆಲ್ಫಿ ತೆಗೆದ ವಿದ್ಯಾರ್ಥಿಗಳೇ ಸಾಕ್ಷಿ.

ಕುಡ್ಲದ ಮಳೆಗೆ ಮತ್ತೆ ಶಾಲೆ,ಕಾಲೇಜಿಗೆ ರಜೆ

ಕರ್ನಾಟಕ ಕರಾವಳಿ ಭಾಗದಲ್ಲಿ ಕಳೆದ ಎರಡು ದಿನಗಳಿಂದ ಭಾರೀ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಅಂಗನವಾಡಿ, ಸರಕಾರಿ, ಅನುದಾನಿತ ಹಾಗೂ ಖಾಸಗಿಯ ಎಲ್ಲಾ ಶಾಲಾ ಕಾಲೇಜುಗಳಿಗೆ (ಪದವಿ ಪೂರ್ವ ತರಗತಿವರೆಗೆ) ಆ.8ರಂದು ರಜೆ ಘೋಷಿಸಿ ಜಿಲ್ಲಾಧಿಕಾರಿ ಸಸಿಕಾಂತ್ ಸೆಂಥಿಲ್ ಆದೇಶ ಹೊರಡಿಸಿದ್ದಾರೆ.
ನೀರು ಇರುವ ತಗ್ಗು ಪ್ರದೇಶ, ಕೆರೆ, ನದಿ ತೀರ, ಸಮುದ್ರ ತೀರಕ್ಕೆ ಮಕ್ಕಳು ಹೋಗದಂತೆ ಪಾಲಕರು ಎಚ್ಚರಿಕೆ ವಹಿಸಬೇಕು, ಮೀನುಗಾರರು ಕಡ್ಡಾಯವಾಗಿ ಮೀನುಗಾರಿಕೆಗೆ ತೆರಳುವಂತಿಲ್ಲ, ಜಿಲ್ಲಾ ಮಟ್ಟದ ಹಾಗೂ ತಾಲೂಕು ಮಟ್ಟದ ಅಧಿಕಾರಿಗಳು ಕಡ್ಡಾಯವಾಗಿ ಕೇಂದ್ರ ಸ್ಥಾನದಲ್ಲಿರಬೇಕು, ಪ್ರವಾಸಿಗರು ಹಾಕರು ಸಮುದ್ರ ತೀರಕ್ಕೆ ತೆರಳದಂತೆ ಎಚ್ಚರಿಕೆ ವಹಿಸಬೇಕು.
ಪ್ರಾಕೃತಿಕ ವಿಕೋಪ ಸಂಬಂಧಿಸಿದ ಯಾವುದೇ ಸಮಸ್ಯೆಗಳಿಗೆ 1077 ಉಚಿತ ತುರ್ತು ಸೇವೆ ಸಂಖ್ಯೆಗೆ ಕರೆ ಮಾಡಿ ತುರ್ತು ಸಂದರ್ಭದಲ್ಲಿ ಜಿಲ್ಲಾಧಿಕಾರಿ ಕಚೇರಿಯಲ್ಲಿರುವ ಕಂಟ್ರೋಲ್ ರೂಂಗೆ ಸಂಪರ್ಕಿಸಬಹುದೆಂದು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.