ಕುಡ್ಲದ ವಿದ್ಯಾರ್ಥಿಗಳ ಮನಸ್ಸು ಗೆದ್ದ ಡಿಸಿ ಸೆಂಥಿಲ್ !

ದಕ್ಷಿಣ ಕನ್ನಡದ ಜಿಲ್ಲಾಧಿಕಾರಿ ಸಸಿಕಾಂತ್ ಸೆಂಥಿಲ್ ಅವರಿಗೆ ಈ ಬಾರಿ ಸ್ವಾತಂತ್ರೋತ್ಸವದಲ್ಲಿ ಧ್ವಜಾರೋಹಣ ಮಾಡುವ ಜತೆಯಲ್ಲಿ ಸಂದೇಶ ನೀಡುವ ವಿಶೇಷ ಅವಕಾಶ ಒದಗಿ ಬಂದಿತ್ತು.
ವಿಶೇಷವಾಗಿ ಸಂದೇಶದ ತುಂಬಾ ಕರಾವಳಿಯಲ್ಲಿ ಕಾಣಿಸಿಕೊಂಡ ನೆರೆಗೆ ಜನರು ಸ್ಪಂಧಿಸಿದ ರೀತಿ ಎಲ್ಲವನ್ನು ಮುಕ್ತವಾಗಿ ಹಂಚಿಕೊಳ್ಳುವ ಜತೆಯಲ್ಲಿ ಕರಾವಳಿಯ ಜನರು ಭಯಬೀಳುವ ಅಗತ್ಯವಿಲ್ಲ ಜಿಲ್ಲಾಡಳಿತ ನಿಮ್ಮ ಜತೆಯಲ್ಲಿ ಇದೆ ಎನ್ನುವ ಭರವಸೆ ತುಂಬುವ ಮಾತುಗಳು ಇಡೀ ಜಿಲ್ಲೆಯ ಜನರಿಗೆ ಹೊಸ ವಿಶ್ವಾಸವನ್ನು ತಂದುಕೊಟ್ಟಿದೆ.
ಅವರ ಮಾತಿನಲ್ಲಿ ಹೇಳುವುದಾದರೆ ಒಂದು ಪೀಳಿಗೆ ಸ್ವಾತಂತ್ರ್ಯಕ್ಕಾಗಿ ತಮ್ಮ ಜೀವನವನ್ನೇ ತ್ಯಾಗ ಮಾಡಿ ಇತಿಹಾಸ ಸೃಷ್ಟಿಸಿತು. ಈಗ ನಾವೆಲ್ಲ ಭಾರತವನ್ನು ವಿಶ್ವತ ಅತ್ಯುನ್ನತ ಸ್ಥಾನಕ್ಕೆ ಏರಿಸಲು ನಮ್ಮ ಜೀವನವನ್ನು ತೊಡಗಿಸಿಕೊಂಡು ಇತಿಹಾಸ ಸೃಷ್ಟಿಸೋಣ. ಸಮಾಜದ ಕಟ್ಟ ಕಡೆಯ ವ್ಯಕ್ತಿಯೂ ಶಾಂತಿಯಿಂದ ಬಾಳು ಕಟ್ಟಿಕೊಳ್ಳಲು ಶ್ರಮಿಸೋಣ ಎನ್ನುವುದು ಇಡೀ ಸಂದೇಶದ ಸಾರ.
ಅಂದಹಾಗೆ ಡಿಸಿ ಸೆಂಥಿಲ್ ಬರೀ ಕರಾವಳಿಯ ಜನರಿಗೆ ಮಾತ್ರವಲ್ಲ ಇಲ್ಲಿ ಶೈಕ್ಷಣಿಕ ಬದುಕು ಕಟ್ಟಲು ಬಂದವರಿಗೂ ಅವರೆಂದರೆ ಬಹಳ ಇಷ್ಟ. ಮಳೆ ಬಂದಾಗ ಅವರು ಮಕ್ಕಳು ಕುರಿತು ವಹಿಸುವ ಕಾಳಜಿಯಿಂದ ಮಕ್ಕಳ ಪ್ರೀತಿಯ ಡಿಸಿ ಆಗಿದ್ದಾರೆ ಎನ್ನುವುದಕ್ಕೆ ಇಂದಿನ ಕಾರ‍್ಯಕ್ರಮದಲ್ಲಿ ಸೆಲ್ಫಿ ತೆಗೆದ ವಿದ್ಯಾರ್ಥಿಗಳೇ ಸಾಕ್ಷಿ.

Share