Tagged: twitter

ಕುಡ್ಲ ಪೊಲೀಸರ ಹೈಟೆಕ್ ಮಂತ್ರ

ಪೊಲೀಸ್ ಎಂದಾಕ್ಷಣ ಏನೋ ಅವರ ಕುರಿತು ಭಾವನೆಯೊಂದು ಬೆಳೆದು ಬಿಡುತ್ತದೆ. ಆದರೆ ಇಂತಹ ಭಾವನೆಗಳನ್ನು ಬದಲಿಸುವ ಜತೆಯಲ್ಲಿ ಜನರು ಕೂಡ ಪೊಲೀಸ್ ರಿಗೆ ನೆರವಾಗಿ ಎನ್ನುವ ಮಾತು ಪದೇ ಪದೇ ಇಲಾಖೆ ಹೇಳುತ್ತಾ ಬಂದಿದೆ.

ಆದರೆ‌ ಕುಡ್ಲದ ಪೊಲೀಸ್ ಕಮೀಷನರ್ ಸಂದೀಪ್ ಪಾಟೀಲ್ ಒಂದು ಹೆಜ್ಜೆ ಮುಂದೆ ಹೋಗಿ ನಿಮ್ಮ ಸಮಸ್ಯೆಯನ್ನು ನೇರವಾಗಿ ನನಗೆ ತಿಳಿಸಿ ಯಾವುದೇ ಮಾಹಿತಿ‌ ಇದ್ದರೂ ಸಾಮಾಜಿಕ ಜಾಲತಾಣ ವಾದ ವ್ಯಾಟ್ಸಪ್ , ಟ್ವಿಟರ್ ಜತೆಗೆ ಇಮೇಲ್ ಮೂಲಕವೂ ಹಂಚಿಕೊಳ್ಳುವ ಕೆಲಸ ಮಾಡಿ ಎಂದಿದ್ದಾರೆ. ಈ ಮೂಲಕ ಪೊಲೀಸ್ ಕಮೀಷನರ್ ಜನರ ಸಮಸ್ಯೆಗಳಿಗೆ ಕಿವಿ ಯಾಗಿದ್ದಾರೆ.

ಕುಡ್ಲದ ಹುಡುಗಿಯ ಟ್ವೀಟ್ ಗೆ ಕೇಂದ್ರ ಸಚಿವರೇ ಅನ್ಸರ್ ಕೊಟ್ರು !

ಕುಡ್ಲದ ಪೊಣ್ಣು ದೀಪ್ತಿಕಾ ಪುತ್ರನ್ ಅವರ ಒಂದೇ ಒಂದು ಟ್ವೀಟ್‌ಗೆ ಕೇಂದ್ರ ಸರಕಾರದ ಯುವಜನ ಮತ್ತು ಕ್ರೀಡಾ ಸಚಿವ ಕಿರಣ್ ರಿಜಿಜು ಪೂರ್ಣ ರೂಪದಲ್ಲಿ ಸ್ಪಂಧಿಸುವ ಮೂಲಕ ಕ್ರೀಡಾಪಟುಗಳ ಅಳಲನ್ನು ಕೇಳುವ ಮಂದಿ ಇದ್ದಾರೆ ಎನ್ನುವ ವಿಚಾರವನ್ನು ಸಾಬೀತು ಮಾಡುವ ಜತೆಗೆ ಸಹಾಯದ ಭರವಸೆಯನ್ನು ನೀಡಿದ್ದಾರೆ.

ಹೌದು. ಮಂಗಳೂರಿನ ಕ್ರೀಡಾಪ್ರತಿಭೆ ದೀಪ್ತಿಕಾ ಪುತ್ರನ್ ಮೇ.27 ರಂದು ತಮಿಳುನಾಡಿನ ಗುಡಿಯಟ್ಟಂನಲ್ಲಿ ನಡೆದ ರಾಷ್ಟ್ರೀಯ ಪವರ್ ಲಿಫ್ಟಿಂಗ್ ಸ್ಪರ್ಧೆಯಲ್ಲಿ ಬೆಳ್ಳಿ ಪದಕವನ್ನು ಬಾಚುವ ಮೂಲಕ ಅಂತಾರಾಷ್ಟ್ರೀಯ ಮಟ್ಟದ ಪವರ್ ಲಿಫ್ಟಿಂಗ್ ಸ್ಪರ್ಧೆಗೆ ಆಯ್ಕೆಯಾಗಿದ್ದಾರೆ ಆದರೆ ಅವರಿಗೆ ಇರುವ ಒಂದೇ ಒಂದು ಸಮಸ್ಯೆ ಎಂದರೆ ಅಲ್ಲಿಗೆ ಹೋಗಲು ಹಣದ ಚಿಂತೆ ಏನಾದರೂ ಮಾಡಿಕೊಂಡು ಇಂಟರ್‌ನ್ಯಾಶನಲ್ ಅಂಗಳದಲ್ಲಿ ಮೆಡಲ್ ಪಡೆಯಬೇಕು ಎನ್ನುವ ಕನಸ್ಸಿಗೆ ಈ ಬಾರಿ ಕೇಂದ್ರ ಸಚಿವರೇ ಖುದ್ದಾಗಿ ಟ್ವೀಟ್ ಮೂಲಕ ಸ್ಪಂಧಿಸುವ ಕಾರ‍್ಯ ಮಾಡಿದ್ದಾರೆ.

ಬಾಲಿವುಡ್ ಬಿಗ್ ಬಿ ಗೂ ಪ್ರೇರಣೆಯಾದ ಸಬಿತಾ

ಬೆಳ್ತಂಗಡಿಯ ಸಬಿತಾ ಮೋನಿಸ್ ಅವರ ಬದುಕು ಬಾಲಿವುಡ್‌ನ ಹಿರಿಯ ನಟ ಅಮಿತಾಭ್ ಬಚ್ಚನ್ ಅವರಿಗೂ ಪ್ರೇರಣೆಯ ಶಕ್ತಿ ಎನ್ನುವುದಕ್ಕೆ ಅವರ ಟ್ವೀಟ್‌ಯೇ ದಾಖಲೆ.
ಸಬಿತಾ ಮತದಾನದಲ್ಲಿ ಭಾಗವಹಿಸುವ ರೀತಿ ಇದೆಯಲ್ಲ ಅದು ಎಲ್ಲರಿಗೂ ಪ್ರೇರಣೆ ನೀಡುವಂತದ್ದು, ಅಂದಹಾಗೆ ಸಬಿತಾ ಮೋನಿಸ್‌ಗೆ ಕೈಗಳಿಲ್ಲ ಆದರೆ ಇಡೀ ಬದುಕಿನಲ್ಲಿ ಕಾಲುಗಳೇ ಅವರಿಗೆ ಕೈಗಳಂತೆ ಸಾಥ್ ಕೊಟ್ಟಿದೆ.
ಇದೇ ವಿಚಾರವನ್ನು ಅಮಿತಾಭ್ ಬಹಳ ಹಿಂದೆ ತಮ್ಮ ಟ್ವಿಟ್ಟರ್‌ನಲ್ಲಿ ಹೇಳುವ ಮೂಲಕ ಇಡೀ ದೇಶದ ಜನರಿಗೆ ಸಬಿತಾ ಅವರ ಪರಿಚಯ ಮಾಡಿಕೊಟ್ಟರು. ಅಂದಹಾಗೆ ಸಬಿತಾ ವಿದ್ಯಾವಂತೆ ಜತೆಗೆ ಕಾಲೇಜು ಸಂಸ್ಥೆಯೊಂದರಲ್ಲಿ ಕೆಲಸ ಮಾಡುತ್ತಿದ್ದಾರೆ.
ತಮಗೆ ಕೈಗಳಿಲ್ಲ ಎಂದು ಎಂದಿಗೂ ಬೇಸರ ಪಡದ ಮಹಿಳೆ. ದೇವರು ಕೊಟ್ಟದ್ದು ತನಗೆ ಇಷ್ಟೇ ಎಂದೇ ಮನಸ್ಸು ಕುಗ್ಗದೇ ಇರುವುದರಲ್ಲಿಯೇ ಸಾಧನೆ ಮಾಡುವ ಛಾತಿ ಇಟ್ಟುಕೊಂಡಿರುವವರು.