ದೋಹಾದಲ್ಲಿ ನಡೆಯಲಿರುವ ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್ ಶಿಪ್ ನ ಭಾರತ ತಂಡದ 25 ಸದಸ್ಯರಲ್ಲಿ ಕುಡ್ಲದ ಓಟಗಾರ್ತಿ ಎಂ.ಆರ್.ಪೂವಮ್ಮ ಆಯ್ಕೆಯಾಗಿದ್ದಾರೆ. ಈಗಾಗಲೇ ಹಲವು ಕ್ರೀಡಾಕೂಟದಲ್ಲಿ ಪದಕ ಗೆದ್ದಿರುವ ಪೂವಮ್ಮ ಮಂಗಳೂರಿನ ಮಂಗಳಾ ಕ್ರೀಡಾಂಗಣದಲ್ಲಿ ಕ್ರೀಡಾ ಬದುಕು ಆರಂಭಿಸಿದವರು.
Tagged: sports
ಕುಡ್ಲದ ಹುಡುಗಿಯ ಟ್ವೀಟ್ ಗೆ ಕೇಂದ್ರ ಸಚಿವರೇ ಅನ್ಸರ್ ಕೊಟ್ರು !
ಕುಡ್ಲದ ಪೊಣ್ಣು ದೀಪ್ತಿಕಾ ಪುತ್ರನ್ ಅವರ ಒಂದೇ ಒಂದು ಟ್ವೀಟ್‌ಗೆ ಕೇಂದ್ರ ಸರಕಾರದ ಯುವಜನ ಮತ್ತು ಕ್ರೀಡಾ ಸಚಿವ ಕಿರಣ್ ರಿಜಿಜು ಪೂರ್ಣ ರೂಪದಲ್ಲಿ ಸ್ಪಂಧಿಸುವ ಮೂಲಕ ಕ್ರೀಡಾಪಟುಗಳ ಅಳಲನ್ನು ಕೇಳುವ ಮಂದಿ ಇದ್ದಾರೆ ಎನ್ನುವ ವಿಚಾರವನ್ನು ಸಾಬೀತು ಮಾಡುವ ಜತೆಗೆ ಸಹಾಯದ ಭರವಸೆಯನ್ನು ನೀಡಿದ್ದಾರೆ.
ಹೌದು. ಮಂಗಳೂರಿನ ಕ್ರೀಡಾಪ್ರತಿಭೆ ದೀಪ್ತಿಕಾ ಪುತ್ರನ್ ಮೇ.27 ರಂದು ತಮಿಳುನಾಡಿನ ಗುಡಿಯಟ್ಟಂನಲ್ಲಿ ನಡೆದ ರಾಷ್ಟ್ರೀಯ ಪವರ್ ಲಿಫ್ಟಿಂಗ್ ಸ್ಪರ್ಧೆಯಲ್ಲಿ ಬೆಳ್ಳಿ ಪದಕವನ್ನು ಬಾಚುವ ಮೂಲಕ ಅಂತಾರಾಷ್ಟ್ರೀಯ ಮಟ್ಟದ ಪವರ್ ಲಿಫ್ಟಿಂಗ್ ಸ್ಪರ್ಧೆಗೆ ಆಯ್ಕೆಯಾಗಿದ್ದಾರೆ ಆದರೆ ಅವರಿಗೆ ಇರುವ ಒಂದೇ ಒಂದು ಸಮಸ್ಯೆ ಎಂದರೆ ಅಲ್ಲಿಗೆ ಹೋಗಲು ಹಣದ ಚಿಂತೆ ಏನಾದರೂ ಮಾಡಿಕೊಂಡು ಇಂಟರ್‌ನ್ಯಾಶನಲ್ ಅಂಗಳದಲ್ಲಿ ಮೆಡಲ್ ಪಡೆಯಬೇಕು ಎನ್ನುವ ಕನಸ್ಸಿಗೆ ಈ ಬಾರಿ ಕೇಂದ್ರ ಸಚಿವರೇ ಖುದ್ದಾಗಿ ಟ್ವೀಟ್ ಮೂಲಕ ಸ್ಪಂಧಿಸುವ ಕಾರ‍್ಯ ಮಾಡಿದ್ದಾರೆ.
ಮಳೆಯ ಭಯಕ್ಕೆ ಮಂಗಳ ಸ್ಟೇಡಿಯಂ ಗೆ ಟರ್ಪಲ್ ಹೊದಿಕೆ
ಕುಡ್ಲದ ಅದರಲ್ಲೂ ಜಿಲ್ಲೆಯ ಪ್ರತಿಷ್ಟಿತ ಮಂಗಳ ಸ್ಟೇಡಿಯಂ ನ ಛಾವಣಿಗೆ ಭದ್ರತೆ ಯ ದೃಷ್ಟಿಯಿಂದ ಟರ್ಪಲ್ ಹೊದಿಕೆಯನ್ನು ಹಾಕಲಾಗಿದೆ. ಈಗಾಗಲೇ ಮೇಲ್ಚಾವಣಿಯಲ್ಲಿ ಬಿರುಕುಗಳು ಕಾಣಿಸಿಕೊಂಡ ಪರಿಣಾಮ ಇಂತಹ ಕಾರ್ಯಕ್ಕೆ ಕ್ರೀಡಾ ಇಲಾಖೆ ಮುಂದಾಗಿದೆ.
ಕುಡ್ಲದಲ್ಲಿ ಯಕ್ಷಗಾನ ಕಲಾವಿದರು ಓಡಿದರು !
ಮಂಗಳೂರಿನ ಮಂಗಳಾ ಕ್ರೀಡಾಂಗಣ ಯಕ್ಷಗಾನ ಕಲಾವಿದರಿಂದ ತುಂಬಿ ಹೋಗಿತ್ತು. ದ.ಕ, ಉಡುಪಿ, ಉ.ಕ. ಕಾಸರಗೋಡಿನ ಹೆಚ್ಚಿನ ಎಲ್ಲ ಮೇಳಗಳ ಹಿಮ್ಮೇಳ ಹಾಗೂ ಮುಮ್ಮೇಳ ಕಲಾವಿದರಿದ್ದರು.
ಅಲ್ಲಿ ಯಕ್ಷಗಾನವಿರಲಿಲ್ಲ ಬದಲಾಗಿ ಕ್ರೀಡಾಕೂಟ ಆಯೋಜಿಸಲಾಗಿತ್ತು. ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ ವತಿಯಿಂದ ಮೇಳಗಳ ಯಕ್ಷಗಾನ ಕಲಾವಿದರಿಗೆ ಇದೇ ಮೊದಲ ಬಾರಿಗೆ ಕ್ರೀಡಾಕೂಟ ಆಯೋಜನೆಗೊಂಡಿದೆ.
24 ಮೇಳಗಳ ಸದಸ್ಯರು ಕಾಣಿಸಿಕೊಂಡಿದ್ದಾರೆ. ಮಂದಾರ್ತಿ ಮೇಳ (ಎ)(ಬಿ), ಸಾಲಿಗ್ರಾಮ, ಕಟೀಲಿನ 6 ಮೇಳ, ಬಪ್ಪನಾಡು, ಸಸಿಹಿತ್ಲು , ಎಡನೀರು, ಕೂಡ್ಲು, ಮಲ್ಲ, ಕುತ್ಯಾಳ, ಬೆಂಕಿನಾಥೇಶ್ವರ ಮೇಳ, ಸುಂಕದಕಟ್ಟೆ ಮೇಳ, ಸೌಕೂರು, ಅಮೃತೇಶ್ವರಿ ಕೋಟ, ಮಾರಣಕಟ್ಟೆ ಮೇಳ, ಗೋಳಿಗರಡಿ,ಹಿರಿಯಡ್ಕ, ಮಡಾಮಕ್ಕಿ, ಧರ್ಮಸ್ಥಳ ಮೇಳಗಳ ಕಲಾವಿದರು ಭಾಗವಹಿಸಿದ್ದರು.
ಓಟ, ಉದ್ದಜಿಗಿತ, ಗುಂಡು ಎಸೆತ, ಬಾಂಬ್ ಇನ್‌ದ ಸಿಟಿ, ಸಂಗೀತ ಕುರ್ಚಿ, ರಿಲೇ, ಕ್ರಿಕೆಟ್, ಹಗ್ಗಜಗ್ಗಾಟ ಮೊದಲಾದ ಆಟಗಳಿದ್ದವು. ಸುಮಾರು 400 ಮಂದಿ ಕಲಾವಿದರು ಕ್ರೀಡಾಕೂಟದಲ್ಲಿ ಭಾಗವಹಿಸಿದ್ದರು. ಹಿರಿಯ ಕಲಾವಿದರಾದ ಅರುವ ಕೊರಗಪ್ಪ ಶೆಟ್ಟಿ, ಸಿರಿಬಾಗಿಲು ರಾಮಕೃಷ್ಣ ಮಯ್ಯ, ಭಾಗವತರಾದ ಪ್ರಸಾದ್ ಬಲಿಪ, ರವಿಚಂದ್ರ ಕನ್ನಡಿಕಟ್ಟೆ ಸೇರಿದಂತೆ ಯಕ್ಷಗಾನ ಕಲಾವಿದರು ಪಾಲ್ಗೊಂಡಿದ್ದರು.