ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ತುಳು ನಾಡಿದ ಸಾಂಸ್ಕೃತಿಕ ವೈಭವ ಅನಾವರಣಗೊಂಡಿದ್ದು, ದೇಶ, ವಿದೇಶಗಳ ಪ್ರಯಾಣಿಕರನ್ನು ಆಕರ್ಷಿಸುತ್ತಿದೆ.
ಪ್ರಸಿದ್ಧ ಜನಪದ ಕ್ರೀಡೆ ಕಂಬಳ, ಪಿಲಿನಲಿಕೆ, ಮೀನುಗಾರಿಕೆ ಬೋಟ್, ಕಲಾಕೃತಿಗಳು, ಯಕ್ಷಗಾನದ ಬಣ್ಣದ ವೇಷ ಸೇರಿದಂತೆ ಹಲವು ಜಾನಪದದ ಸೊಗಡನ್ನು ಬಿತ್ತರಿಸುವ ಪ್ರತಿಕೃತಿಗಳು ವಿಮಾನ ನಿಲ್ದಾಣದ ಟರ್ಮಿನಲ್‌ನಲ್ಲಿ ವಿನ್ಯಾಸಗೊಳಿಸಲಾಗಿದೆ.
ವಿಮಾನ ನಿಲ್ದಾಣದಲ್ಲಿ ಅಳವಡಿಸಲಾದ ತುಳುನಾಡಿನ ಸಾಂಸ್ಕೃತಿಕ ವೈಭವವನ್ನು ಸಾರುವ ಪ್ರತಿಕೃತಿಗಳು ಈಗ ಸೆಲ್ಫಿ ಪಾಯಿಂಟ್ ಆಗಿ ಪ್ರಸಿದ್ಧಿ ಪಡೆದಿದೆ. ಅನೇಕ ಮಂದಿ ಪ್ರವಾಸಿಗರು ಕಂಬಳ, ಪಿಲಿನಲಿಕೆ, ಯಕ್ಷಗಾನ ವೇಷಗಳ ಮುಂದೆ ನಿಂತು ಸೆಲ್ಫಿ, ಫೋಟೋ ತೆಗೆಸಿಕೊಂಡು ಸಂಭ್ರಮಿಸ್ತುತಿದ್ದಾರೆ.
tgas: mangalore, airport, tulunadu,costal, culture,kambala, fishery, pilinalike, boat, kudlacity, kudla