ಇಳಿ ವಯಸ್ಸಲ್ಲೂ ಎಳೆಯರಂತಹ ಉತ್ಸಾಹ. 62 ವರ್ಷಗಳಿಂದ ಆಟೋ ರಿಕ್ಷಾ ಚಾಲಕ. ಈ ವರೆಗೆ ಒಂದೇ ಒಂದು ಪೊಲೀಸ್ ಕೇಸ್ ಇಲ್ಲದೆ, ಅಪಘಾತ ಎಸಗದೆ ನಿಷ್ಠೆಯಿಂದ ದುಡಿಯುತ್ತಿರುವ ಕಾಯಕಯೋಗಿ. ವಿಶೇಷವೆಂದರೆ ಮಂಗಳೂರಿನಲ್ಲಿ ಪ್ರಪ್ರಥಮವಾಗಿ ಓಡಾಟ ನಡೆಸಿದ ರಿಕ್ಷಾದ ಚಾಲಕ ಮೊಂತು ಲೋಬೊ ಎನ್ನುವುದು ವಿಶೇಷ. ಈಗಲೂ ಮಂಗಳೂರಿನ ಪಡೀಲ್, ನಾಗುರಿ, ಕಂಕನಾಡಿ ಅಸುಪಾಸಿನ ರಿಕ್ಷಾ ನಿಲ್ದಾಣ ದಲ್ಲಿ ಅವರ ರಿಕ್ಷಾ ಕಾಣ ಸಿಗುತ್ತದೆ.