ಸಿಇಟಿ ಪರೀಕ್ಷಾ ಸೆಂಟರ್ ದ.ಕವೇ ರಾಜ್ಯಕ್ಕೆ ಸೆಕೆಂಡ್ !

ಇಂದು ರಾಜ್ಯವ್ಯಾಪಿ ಸಾಮಾನ್ಯ ಪ್ರವೇಶ ಪರೀಕ್ಷೆ(ಸಿಇಟಿ) ನಡೆಯಲಿದೆ. ರಾಜ್ಯದ ಬೆಂಗಳೂರಿನಲ್ಲಿ ಈ ಬಾರಿ 84 ಸಿಇಟಿ ಪರೀಕ್ಷಾ ಸೆಂಟರ್‌ಗಳಿದ್ದರೆ ಅದರ ನಂತರದ ಸ್ಥಾನ ಮಂಗಳೂರಿನಲ್ಲಿ 26 ಸಿಇಟಿ ಪರೀಕ್ಷಾ ಸೆಂಟರ್‌ಗಳನ್ನು ಹೊಂದುವ ಮೂಲಕ ರಾಜ್ಯದಲ್ಲಿ ಎರಡನೇ ಅತೀ ದೊಡ್ಡ ಪರೀಕ್ಷಾ ಸೆಂಟರ್‌ಗಳನ್ನು ಹೊಂದಿರುವ ಜಿಲ್ಲೆ ಎನ್ನುವ ಖ್ಯಾತಿಗೆ ಭಾಜನವಾಗಿದೆ.
ಅದರಲ್ಲೂ ಮುಖ್ಯವಾಗಿ ಮಂಗಳೂರು ತಾಲೂಕು ವ್ಯಾಪ್ತಿಯಲ್ಲೇ ಭರ್ತಿ 13 ಪರೀಕ್ಷಾ ಕೇಂದ್ರಗಳು ಇವೆ. ಮೂಡುಬಿದಿರೆಯಲ್ಲಿ 8, ಬೆಳ್ತಂಗಡಿಯಲ್ಲಿ 2, ಪುತ್ತೂರಿನ 3 ಕೇಂದ್ರಗಳು ಸೇರಿದಂತೆ ಒಟ್ಟು 26 ಕೇಂದ್ರಗಳಲ್ಲಿ ಪರೀಕ್ಷೆ ನಡೆಯಲಿದೆ.
ಸರಿಸುಮಾರು 13,290ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ. ಮಂಗಳೂರಿನ ಅಲೋಶಿಯಸ್ ಕಾಲೇಜಿನಲ್ಲಿ 771 ವಿದ್ಯಾರ್ಥಿಗಳು ಪರೀಕ್ಷೆ ಬರೆಯುವ ಮೂಲಕ ಜಿಲ್ಲೆಯಲ್ಲಿ ಅತೀ ಹೆಚ್ಚು ವಿದ್ಯಾರ್ಥಿಗಳು ಪರೀಕ್ಷೆ ಬರೆಯುವ ಸೆಂಟರ್ ಆಗಿ ಗುರುತಿಸಿಕೊಂಡಿದೆ.

Share