ಕರಾವಳಿಯ ಯಾವ ರಸ್ತೆಯನ್ನು ನೋಡಿದರೂ ಕೂಡ ಅಲ್ಲಿ ಹೊಂಡಗಳೇ ಕಾಣಿಸಿಕೊಳ್ಳುತ್ತಿದೆ. ಸವಾರರಂತೂ ಜೀವವನ್ನು ಕೈಯಲ್ಲಿ ಹಿಡಿದುಕೊಂಡೇ ಸಾಗಬೇಕಾದ ಸ್ಥಿತಿ ಜಿಲ್ಲೆಯಲ್ಲಿ ಕಾಣಿಸಿಕೊಂಡಿದೆ. ವಿಶೇಷ ಎಂದರೆ ಈ ರಸ್ತೆಯಲ್ಲಿ ಹೊಂಡಗಳು ಸ್ಮಾರ್ಟ್ ಸಿಟಿ ಕುಡ್ಲದಲ್ಲೂ ಭರ್ಜರಿಯಾಗಿದೆ.
ಮಂಗಳೂರಿನ ಬಂಟ್ಸ್‌ಹಾಸ್ಟೆಲ್ ಸರ್ಕಲ್ ಸಮೀಪ ರಸ್ತೆಯಂಚಿನಲ್ಲಿದ್ದ ಗುಂಡಿಯೊಂದು ದ್ವಿಚಕ್ರ ಸವಾರರಾಗಿ ಕಂಟಕವಾಗಿದ್ದು ಈ ಬಗ್ಗೆ ಮನಪಾ ಅಧಿಕಾರಿಗಳ ಗಮನಕ್ಕೆ ತಂದರೂ ಸುಧಾರಣೆಯಾಗದಿರುವುದರಿಂದ ಬೇಸತ್ತ ಪೂರ್ವ ಸಂಚಾರಿ ಠಾಣೆ (ಕದ್ರಿ) ಯ ಸಿಬ್ಬಂದಿ ಪುಟ್ಟರಾಮ ತಾನೇ ಕಲ್ಲು, ಮಣ್ಣು ಹಾಕಿಕೊಂಡು ಮುಚ್ಚುವ ಮೂಲಕ ವಿಶೇಷವಾದ ಕೆಲಸವನ್ನು ಮಾಡಿ ವಾಹನ ಸವಾರರ ಮನಸ್ಸು ಗೆದ್ದುಬಿಟ್ಟಿದ್ದಾರೆ.