ಅಬ್ದುಲ್ ರವೂಫ್ ಎಂದರೆ ಬಹಳಷ್ಟು ಮಂದಿಗೆ ಗೊತ್ತಿಲ್ಲ. ಟ್ರಾಫಿಕ್‌ನ ರವೂಫ್ ಭಾಯಿ ಎಂದರೆ ತಕ್ಷಣ ಮಂಗಳೂರಿನಲ್ಲಿ ವಾಹನ ಓಡಿಸುವವರಿಗೆ ಗೊತ್ತಿರುವ ಮನುಷ್ಯ.
ಕಳೆದ 26 ವರ್ಷಗಳಿಂದ ಕುಡ್ಲ ಸಿಟಿಯ ಸಂಚಾರ ನಿಯಂತ್ರಣದಲ್ಲಿ ಪ್ರಮುಖ ಪಾತ್ರವಹಿಸುವ ರವೂಫ್ ಈಗ ಹೋಮ್ ಗಾರ್ಡ್‌ನಲ್ಲಿ ನೌಕರಿ ಮಾಡುತ್ತಿದ್ದಾರೆ. ಈಗ ರಂಜಾನ್ ಉಪವಾಸದ ಸಮಯದಲ್ಲಿ ನಮಾಜ್ ಮಾಡಲು ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಬರುತ್ತಾರೆ ಹೆಚ್ಚಾಗಿ ಸಂಜೆಯ ಹೊತ್ತು ಮಸೀದಿ ಸುತ್ತಮುತ್ತ ಹೆಚ್ಚು ವಾಹನಗಳ ಜತೆಗೆ ಟ್ರಾಫಿಕ್ ಸಮಸ್ಯೆ ಉಂಟಾಗುತ್ತದೆ.
ಈಗ ರವೂಫ್ ಮಾಡುತ್ತಿರುವ ಮುಖ್ಯ ಕೆಲಸ ಎಂದರೆ ನಗರದ ಪ್ರಮುಖ ನಾಲ್ಕು ಮಸೀದಿಗಳ ಟ್ರಾಫಿಕ್ ಸಮಸ್ಯೆಗೆ ಪರಿಹಾರ ನೀಡಲು ಬೆಳಗ್ಗೆ 8ರಿಂದ ರಾತ್ರಿ 10ರ ವರೆಗೆ ನಿರಂತರವಾಗಿ ಕೆಲಸ ಮಾಡುತ್ತಿದ್ದಾರೆ. ಬಿಸಿಲು, ಮಳೆ ಎನ್ನದೇ ಕಡಿಮೆ ಸಂಬಳದಲ್ಲಿ ದುಡಿಯುವ ಟ್ರಾಫಿಕ್‌ನ ಅಬ್ದುಲ್ ರವೂಫ್ ನಿಜವಾಗಿಯೂ ‘ಕುಡ್ಲ ಸಿಟಿ’ಯ ಹೆಮ್ಮೆಯ ನಾಗರಿಕ ಎನ್ನಬಹುದು.