ಪುತ್ತೂರಿನ ಡಾ.ಶಿವರಾಮ ಭಟ್ ಅವರ ಕ್ಲಿನಿಕ್‌ನಲ್ಲಿರುವ ಕಂಪೌಂಡರ್ ಭಟ್ಟರು ಪುತ್ತೂರಿನ ಮಂದಿಗೆ ಚಿರಪರಿಚಿತ ಮುಖ. ಯಾವುದೇ ಕಾಯಿಲೆ ಇರಲಿ ಅವರು ನೀಡುವ ಮದ್ದು ರೋಗಿಯ ಕಾಯಿಲೆಗೆ ಗುಣಪಡಿಸುವ ಶಕ್ತಿಯಿದೆ. ಅವರ ನಗು ಮೊಗದ ಮಾತು ರೋಗಿಗೆ ಕಾಯಿಲೆಯಲ್ಲೂ ಹೊಸ ಚೈತನ್ಯ ನೀಡುತ್ತದೆ.
ಅವರ ಮದ್ದಿನ ರೇಟು ಕೂಡ ಬಹಳ ಕಡಿಮೆ. ಕೆಲವೊಂದು ಸಲ ಬಡವರು ಬಂದರೆ ಉಚಿತವಾಗಿ ಮದ್ದು ನೀಡಿದ ಉದಾಹರಣೆಗಳು ಸಾಕಷ್ಟಿದೆ. ಡಾ. ಶಿವರಾಮ ಭಟ್ ಅವರ ಕಾಲದಿಂದಲ್ಲೂ ಪುತ್ತೂರಿನ ಬಸ್ ನಿಲ್ದಾಣದ ಪಕ್ಕದಲ್ಲಿರುವ ಡಾ. ಶಿವರಾಮ ಭಟ್ ಕ್ಲಿನಿಕ್‌ನಲ್ಲಿ ಕಂಪೌಂಡರ್ ಆಗಿದ್ದಾರೆ.
ಈಗ ಡಾ.ಶಿವರಾಮ ಭಟ್ಟರು ಇಲ್ಲ ಆದರೆ ಅವರ ಪುತ್ರ ಡಾ. ಶ್ಯಾಮ್ ಭಟ್ ಇದ್ದರೆ ಅವರಿಗೂ ಕಂಪೌಂಡರ್ ಭಟ್ಟರು ಎಂದರೆ ಅದೇ ಪ್ರೀತಿ. ರೋಗಿಗಳಿಗೂ ಅವರು ಎಂದರೆ ವಿಶೇಷ ಗೌರವ ಜತೆಗೆ ಅಪಾರ ಪ್ರೀತಿ.
Tagged: citynews
ಶಾಸಕರೇ ಕ್ಲೀನ್ ಮಂಗಳೂರಿಗೆ ನೀವು ಸಹಕರಿಸಿ
ಮಂಗಳೂರು ಮಹಾನಗರಪಾಲಿಕೆ ವ್ಯಾಪ್ತಿಯಲ್ಲಿರುವ ಎಲ್ಲ ಅನಧಿಕೃತ ಪ್ಲೆಕ್ಸ್ ಹಾಗೂ ಬ್ಯಾನರ್‌ಗಳನ್ನು ತೆರವುಗೊಳಿಸುವಂತೆ ಹಾಗೂ ತಪ್ಪಿದ್ದಲ್ಲಿ ಕ್ರಿಮಿನಲ್ ಕೇಸ್ ದಾಖಲಿಸುವ ವಿಚಾರದಲ್ಲಿ ಎಂದು ಪಾಲಿಕೆ ಎಚ್ಚರಿಕೆ ನೀಡಿದೆ.
ಆದರೆ ಮಂಗಳೂರಿನ ಉರ್ವಸ್ಟೋರ್ ಸರಕಾರಿ ಕ್ವಾಟ್ರರ್ಸ್ ಬಳಿಯಲ್ಲಿ ಸಾಗಿದಾಗ ಭರ್ತಿ ಮೂರು ಫ್ಲೆಕ್ಸ್‌ಗಳ ಮೂಲಕ ಶಾಸಕ ಡಿ.ವೇದವ್ಯಾಸ ಕಾಮತ್ ರಾರಾಜಿಸುತ್ತಿದ್ದಾರೆ. ಈ ಮೂಲಕ ಸ್ವಚ್ಛತೆಯ ಪಾಠ ಹೇಳುವ ಶಾಸಕರು ಪರೋಕ್ಷ ರೀತಿಯಲ್ಲಿ ಫ್ಲೆಕ್ಸ್ ಸಂಸ್ಕೃತಿಗೆ ಮಣೆ ಹಾಕುವ ಮೂಲಕ ಕ್ಲೀನ್ ಮಂಗಳೂರು ಅಭಿಯಾನಕ್ಕೆ ತಡೆಯಾಗುತ್ತಿದೆ. ದಯವಿಟ್ಟು ಶಾಸಕರೇ ಸ್ವಚ್ಛತೆಯ ಕಡೆಗೆ ನೀವು ಗಮನ ಮೊದಲು ಕೊಡಿ.
ಡೆಂಗೆಗೆ ಸಡ್ಡು ಹೊಡೆಯಲು ಐ ಪಲ್ಸ್ ಸಹಕಾರಿ
ಪ್ರಸ್ತುತ ಮಂಗಳೂರಿನಲ್ಲಿ ಡೆಂಗ್ಯು ಡಂಗುರಾ ಸಾರುತ್ತಿದ್ದು ಎಲ್ಲೆಡೆ ಹರಡುತ್ತಾ ಮಾರಣಾಂತಿಕವಾಗಿ ಪರಿಣಮಿಸುತ್ತಿರುವ ಈ ಹೊತ್ತಿಗೆ ಅದಕ್ಕೆ ಮುನ್ನೆಚರಿಕೆ ಕ್ರಮವನ್ನು ತೆಗೆದುಕೊಳ್ಳುವುದು ಮುಖ್ಯವಾಗಿದೆ.
ಮುಖ್ಯವಾಗಿ ನಮ್ಮ ರೋಗ ನಿರೋಧಕ ಶಕ್ತಿಯನ್ನು ಕುಗ್ಗಿಸುವ ಡೆಂಗ್ಯುವನ್ನು ಸೋಲಿಸಲು ಇಮ್ಯುನಿಟಿ ದೇಹದಲ್ಲಿರಬೇಕಾದದ್ದು ಮುಖ್ಯ, ಡೆಂಗ್ಯುಗೆ ಯಾವುದೇ ರೀತಿಯ ನಿರ್ಧರಿತ ಚಿಕಿತ್ಸಾ ಕ್ರಮ ಇಲ್ಲದೇ ಇದ್ದರು ಡೆಂಗ್ಯುವನ್ನು ಬರದಂತೆ ತಡೆಯಲು ಅಥವಾ ಬಂದರೂ ಅದನ್ನು ಎದುರಿಸಲು ಶಕ್ತಿಯನ್ನು ಈ ಔಷಧಿ ನೀಡುತ್ತದೆ….ಮಾತ್ರವಲ್ಲ ಇತರ ಯಾವುದೇ ರೋಗ ನಿರೋಧಕ ಶಕ್ತಿಯನ್ನು ಕುಗ್ಗಿಸುವ ರೋಗಗಳು ಬರದಂತೆ ಐ ಪಲ್ಸ್ ಕಾಯುತ್ತದೆ.
ಐ-ಪಲ್ಸ್ ಪುನಶ್ಚೈತನ್ಯಕಾರಿ ಶಕ್ತಿಯನ್ನು ಬೆಂಬಲಿಸುತ್ತದೆ, ಅದು ಆರೋಗ್ಯವನ್ನು ಹೆಚ್ಚಿಸುತ್ತದೆ ಮತ್ತು ಅಕಾಲಿಕ ವಯಸ್ಸನ್ನು ವಿಳಂಬಗೊಳಿಸಲು ಸಹಾಯ ಮಾಡುತ್ತದೆ. ಉತ್ಕರ್ಷಣ ನಿರೋಧಕ ಹಣ್ಣುಗಳ ವಿಶಿಷ್ಟ ಮತ್ತು ಸಿನರ್ಜಿಸ್ಟಿಕ್ ಸಂಯೋಜನೆಯೊಂದಿಗೆ, ಐ-ಪಲ್ಸ್ ಮುಕ್ತ ಆಮೂಲಾಗ್ರ ಹಾನಿಯ ವಿರುದ್ಧ ಅತ್ಯುತ್ತಮವಾದ ರಕ್ಷಣೆಯಾಗಿದೆ, ಆರೋಗ್ಯಕರ ಕೊಲೆಸ್ಟ್ರಾಲ್ ನಿರ್ವಹಣೆಯನ್ನು ಬೆಂಬಲಿಸುತ್ತದೆ, ರೋಗನಿರೋಧಕ ಶಕ್ತಿಯನ್ನು ಸುಧಾರಿಸುತ್ತದೆ…. ಬ್ಲೂ ಬೆರಿ, ಬ್ಲ್ಯಾಕ್ ಬೆರಿ ಮತ್ತಿತರ ಇಂಗ್ರಿಡಿಯೆಂಟ್ಸ್ ಸೇರಿಸಿ ಮಾಡಿರುವ ಫುಡ್ ಸಪ್ಲಿಮೆಂಟ್ ಖರೀದಿಸಿ ಸುರಕ್ಷಿತರಾಗಿರಿ ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ 7204119232
ಹೆತ್ತವರಿಗೆ ಮಕ್ಕಳೆಂದರೆ ಹೀಗಿರಬೇಕು ಕಣ್ರಿ….
ತಂದೆಗೆ ಸೈಕಲ್ ಬಿಟ್ಟರೆ ಬೇರೆ ವಾಹನ ಚಲಾಯಿಸಲು ಬರಲ್ಲ. ವಯಸ್ಸಾದ ಕಾರಣ ಸೈಕಲ್ ತುಳಿಯುವುದು ಕಷ್ಟವಾಗಿತ್ತು. ತಂದೆಗೆ ಪಕ್ಕದೂರುಗಳಿಗೆ ಸಂಚರಿಸಲು ಅನುಕೂಲವಾಗುವಂತೆ ಏನಾದರೂ ವಾಹನ ಕಂಡು ಹಿಡಿಯಬೇಕುಎಂದು ಚಿಂತಿಸಿದಾಗ ಹುಟ್ಟಿಕೊಂಡ ಹೊಸ ಆವಿಸ್ಕಾರವೇ ಬ್ಯಾಟರಿ ಬೈಸಿಕಲ್.
ಬೈಂದೂರು ತಾಲೂಕಿನ ಯೋಜನಾ ನಗರ ನಿವಾಸಿ ವಾಸುದೇವ ಆಚಾರ್ಯಹಾಗೂ ಶ್ರೀಮತಿ ಆಚಾರ್ಯ ದಂಪತಿಯ ಪುತ್ರ ಗುರುಮೂರ್ತಿ ಆಚಾರ್ಯ ಈಹೊಸ ವಾಹನ ಆವಿಷ್ಕರಿಸಿದ ಸಾಧಕ. ಪಿಯುಸಿ ತನಕ ಓದಿರುವಗುರುಮೂರ್ತಿ ಕಳೆದ 8 ವರ್ಷಗಳಿಂದ ಬೈಂದೂರಿನಲ್ಲಿ ಅಲ್ಯೂಮಿನಿಯಂ ವರ್ಕ್ಸ್ ವೃತ್ತಿ ಮಾಡಿಕೊಂಡಿದ್ದಾರೆ.
ಸಾಮಾನ್ಯವಾಗಿ ಸೈಕಲ್‌ನ್ನು ತುಳಿದು ಸವಾರಿ ಮಾಡ ಬೇಕಾ ಗುತ್ತದೆ. ಆದರೆ ಈ ಸೈಕಲ್‌ನ್ನು ತುಳಿಯ ಬೇಕಾಗಿಲ್ಲ. ಬೈಕ್‌ಗಳಂತೆ ಎಕ್ಸಲೇಟರ್‌ಕೊಟ್ಟರೆ ಸಾಕು. ಸಾಮಾನ್ಯ ಸೈಕಲ್‌ಗೆ ಸುಮಾರು 24 ವೋಲ್ಟೇಜ್ ಬ್ಯಾಟರಿ(ಪಲ್ಸರ್‌ಬೈಕ್‌ನಲ್ಲಿರುವ ಬ್ಯಾಟರಿಯ ಎರಡರಷ್ಟುಅಂದರೆ ಎರಡು ಬ್ಯಾಟರಿ) ಹಾಗೂರುಬೊಡೋ ಮೋಟಾರೊಂದನ್ನುಜೋಡಿಸಿದ್ದಾರೆ.
ಸಾಮಾನ್ಯ ಸೈಕಲ್‌ಗಳಿಗೆ ಒಂದೇ ಫ್ರೀ ವೀಲ್‌ಇದ್ದರೆ, ಈ ಸೈಕಲ್‌ಗೆ ರುಬೊಡೋ ಮೋಟಾರ್‌ತಿರುಗಲು ಅನುಕೂಲವಾಗುವಂತೆ ಮಗದೊಂದು ಫ್ರೀ ವೀಲ್‌ಅಳವಡಿಸಿದ್ದಾರೆ. ಬ್ಯಾಟರಿ ಹಾಗೂ ಮೋಟಾರ್‌ಗೆ ತಾವೇ ಸೈಡ್‌ಕವರ್ತಯಾರಿಸಿರುವುದಲ್ಲದೇ, ಹೆಡ್‌ಲೈಟ್ ಹಾರ್ನ್ ಜೋಡಿಸಿದ್ದು, ಸುಮಾರು 12ಸಾವಿರ ರೂ. ವೆಚ್ಚವಾಗಿದೆ.
ಬ್ಯಾಟರಿಯನ್ನು 4 ಗಂಟೆ ಚಾರ್ಜ್ ಮಾಡಿದರೆ, 13 ಕಿ.ಮೀ. ತನಕ ಸಂಚರಿಸಬಹುದಾಗಿದ್ದು, ಫುಲ್ ಚಾರ್ಜ್ ಮಾಡಿದರೆ 20 ಕಿ.ಮೀ. ತನಕ ಪ್ರತಿ ಗಂಟೆಗೆ 20 ಕಿ. ಮೀ. ವೇಗದಲ್ಲಿ ಸಂಚರಿಸಬಹುದು. ಒಂದು ವೇಳೆ ಮಾರ್ಗ ಮಧ್ಯೆ ಬ್ಯಾಟರಿಯ ಚಾರ್ಜ್ ಕಡಿಮೆಯಾದರೆ, ತುಳಿದುಕೊಂಡು ಸಂಚರಿಸಬಹುದು ಎನ್ನುತ್ತಾರೆ ಗುರುಮೂರ್ತಿ ಆಚಾರ್ಯ.
ಕುಡ್ಲದಲ್ಲಿ ಸಿಗುವ ಇಂದಿನ ತಾಜಾ ಮಾತು ಎಂಚಿನ ಬರ್ಸಾ ಮಾರಾಯ್ರೆ
ಮಳೆಗಾಲ ಎನ್ನುವ ಮಾತು ಕುಡ್ಲಕ್ಕೆ ಸರಿಯಾಗಿ ಅನ್ವಯವಾಗಲೇ ಇಲ್ಲ. ಆದರೆ ಕಳೆದೆರಡು ದಿನಗಳಿಂದ ಸುರಿಯುತ್ತಿರುವ ಮಳೆ ಕುಡ್ಲದ ಜನರಿಗೆ ರಿಯಲ್ ಮಳೆಗಾಲವನ್ನು ನೆನಪಿಸಿತು. ಬಹಳ ದಿನಗಳ ನಂತರ ಕುಡ್ಲದ ಜನರು ಎಂಚಿನ ಬರ್ಸಾ ಮಾರಾಯ್ರೆ ನನಲಾ ಬೋಡು( ಎಂತಹ ಮಳೆ ಮಾರಾಯ್ರೆ ಇನ್ನಷ್ಟು ಬರಲಿ) ಎನ್ನುವ ಮಾತುಗಳೇ ಜಾಸ್ತಿಯಾಗಿ ಕೇಳಲು ಸಿಕ್ಕಿದೆ. ಮಳೆರಾಯನ ಅದ್ಭುತ ಆಟ ಕ್ರಿಕೆಟ್, ರಾಜಕೀಯಕ್ಕಿಂತಲ್ಲೂ ವಿಶೇಷ ದಾಖಲೆಯಾಗಿದೆ.