ತಂದೆಗೆ ಸೈಕಲ್ ಬಿಟ್ಟರೆ ಬೇರೆ ವಾಹನ ಚಲಾಯಿಸಲು ಬರಲ್ಲ. ವಯಸ್ಸಾದ ಕಾರಣ ಸೈಕಲ್ ತುಳಿಯುವುದು ಕಷ್ಟವಾಗಿತ್ತು. ತಂದೆಗೆ ಪಕ್ಕದೂರುಗಳಿಗೆ ಸಂಚರಿಸಲು ಅನುಕೂಲವಾಗುವಂತೆ ಏನಾದರೂ ವಾಹನ ಕಂಡು ಹಿಡಿಯಬೇಕುಎಂದು ಚಿಂತಿಸಿದಾಗ ಹುಟ್ಟಿಕೊಂಡ ಹೊಸ ಆವಿಸ್ಕಾರವೇ ಬ್ಯಾಟರಿ ಬೈಸಿಕಲ್.
ಬೈಂದೂರು ತಾಲೂಕಿನ ಯೋಜನಾ ನಗರ ನಿವಾಸಿ ವಾಸುದೇವ ಆಚಾರ್ಯಹಾಗೂ ಶ್ರೀಮತಿ ಆಚಾರ್ಯ ದಂಪತಿಯ ಪುತ್ರ ಗುರುಮೂರ್ತಿ ಆಚಾರ್ಯ ಈಹೊಸ ವಾಹನ ಆವಿಷ್ಕರಿಸಿದ ಸಾಧಕ. ಪಿಯುಸಿ ತನಕ ಓದಿರುವಗುರುಮೂರ್ತಿ ಕಳೆದ 8 ವರ್ಷಗಳಿಂದ ಬೈಂದೂರಿನಲ್ಲಿ ಅಲ್ಯೂಮಿನಿಯಂ ವರ್ಕ್ಸ್ ವೃತ್ತಿ ಮಾಡಿಕೊಂಡಿದ್ದಾರೆ.
ಸಾಮಾನ್ಯವಾಗಿ ಸೈಕಲ್‌ನ್ನು ತುಳಿದು ಸವಾರಿ ಮಾಡ ಬೇಕಾ ಗುತ್ತದೆ. ಆದರೆ ಈ ಸೈಕಲ್‌ನ್ನು ತುಳಿಯ ಬೇಕಾಗಿಲ್ಲ. ಬೈಕ್‌ಗಳಂತೆ ಎಕ್ಸಲೇಟರ್‌ಕೊಟ್ಟರೆ ಸಾಕು. ಸಾಮಾನ್ಯ ಸೈಕಲ್‌ಗೆ ಸುಮಾರು 24 ವೋಲ್ಟೇಜ್ ಬ್ಯಾಟರಿ(ಪಲ್ಸರ್‌ಬೈಕ್‌ನಲ್ಲಿರುವ ಬ್ಯಾಟರಿಯ ಎರಡರಷ್ಟುಅಂದರೆ ಎರಡು ಬ್ಯಾಟರಿ) ಹಾಗೂರುಬೊಡೋ ಮೋಟಾರೊಂದನ್ನುಜೋಡಿಸಿದ್ದಾರೆ.
ಸಾಮಾನ್ಯ ಸೈಕಲ್‌ಗಳಿಗೆ ಒಂದೇ ಫ್ರೀ ವೀಲ್‌ಇದ್ದರೆ, ಈ ಸೈಕಲ್‌ಗೆ ರುಬೊಡೋ ಮೋಟಾರ್‌ತಿರುಗಲು ಅನುಕೂಲವಾಗುವಂತೆ ಮಗದೊಂದು ಫ್ರೀ ವೀಲ್‌ಅಳವಡಿಸಿದ್ದಾರೆ. ಬ್ಯಾಟರಿ ಹಾಗೂ ಮೋಟಾರ್‌ಗೆ ತಾವೇ ಸೈಡ್‌ಕವರ್ತಯಾರಿಸಿರುವುದಲ್ಲದೇ, ಹೆಡ್‌ಲೈಟ್ ಹಾರ್ನ್ ಜೋಡಿಸಿದ್ದು, ಸುಮಾರು 12ಸಾವಿರ ರೂ. ವೆಚ್ಚವಾಗಿದೆ.
ಬ್ಯಾಟರಿಯನ್ನು 4 ಗಂಟೆ ಚಾರ್ಜ್ ಮಾಡಿದರೆ, 13 ಕಿ.ಮೀ. ತನಕ ಸಂಚರಿಸಬಹುದಾಗಿದ್ದು, ಫುಲ್ ಚಾರ್ಜ್ ಮಾಡಿದರೆ 20 ಕಿ.ಮೀ. ತನಕ ಪ್ರತಿ ಗಂಟೆಗೆ 20 ಕಿ. ಮೀ. ವೇಗದಲ್ಲಿ ಸಂಚರಿಸಬಹುದು. ಒಂದು ವೇಳೆ ಮಾರ್ಗ ಮಧ್ಯೆ ಬ್ಯಾಟರಿಯ ಚಾರ್ಜ್ ಕಡಿಮೆಯಾದರೆ, ತುಳಿದುಕೊಂಡು ಸಂಚರಿಸಬಹುದು ಎನ್ನುತ್ತಾರೆ ಗುರುಮೂರ್ತಿ ಆಚಾರ್ಯ.
ಹೆತ್ತವರಿಗೆ ಮಕ್ಕಳೆಂದರೆ ಹೀಗಿರಬೇಕು ಕಣ್ರಿ….
July 25, 2019