Tagged: rickshaw

ಕುಡ್ಲದ ಮೊದಲ ರಿಕ್ಷಾ ಚಾಲಕಿ ವಿಜಯಕ್ಕ !

ಸುರತ್ಕಲ್ ಪಾರ್ಕ್‌ನಲ್ಲಿ ಸುಮಾರು 10 ವರ್ಷದಿಂದ ರಿಕ್ಷಾ ಚಲಾಯಿಸುತ್ತಿದ್ದ ಹೊಸಬೆಟ್ಟು ನಿವಾಸಿ ದಿ.ಎಚ್.ಟಿ.ಮೂರ್ತಿ ಅವರ ಪತ್ನಿ ಈ ವಿಜಯಲಕ್ಷ್ಮಿ. ಅವರದ್ದು ಬಡ ಕುಟುಂಬ ಬಾಡಿಗೆ ಮನೆಯಲ್ಲಿ ವಾಸ. ಇಬ್ಬರು ಮಕ್ಕಳಿದ್ದಾರೆ.

ಪತಿ ಇತ್ತೀಚೆಗೆ ಹೃದಯಾಘಾತದಿಂದ ನಿಧನರಾಗಿದ್ದರು. ಅವರು ತಾನು ನಿಧನರಾಗುವ ಮೊದಲೇ ಪತ್ನಿಗೆ ರಿಕ್ಷಾ ಚಲಾಯಿಸಲು ಕಲಿಸಿ, ಲೈಸನ್ಸ್ ಕೂಡಾ ಮಾಡಿಸಿಕೊಟ್ಟಿದ್ದರು. ಈಗ ರಿಕ್ಷಾದ ಮೂಲಕ ವಿಜಯಕ್ಕ ಬದುಕು ಕಟ್ಟುತ್ತಿದ್ದಾರೆ.

ರಿಕ್ಷಾ ಬಿಡುವ ಪುರುಷರ ನಡುವೆ ಇಂತಹ ಕ್ಷೇತ್ರದಲ್ಲಿ ವಿಜಯಕ್ಕ ನೆಲೆ ನಿಂತಿರೋದು ಮಾತ್ರ ಖುಷಿಯ ವಿಚಾರ. ವಿಜಯಕ್ಕನ ಬದುಕು ಈ ರಿಕ್ಷಾದಿಂದ ಗಟ್ಟಿಯಾದರೆ ಸಾವಿರಾರು ಮಹಿಳೆಯರು ಇಂತಹ ಕೆಲಸಕ್ಕೆ ಮುಂದಾಗುತ್ತಾರೆ.

ಕದ್ರಿ ಬ್ರಹ್ಮಕಲಶಕ್ಕೆ ರಿಕ್ಷಾ ಚಾಲಕರ ವಿಶಿಷ್ಟ ಸೇವೆ

ವಿಶ್ವಹಿಂದೂ ಪರಿಷತ್ ಬಜರಂಗದಳ ಆಟೋ ಚಾಲಕರ ಮಾಲಕರ ಘಟಕ ವತಿಯಿಂದ ಶ್ರೀ ಕ್ಷೇತ್ರ ಕದ್ರಿ ಬ್ರಹ್ಮಕಲಶದ ಅಂಗವಾಗಿ ಮೇ 9 ರಂದು ಬೆಳಗ್ಗೆ 10 ರಿಂದ ಸಂಜೆ 4 ರವರೆಗೆ ಉಚಿತ ಆಟೊರಿಕ್ಷಾ ಸೇವೆ ಸಿಗಲಿದೆ.
ಘಟಕದ ನೂರು ರಿಕ್ಷಾ ಚಾಲಕರು ಕೆಪಿಟಿ ಬಳಿಯಿಂದ, ಬಂಟ್ಸ್ ಹಾಸ್ಟೆಲ್‌ನಿಂದ, ಮಲ್ಲಿಕಟ್ಟೆಯಿಂದ ದೇವಸ್ಥಾನಕ್ಕೆ ಉಚಿತವಾಗಿ ಕರೆದುಕೊಂಡು ಹೋಗಿ ಬಿಡುವ ಹಾಗೂ ದೇವಸ್ಥಾನದಿಂದ ಸಮೀಪದ ಬಸ್ ನಿಲ್ದಾಣಗಳಿಗೆ ಬಿಡುವ ವ್ಯವಸ್ಥೆ ಮಾಡಲಾಗಿದೆ.

ಈ ಮೂಲಕ ಮಂಗಳೂರಿನ ರಿಕ್ಷಾ ಚಾಲಕರು ಕದ್ರಿ ಶ್ರೀಮಂಜುನಾಥ ದೇವರ ಭಕ್ತರಿಗೆ ಪ್ರೀತಿಯ ಸೇವೆ ನೀಡುವ ಮೂಲಕ ವಿಶೇಷ ಸೇವೆ ಮಾಡುತ್ತಿದ್ದಾರೆ.

ಮಂಗಳೂರಿನ ಮೊದಲ ರಿಕ್ಷಾ ಚಾಲಕ ಮೊಂತು‌

ಇಳಿ ವಯಸ್ಸಲ್ಲೂ ಎಳೆಯರಂತಹ ಉತ್ಸಾಹ. 62 ವರ್ಷಗಳಿಂದ ಆಟೋ ರಿಕ್ಷಾ ಚಾಲಕ. ಈ ವರೆಗೆ ಒಂದೇ ಒಂದು ಪೊಲೀಸ್‌ ಕೇಸ್‌ ಇಲ್ಲದೆ, ಅಪಘಾತ ಎಸಗದೆ ನಿಷ್ಠೆಯಿಂದ ದುಡಿಯುತ್ತಿರುವ ಕಾಯಕಯೋಗಿ. ವಿಶೇಷವೆಂದರೆ ಮಂಗಳೂರಿನಲ್ಲಿ ಪ್ರಪ್ರಥಮವಾಗಿ ಓಡಾಟ ನಡೆಸಿದ ರಿಕ್ಷಾದ ಚಾಲಕ ಮೊಂತು‌ ಲೋಬೊ ಎನ್ನುವುದು ವಿಶೇಷ. ಈಗಲೂ ಮಂಗಳೂರಿನ ಪಡೀಲ್, ನಾಗುರಿ, ಕಂಕನಾಡಿ ಅಸುಪಾಸಿನ ರಿಕ್ಷಾ ನಿಲ್ದಾಣ ದಲ್ಲಿ ಅವರ ರಿಕ್ಷಾ ಕಾಣ ಸಿಗುತ್ತದೆ.