Kudla City

ಶಾಸಕರ ಐಡಿಯಾಕ್ಕೆ ಭೇಶ್ ಎಂದ ಸ್ವಿಗ್ಗಿ

ನಮ್ಮ ಕುಡ್ಲ ಸಿಟಿ ಬೆಳೆಯುತ್ತಿದೆ. ಅದರಲ್ಲೂ ಈ ಬೆಳವಣಿಗೆಯ ಜತೆಗೆ ಪ್ಲಾಸ್ಟಿಕ್ ವಸ್ತುಗಳ ಬಳಕೆ ದಿನನಿತ್ಯ ಏರಿಕೆಯಾಗುತ್ತಿದೆ. ಆಹಾರದಲ್ಲೂ ಪ್ಲಾಸ್ಟಿಕ್ ಲಕೋಟೆ(ಬ್ಯಾಗ್)ಗಳ ಪ್ರಮಾಣ ಏರಿಕೆಯಾಗುತ್ತಿದೆ.
ಮಂಗಳೂರಿನ ಫುಡ್ ಡೆಲಿವರಿ ಸಿಸ್ಟಂ ಕೂಡ ಅಷ್ಟೇ ವೇಗವಾಗಿ ಓಡುತ್ತಿದೆ. ಇಂತಹ ಸಮಯದಲ್ಲಿ ಫುಡ್ ಡೆಲಿವರಿಯಲ್ಲಿ ಕರಾವಳಿಯಲ್ಲಿ ಹೇರಳವಾಗಿ ಸಿಗುವ ಬಾಳೆ ಎಳೆಯನ್ನು ಬಳಸಿಕೊಳ್ಳುವಂತೆ ಮಂಗಳೂರು ದಕ್ಷಿಣ ಶಾಸಕ ವೇದವ್ಯಾಸ ಕಾಮತ್ ಅವರು ತಮ್ಮ ಫೇಸ್‌ಬುಕ್ ಖಾತೆಯಲ್ಲಿ ಮಾಹಿತಿ ಹಂಚುವ ಕಾರ‍್ಯ ಮಾಡಿದ್ದರು.
ಇದಕ್ಕೆ ಸ್ವಿಗ್ಗಿ ಫುಡ್ ಡೆಲಿವರಿ ಕಂಪನಿ ಕೂಡ ಈ ಕುರಿತು ಪಾಸಿಟಿವ್ ಅಭಿಪ್ರಾಯವನ್ನು ನೀಡುವ ಜತೆಗೆ ಮುಂದಿನ ದಿನಗಳಲ್ಲಿ ತಮ್ಮ ಪಾಲುದಾರ ಹೋಟೆಲ್‌ಗಳ ಜತೆಗೆ ಕಂಪನಿ ಕೂಡ ಈ ಕುರಿತು ಚಿಂತನೆ ನಡೆಸುತ್ತದೆ ಎನ್ನುವ ಅಭಿಪ್ರಾಯ ತಾಳಿದೆ.

ಮಂಗಳೂರು ವಿವಿ ಪದವಿ ಕಾಲೇಜುಗಳ ಆರಂಭ

ಮಂಗಳೂರು ವಿಶ್ವವಿದ್ಯಾನಿಲಯದ ಪದವಿ ಕಾಲೇಜುಗಳು ಜೂ.20 ರಿಂದ ಆರಂಭ ವಾಗಲಿದೆ. ವಿಶೇಷವಾಗಿ ಈ ಬಾರಿ ಸರಕಾರಿ ಪದವಿ ಕಾಲೇಜು ಗಳಲ್ಲಿ ಇನ್ನೂ ಕೂಡ ಅತಿಥಿ ಉಪನ್ಯಾಸ ಕರ ನೇಮಕ ನಡೆಯದ ಕಾರಣ ಸರಕಾರಿ ಕಾಲೇಜಿನಲ್ಲಿ ಪದವಿ ಕಲಿಯುವ ವಿದ್ಯಾರ್ಥಿಗಳಿಗೆ ಕೊಂಚ ತರಗತಿಗಳು ನಡೆಯದ ಸ್ಥಿತಿಯಲ್ಲಿ ಮುಂದೆ ಸಾಗಲಿದೆ ಉಳಿದಂತೆ ಹೊಸ ವಿದ್ಯಾರ್ಥಿಗಳು ಪದವಿ ತರಗತಿಯನ್ನು ಖುಷಿಯಿಂದ ಸ್ವಾಗತಿಸುತ್ತಾರೆ.

ಬಿಜಿಎಸ್‌ನಲ್ಲಿ ಗಮನ ಸೆಳೆಯುವ ಬೆಳದಿಂಗಳ ಚಿಂತನ ಚಾವಡಿ

ಜನ್ಮಭೂಮಿ ಸ್ವರ್ಗಕ್ಕಿಂತಲೂ ಮಿಗಿಲಾದುದು ಇಂತಹ ಪುಣ್ಯಭೂಮಿ ಭಾರತದಲ್ಲಿ ಜನ್ಮ ತಾಳಿರುವುದು ನಮ್ಮ ಸುಕೃತದ ಫಲ. ಪೂರ್ವಿಕರು, ಋಷಿಮುನಿ, ಸಂತರು ಹಾಕಿ ಕೊಟ್ಟ ಶ್ರೇಷ್ಠ ಪರಂಪರೆ ನಮ್ಮ ಭರತಖಂಡವನ್ನು ಇತರೆಲ್ಲರಿಗಿಂತ ವಿಶಿಷ್ಟವಾಗಿಸಿ, ವಿಶ್ವಗುರು ಸ್ಥಾನದಲ್ಲಿರುವಂತೆ ಮಾಡಿದೆ. ಇದಕ್ಕೆ ನಮ್ಮ ಸಂಸ್ಕಾರ, ಸಂಸ್ಕೃತಿಯೇ ಮೂಲ ಕಾರಣ ಎಂದು ಶ್ರೀಆದಿಚುಂಚನ ಗಿರಿ ಮಂಗಳೂರು ಶಾಖಾಮಠದ ಶ್ರೀ ಧರ್ಮಪಾಲನಾಥ ಸ್ವಾಮೀಜಿ ಹೇಳಿದರು.

ಅವರು ಶಾಖಾಮಠದಲ್ಲಿ ನಡೆದ ಬೆಳದಿಂಗಳ ಚಿಂತನ ಚಾವಡಿ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿ ಮಾತನಾಡಿ, ಜನ್ಮದಿಂದ ಮರಣದವರೆಗೂ ಆಚರಿಸಲ್ಪಡುವ ನಮ್ಮ ಆಚಾರಗಳು ವಿಶ್ವದಲ್ಲೆಲ್ಲೂ ಕಾಣ ಸಿಗದು. ಇಂತಹ ಸಂಸ್ಕೃತಿ, ಸಂಸ್ಕಾರಗಳನ್ನು ಉಳಿಸಿ ಬೆಳೆಸಿ, ಮುಂದಿನ ಪೀಳಿಗೆಗೆ ಹಸ್ತಾಂತರಿಸುವ ಜವಾಬ್ದಾರಿ ನಮ್ಮ ಮೇಲಿದೆ. ಹೆತ್ತವರು ಗುರುಗಳು, ಅತಿಥಿಗಳನ್ನು ದೇವರೆಂದು ಪೂಜಿಸಿದ ಈ ದೇಶದಲ್ಲಿ ಇಂದು ಆಗುತ್ತಿರುವ ಬದಲಾವಣೆಗಳು ಶುಭ ಸಂಕೇತವಲ್ಲ. ಹೆತ್ತವರನ್ನು ವೃದ್ದಾಶ್ರಮಕ್ಕೆ ಸೇರಿಸುವುದು ಭಾರತೀಯ ಸಂಸ್ಕೃತಿ ಅಲ್ಲ ಎಂಬುದನ್ನು ಯುವ ಪೀಳಿಗೆ ಮನಗಾಣಬೇಕು. ಈ ತಪೋ ಭೂಮಿಯ ಭವ್ಯ ಸಂಸ್ಕೃತಿಯನ್ನು ಉಳಿಸಲು ನಾವೆಲ್ಲರು ಪಣತೊಡಬೇಕು ಎಂದರು.
ವಿದ್ವಾಂಸ ಮುನಿರಾಜ ರೆಂಜಾಳ ಅವರು ಭಾರತೀಯ ಸಾಂಸ್ಕೃತಿಕ ಪರಂಪರೆ ಬಗ್ಗೆ ಉಪನ್ಯಾಸ ನೀಡಿದರು. ಕಾವೂರು ಬಂಟರ ಭಜನಾ ತಂಡದವರು ಭಜನಾ ಕಾರ್ಯಕ್ರಮ ನಡೆಸಿ ಕೊಟ್ಟರು. ಪ್ರಾಧ್ಯಾಪಕ ಸುಬ್ರಹ್ಮಣ್ಯ ಸ್ವಾಗತಿಸಿದರು. ಸಂಸ್ಥೆಯ ಮ್ಯಾನೇಜರ್ ಸುಬ್ಬಕಾರಡ್ಕ ವಂದಿಸಿದರು. ನರಸಿಂಹ ಕುಲಕರ್ಣಿ ನಿರೂಪಿಸಿದರು.

ಮಂಗಳೂರು ವಿವಿ: ಗಡಿನಾಡ ವಿದ್ಯಾರ್ಥಿಗಳಿಗೆ ವಿಶೇಷ ಮೀಸಲಾತಿ

ಹೊರ ರಾಜ್ಯದಲ್ಲಿ1ರಿಂದ 10ರವರೆಗೆ ಪ್ರೌಢ ಶಿಕ್ಷಣ ವನ್ನು ಪಡೆದಿರುವ ಕನ್ನಡ ಮಾಧ್ಯಮದ ವಿದ್ಯಾರ್ಥಿಗಳಿಗೆ ರಾಜ್ಯದಲ್ಲಿ ಉನ್ನತ ಶಿಕ್ಷಣ ಪಡೆಯುವ ಸಂದರ್ಭದಲ್ಲಿ ಶೇ.೫ಮೀಸಲಾತಿ ನೀಡಲು ಮಂಗಳೂರು ವಿಶ್ವವಿದ್ಯಾಲಯದ ಶೈಕ್ಷಣಿಕ ಮಂಡಳಿಯ ಸಭೆಯಲ್ಲಿ ಅನುಮೋದನೆ ನೀಡಲಾಗಿದೆ.
ಗಡಿನಾಡು ಮತ್ತು ರಾಜ್ಯದ ಹೊರಗೆ ಕನ್ನಡ ಮಾಧ್ಯಮ ದಲ್ಲಿ ಅಧ್ಯಯನ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಶೇ 5 ರಷ್ಟು ಸೀಟುಗಳನ್ನು ಕಾಯ್ದಿರಿಸಲು ಕನ್ನಡ ಅಭಿವೃದ್ಧಿ ಪ್ರಾಧಿಕಾ ರದ ಸುತ್ತೋಲೆಯ ಪ್ರಕಾರ ಶೈಕ್ಷಣಿಕ ಮಂಡಳಿ ಅನುಮೋದನೆ ನೀಡಲು ನಿರ್ಧರಿ ಸಲು ತೀರ್ಮಾನಿಸಿದೆ ಎಂದು ಕುಲಪತಿ ಪಿ.ಎಸ್. ಯಡ ಪಡಿತ್ತಾಯ ತಿಳಿಸಿದ್ದಾರೆ.

ಕೂಳೂರು ಹಳೇ ಸೇತುವೆ ಸಂಚಾರಕ್ಕಿಲ್ಲ ಸಧ್ಯ ತಡೆ

ಒಂದಲ್ಲ ಎರಡಲ್ಲ ಬರೋಬರಿ 66 ವರ್ಷಕ್ಕಿಂತ ಹಳೆಯ ಕೂಳೂರು ಸೇತುವೆ ಸಂಚಾರಕ್ಕೆ ಸಧ್ಯಕ್ಕೆ ನಿರ್ಬಂಧ ಹೇರುವ ಸಾಧ್ಯತೆ ಕಡಿಮೆ. ಕಾರಣ ದ.ಕ.ಜಿಲ್ಲಾಧಿಕಾರಿ ಅವರು ಮಂಗಳೂರು ಎಸಿ ಅವರ ಸಮಿತಿ ಗೆ ನೀಡಿದ ಅವಧಿ ಮುಗಿದಿದೆ.

ಎನ್ಎಚ್ ಅಧಿಕಾರಿಗಳು ಸರಿಯಾದ ವರದಿ ನೀಡದ ಪರಿಣಾಮ ಈ ಸಂಚಾರ ನಿರ್ಬಂಧ ಕಾರ್ಯ ಮುಂದೆ ಸಾಗೋದು ಗ್ಯಾರಂಟಿ ಯಾಗಿದೆ.