ಮಳೆರಾಯನ ಆಗಮನಕ್ಕೆ ಕಾದು ಕೂತಿದ್ದ ಕುಡ್ಲದ ಜನರು ಈಗ ಫುಲ್ ಚಂಡಿ ಮುದ್ದೆ ಆಗಿದ್ದಾರೆ. ಎರಡು ದಿನಗಳಿಂದ ನಿಧಾನವಾಗಿ ಇಳೆಗೆ ಬಂದ ಮಳೆರಾಯ ಪೂರ್ಣ ಪ್ರಮಾಣದಲ್ಲಿ ತನ್ನ ಕೆಲಸ ಆರಂಭ ಮಾಡಿದ್ಸಾನೆ. ವಿಶೇಷ ಎಂದರೆ ಮಳೆರಾಯನ ಆಗಮನದ ನಿರೀಕ್ಷೆ ಇಟ್ಟು ಕೊಳ್ಳ ದ ಸ್ಥಳೀಯ ಆಡಳಿತ ತನ್ನ ಕೆಲಸವನ್ನು ಪೂರ್ಣ ಗೊಳಿಸದೇ ಇರುವುದರಿಂದ ರಸ್ತೆ ಎಲ್ಲವೂ ತೋಡುಗಳಾಗಿ ಬದಲಾಗಿದೆ. ತೋಡುಗಳು ಪೂರ್ಣ ಪ್ರಮಾಣದಲ್ಲಿ ಹೂಳು ತೆಗೆಯದ ಪರಿಣಾಮ ಪೂರ್ತಿ ತುಂಬಿ ನೀರು ರಸ್ತೆಯಲ್ಲಿ ಹರಿದಾಡುತ್ತಿದೆ.
Kudla City
ಪವಾಡ ಪುರುಷ ಸಂತ ಅಂತೋನಿ ಹಬ್ಬದ ಸಂಭ್ರಮ
ಕ್ರೈಸ್ತ ಸಮುದಾಯದ ಧಾರ್ಮಿಕ ನಂಬಿಕೆಯಲ್ಲಿ ವಿಶಿಷ್ಟ ಸ್ಥಾನದಲ್ಲಿರುವ ಸಂತರ ಪಟ್ಟಿಯಲ್ಲಿ ಸಂತ ಅಂತೋನಿ ಅವರ ಹೆಸರು ಮೊದಲ ಸ್ಥಾನದಲ್ಲಿ ಕಾಣಿಸಿಕೊಳ್ಳುತ್ತದೆ.
ವಿಶೇಷ ಎಂದರೆ ಮಂಗಳೂರು ಧರ್ಮಪ್ರಾಂತ್ಯದ ಬನ್ನೂರು, ಅಲ್ಲಿಪಾದೆ, ನಾರಾವಿ, ಉಜಿರೆ, ಕೂಳೂರು, ಪೆರ್ಮಾಯಿ ಚರ್ಚ್‌ಗಳ ಜತೆಗೆ ಮಿಲಾಗ್ರಿಸ್‌ನಲ್ಲೂ ಇವರ ಪುಣ್ಯ ಕ್ಷೇತ್ರವಿದೆ. ಜೆಪ್ಪುವಿನಲ್ಲಿ ಚಾರಿಟಿ ಹೋಮ್ ಕೂಡ ಪವಾಡ ಪುರುಷ ಸಂತ ಅಂತೋನಿ ಅವರ ಭಕ್ತಿಗೆ ಪೂರಕವಾದ ಸಾಕ್ಷ್ಯಗಳು.
ವಿಶೇಷ ಎಂದರೆ ಸಂತ ಅಂತೋನಿ ಅವರ ಹಬ್ಬ ಪ್ರತಿ ವರ್ಷನೂ ಮಳೆಗಾಲದಲ್ಲಿಯೇ ಬರುತ್ತದೆ. ಈ ಹಬ್ಬದ ಆಚರಣೆಯ ಸಮಯದಲ್ಲಿ ಉತ್ತಮ ಮಳೆಯಾಗುತ್ತದೆ ಎನ್ನುವ ನಂಬಿಕೆ ಬಹಳಷ್ಟು ಮಂದಿಯಲ್ಲಿ ಇರುತ್ತದೆ.
ಪವಾಡ ಪುರುಷನ ಕೃಪೆಗೆ ಪಾತ್ರರಾದರೆ ಎಲ್ಲ ಸಮಸ್ಯೆಗಳಿಂದ ಪರಿಹಾರ ಸಿಗುತ್ತದೆ ಎನ್ನುವ ಭಕ್ತ ಸಮೂಹ ಹಬ್ಬವನ್ನು ಜೂ.೧೩ರಂದು ಆಚರಿಸುತ್ತಾರೆ.
ಕುಡ್ಲದಲ್ಲಿ ಸಿಂಗಲ್ ಬಂಗುಡೆಗೆ ಭರ್ತಿ 100
ಒಂದೆಡೆ ಯಾಂತ್ರೀಕೃತ ಮೀನುಗಾರಿಕೆ ನಿಂತಿದೆ. ಇನ್ನೊಂದು ಕಡೆಯಲ್ಲಿ ನಾಡದೋಣಿ ಕೂಡ ಮೀನುಗಾರಿಕೆ ಗೆ ಹೋಗುತ್ತಾ ಇಲ್ಲ ಇದರ ಪರಿಣಾಮ ಕುಡ್ಲದಲ್ಲಿ ಮೀನಿಗೆ ರೇಟ್ ಜಾಸ್ತಿಯಾಗುತ್ತಿದೆ. ಬೂತಾಯಿಗೂ ಬಂಗಾರದ ಬೆಲೆಯಿದೆ.
ಬಂಗುಡೆಯಂತೂ ದೊಡ್ಡ ಗಾತ್ರದ್ದು ಸಿಂಗಲ್ ಗೆ ಭರ್ತಿ 100 ರೂ. ಆಗಿದೆ. ಅದರಲ್ಲೂ ಮುಖ್ಯವಾಗಿ ಶೀತಲೀಕೃತ ಬಂಗುಡೆ ಕೆಜಿಗೆ ಭರ್ತಿ 450 ರೂ ಆಸುಪಾಸಿನಲ್ಲಿದೆ.
ಕುಡ್ಲದ ಟ್ಯಾಲೆಂಟ್ ಹುಡುಗರ ಸೈಕಲ್
ಮುಲ್ಲರಪಟ್ಣಾದ ಮೂವರು ಹುಡುಗರು ತಯಾರಿಸಿದ ಮೂರು ಚಕ್ರದ ಸೈಕಲ್ ವಿಶ್ವದ ಎಲ್ಲೆಡೆ ಸುದ್ದಿಯಾಗುತ್ತಿದೆ. ಹೌದು ಹೈಸ್ಕೂಲ್ ಹಾಗೂ ಪ್ರೈಮರಿ ಓದುತ್ತಿರುವ ಮೂವರು ಸ್ನೇಹಿತರು ಪ್ರೌಢಶಾಲೆಯಲ್ಲಿ ಸಿಗುವ ಸೈಕಲ್‌ಗೆ ಹೊಸತೊಂದು ರೂಪ ನೀಡಿದ್ದು ಎಲ್ಲರನ್ನೂ ಆಕರ್ಷಿಸುತ್ತಿದೆ.
ಮುಲ್ಲರ್‌ಪಟ್ಣಾ ಅಜಾದ್ ನಗರದ ಉರ್ದು ಶಾಲೆಯ ಒಂಬತ್ತನೇ ತರಗತಿ ವಿದ್ಯಾರ್ಥಿಗಳಾದ ಆಶಿಮ್, ನಿಝಾಮುದ್ದೀನ್ ಹಾಗೂ ಆರನೇ ತರಗತಿಯ ಸಿನಾನ್ ಈ ತ್ರಿಬಲ್ ಚಕ್ರದ ಸೈಕಲ್ ರೂವಾರಿಗಳು.
ಒಂದು ಸೈಕಲ್‌ನ ಹಿಂದಿನ ಟೈರ್, ಚೈನ್ ಕಳಚಿ ಮತ್ತೊಂದು ಸೈಕಲ್‌ನ ಮುಂದಿನ ಗಾಲಿಯನ್ನು ಜೋಡಿಸಿ ಈ ಸೈಕಲ್ ನೋಡುವಾಗ ಒಂದು ರೀತಿ ವಿಚಿತ್ರ ಅನಿಸುತ್ತದೆ.
ವಿಶೇಷವಾದ ಐಡಿಯಾದ ಕುರಿತು ಮಕ್ಕಳು ಹೇಳುವ ಮಾತು ಹೀಗಿದೆ: ಆಟ ಆಡುತ್ತಿರುವಾಗ ಒಂದು ಸೈಕಲ್ ಪಂಚರ್ ಆಯ್ತು ಪಂಚರ್ ಹಾಕ್ಲಿಕೆ ಗೊತ್ತಿರಲಿಲ್ಲ. ನಾನು ಸುಮ್ಮನೆ ಮೂರು ಚಕ್ರದ ಸೈಕಲ್ ಮಾಡುವ ಅಂತ ಹೇಳಿದೆ. ಅದಕ್ಕೆ ಆಶಿಮ್, ನಿಝಾಮ್ ಮನೆಯಿಂದ ಸ್ಪಾನರ್ ತಂದು ಹೀಗೆ ಮಾಡಿದ್ರು ಅಂತಾನೆ ಆರನೇ ತರಗತಿಯ ಸಿನಾನ್.
ಕುಡ್ಲ ಮುಂದಕ್ಕೆ ಬರೀ ಕಾಂಕ್ರೀಟ್ ಸಿಟಿ !
ಜಗತ್ತು ಬದಲಾಗಿದೆ ಅದರಲ್ಲೂ ಕುಡ್ಲ ಕೂಡ ಅಷ್ಟೇ ವೇಗದಲ್ಲಿ ಬದಲಾಗುತ್ತಿದೆ. ಮನುಷ್ಯ ನ ಸ್ವಾರ್ಥ ದ ಬದುಕು ಎಲ್ಲಕ್ಕೂ ಕಾರಣವಾಗಿದೆ. ಗೂಗಲ್ ಅರ್ಥ್ ಈ ಎಲ್ಲ ಬದಲಾವಣೆಯನ್ನು ಸಮರ್ಥ ವಾಗಿ ದಾಖಲೆ ಮಾಡುವ ಕಾರ್ಯವನ್ನು ಮಾಡಿದೆ.
ಮಂಗಳೂರು 2004 ರಲ್ಲಿ ಎಷ್ಟು ಮರ,ಗಿಡಗಳ ಜತೆಗೆ ಹಸಿರು ತುಂಬಿದ ನಗರವಾಗಿತ್ತು. ಈ ಬಳಿಕ ಮಂಗಳೂರು 2014 ರಲ್ಲಿ ಹೇಗಿದೆ. ಈಗ ಮಂಗಳೂರಿನಲ್ಲಿ ಎಷ್ಟು ಹಸಿರಿದೆ. ಮುಂದೆ ಕುಡ್ಲ ಏನಾಗಲಿದೆ ಎನ್ನುವ ಎಚ್ಚರಿಕೆಯನ್ನು ಗೂಗಲ್ ಅರ್ಥ್ ವಿವರ ವಾಗಿ ಚಿತ್ರದ ಮೂಲಕ ವಿವರಿಸಿದೆ. ಮುಂದಿನ ದಿನಗಳಲ್ಲಿ ಹಸಿರು ಕುಡ್ಲ ಸಿಟಿಯ ಉಸಿರಾಗಲಿ.