ಮುಲ್ಲರಪಟ್ಣಾದ ಮೂವರು ಹುಡುಗರು ತಯಾರಿಸಿದ ಮೂರು ಚಕ್ರದ ಸೈಕಲ್ ವಿಶ್ವದ ಎಲ್ಲೆಡೆ ಸುದ್ದಿಯಾಗುತ್ತಿದೆ. ಹೌದು ಹೈಸ್ಕೂಲ್ ಹಾಗೂ ಪ್ರೈಮರಿ ಓದುತ್ತಿರುವ ಮೂವರು ಸ್ನೇಹಿತರು ಪ್ರೌಢಶಾಲೆಯಲ್ಲಿ ಸಿಗುವ ಸೈಕಲ್‌ಗೆ ಹೊಸತೊಂದು ರೂಪ ನೀಡಿದ್ದು ಎಲ್ಲರನ್ನೂ ಆಕರ್ಷಿಸುತ್ತಿದೆ.
ಮುಲ್ಲರ್‌ಪಟ್ಣಾ ಅಜಾದ್ ನಗರದ ಉರ್ದು ಶಾಲೆಯ ಒಂಬತ್ತನೇ ತರಗತಿ ವಿದ್ಯಾರ್ಥಿಗಳಾದ ಆಶಿಮ್, ನಿಝಾಮುದ್ದೀನ್ ಹಾಗೂ ಆರನೇ ತರಗತಿಯ ಸಿನಾನ್ ಈ ತ್ರಿಬಲ್ ಚಕ್ರದ ಸೈಕಲ್ ರೂವಾರಿಗಳು.
ಒಂದು ಸೈಕಲ್‌ನ ಹಿಂದಿನ ಟೈರ್, ಚೈನ್ ಕಳಚಿ ಮತ್ತೊಂದು ಸೈಕಲ್‌ನ ಮುಂದಿನ ಗಾಲಿಯನ್ನು ಜೋಡಿಸಿ ಈ ಸೈಕಲ್ ನೋಡುವಾಗ ಒಂದು ರೀತಿ ವಿಚಿತ್ರ ಅನಿಸುತ್ತದೆ.
ವಿಶೇಷವಾದ ಐಡಿಯಾದ ಕುರಿತು ಮಕ್ಕಳು ಹೇಳುವ ಮಾತು ಹೀಗಿದೆ: ಆಟ ಆಡುತ್ತಿರುವಾಗ ಒಂದು ಸೈಕಲ್ ಪಂಚರ್ ಆಯ್ತು ಪಂಚರ್ ಹಾಕ್ಲಿಕೆ ಗೊತ್ತಿರಲಿಲ್ಲ. ನಾನು ಸುಮ್ಮನೆ ಮೂರು ಚಕ್ರದ ಸೈಕಲ್ ಮಾಡುವ ಅಂತ ಹೇಳಿದೆ. ಅದಕ್ಕೆ ಆಶಿಮ್, ನಿಝಾಮ್ ಮನೆಯಿಂದ ಸ್ಪಾನರ್ ತಂದು ಹೀಗೆ ಮಾಡಿದ್ರು ಅಂತಾನೆ ಆರನೇ ತರಗತಿಯ ಸಿನಾನ್.