ಕ್ರೈಸ್ತ ಸಮುದಾಯದ ಧಾರ್ಮಿಕ ನಂಬಿಕೆಯಲ್ಲಿ ವಿಶಿಷ್ಟ ಸ್ಥಾನದಲ್ಲಿರುವ ಸಂತರ ಪಟ್ಟಿಯಲ್ಲಿ ಸಂತ ಅಂತೋನಿ ಅವರ ಹೆಸರು ಮೊದಲ ಸ್ಥಾನದಲ್ಲಿ ಕಾಣಿಸಿಕೊಳ್ಳುತ್ತದೆ.
ವಿಶೇಷ ಎಂದರೆ ಮಂಗಳೂರು ಧರ್ಮಪ್ರಾಂತ್ಯದ ಬನ್ನೂರು, ಅಲ್ಲಿಪಾದೆ, ನಾರಾವಿ, ಉಜಿರೆ, ಕೂಳೂರು, ಪೆರ್ಮಾಯಿ ಚರ್ಚ್‌ಗಳ ಜತೆಗೆ ಮಿಲಾಗ್ರಿಸ್‌ನಲ್ಲೂ ಇವರ ಪುಣ್ಯ ಕ್ಷೇತ್ರವಿದೆ. ಜೆಪ್ಪುವಿನಲ್ಲಿ ಚಾರಿಟಿ ಹೋಮ್ ಕೂಡ ಪವಾಡ ಪುರುಷ ಸಂತ ಅಂತೋನಿ ಅವರ ಭಕ್ತಿಗೆ ಪೂರಕವಾದ ಸಾಕ್ಷ್ಯಗಳು.
ವಿಶೇಷ ಎಂದರೆ ಸಂತ ಅಂತೋನಿ ಅವರ ಹಬ್ಬ ಪ್ರತಿ ವರ್ಷನೂ ಮಳೆಗಾಲದಲ್ಲಿಯೇ ಬರುತ್ತದೆ. ಈ ಹಬ್ಬದ ಆಚರಣೆಯ ಸಮಯದಲ್ಲಿ ಉತ್ತಮ ಮಳೆಯಾಗುತ್ತದೆ ಎನ್ನುವ ನಂಬಿಕೆ ಬಹಳಷ್ಟು ಮಂದಿಯಲ್ಲಿ ಇರುತ್ತದೆ.
ಪವಾಡ ಪುರುಷನ ಕೃಪೆಗೆ ಪಾತ್ರರಾದರೆ ಎಲ್ಲ ಸಮಸ್ಯೆಗಳಿಂದ ಪರಿಹಾರ ಸಿಗುತ್ತದೆ ಎನ್ನುವ ಭಕ್ತ ಸಮೂಹ ಹಬ್ಬವನ್ನು ಜೂ.೧೩ರಂದು ಆಚರಿಸುತ್ತಾರೆ.
ಪವಾಡ ಪುರುಷ ಸಂತ ಅಂತೋನಿ ಹಬ್ಬದ ಸಂಭ್ರಮ
June 12, 2019