ಮನೆಗೆ ನೆಂಟರು ಬಂದರೆ ಸಂಜೆ ವಾಪಾಸ್ ಹೋಗ್ತಾ ರೋ.., ನಾಳೆ ಬೆಳಿಗ್ಗೆ ಹೋಗ್ತಾರಾ ಎಂದು ಲೆಕ್ಕ ಹಾಕುವ ಇಂದಿನ ದಿನಗಳಲ್ಲಿ ಮೊನ್ನೆ ಜಲಪ್ರವಾಹದಲ್ಲಿ ಮನೆ, ತೋಟ, ಗದ್ದೆ ಸರ್ವಸ್ವವನ್ನೂ ಕಳೆದುಕೊಂಡಿರುವ ನೆರೆ ಸಂತ್ರಸ್ಥರಿಗೆ ತನ್ನ ಮನೆಯಲ್ಲೇ ನೆಲೆ, ಆಶ್ರಯ, ಊಟಾ ಉಪಚಾರ ಮಾಡುತ್ತಿರುವ ಇವರು ನಿಜಕ್ಕೂ ಶ್ರೇಷ್ಠರು.
ಮೊನ್ನೆ ಬೆಳ್ತಂಗಡಿ ಯ ದಿದುಪೇ, ಕುಕಾವು, ಮಕ್ಕಿ, ದೈಪಿತಿಲು, ಫರ್ಲ ಮುಂತಾದ ಕಡೆ ಮನೆ ಕಳೆದುಕೊಂಡ ಸುಮಾರು 56 ಮಂದಿ ನಿರಾಶ್ರಿತರಿಗೆ ತನ್ನ ಮನೆಯಲ್ಲೇ ( ಮೊನ್ನೆಯಿಂದ ಇಂದಿನವರೆಗೆ ಮತ್ತು ಇನ್ನೂ ಎಷ್ಟು ದಿನಗಳು ಅಂತ ಲೆಕ್ಕ ಹಾಕದೆ ) ಆಶ್ರಯ ನೀಡಿರುವ ಅಗರೀಮಾರ್ ಜಲಜಾಕ್ಷಿ ಎಂಬ ಇವರು ಸಮಾಜದ ಶ್ರೇಷ್ಠ ವ್ಯಕ್ತಿ ಮತ್ತು ಇವರೇ ನಿಜವಾದ ಸೆಲೆಬ್ರಿಟಿ….ಇಂತವರು ನಮ್ಮ ನಿಮ್ಮ ನಡುವೆ ಇದ್ದಾರೆ ಎಂಬುದೇ ಎಲ್ಲಕ್ಕಿಂತ ದೊಡ್ಡ ಕುಶಿ, ಸಂತೃಪ್ತಿಯ ವಿಚಾರ. ವಿಶೇಷ ಎಂದರೆ ಈ ನೆರೆಯಲ್ಲಿ ಅವರ ತೋಟ ಪೂರ್ಣ ಹೋಗಿದೆ. ಆದರೆ ದೊಡ್ಡ ಮನಸ್ಸಿನ ಜಲಜಾಕ್ಕ ಇದರ ಚಿಂತೆ ಮಾಡದೇ ಯಾರು ಬಂದರೂ ಕೂಡ ಹೊಟ್ಟೆ ಪೂರ್ತಿ ಊಟ,ತಿಂಡಿ ನೀಡುವ ಮೂಲಕ ಅಲ್ಲಿನ ಜನರ ಪಾಲಿಗೆ ಅನ್ನದಾತೆಯಾಗಿ ಕಾಣಿಸಿಕೊಂಡಿದ್ದಾರೆ.