ಪ್ಲಾಸ್ಟಿಕ್ ಮುಕ್ತ ಮಂಗಳೂರು ಕಲ್ಪನೆಯ ಬಹಳ ಸುಂದರ ವಿಶೇಷವಾಗಿ ಬೆಳೆಯುತ್ತಿರುವ ಮಂಗಳೂರಿನ ಜನತೆಯಲ್ಲಿ ಇಂತಹ ಜಾಗೃತಿ ಕಾರ್ಯಗಳು ನಿರಂತರವಾಗಿ ನಡೆಯುತ್ತಿದೆ. ಆದರೆ ಮಂಗಳೂರು ದಕ್ಷಿಣ ಶಾಸಕರಾದ ಡಿ.ವೇದವ್ಯಾಸ ಕಾಮತರು ಪ್ಲಾಸ್ಟಿಕ್ ಮುಕ್ತ ನಗರದ ಕಲ್ಪನೆಗೆ ಪೂರ್ಣ ಪ್ರಮಾಣದ ವಿರೋಧ ಕಾರ್ಯಗಳನ್ನು ನಿರಂತರವಾಗಿ ಮಾಡಲು ಹೊರಟಿದ್ದಾರೆ.
ನಗರದ ಉರ್ವದ ಸರಕಾರಿ ಕ್ವಾರ್ಟಸ್ ಬಳಿಯ ಒಂದೇ ರಸ್ತೆಯಲ್ಲಿ ನಾಲ್ಕು ಫ್ಲೆಕ್ಸ್ ಗಳನ್ನು ತಮ್ಮ ಆಗಮನದ ಕೆಲಸಕ್ಕೆ ಹಾಕಿಕೊಂಡು ಪರಿಸರ ಪ್ರೇಮವನ್ನು ಮೊಳಗಿಸಿದ್ದಾರೆ. ವಿಶೇಷ ಎಂದರೆ ಶಾಸಕರ ಇಂತಹ ಪ್ರೇಮವೇ ಮಂಗಳೂರಿನ ನಾನಾ ಕಡೆಯಲ್ಲಿ ಇಂತಹ ಫ್ಲೆಕ್ಸ್ ಸಂಸ್ಕೃತಿ ನಿಧಾನವಾಗಿ ತಲೆ ಎತ್ತುತ್ತಿದೆ. ಜನರಿಂದ ಆಯ್ಕೆಯಾದ ಜವಾಬ್ದಾರಿ ಸ್ಥಾನದಲ್ಲಿರುವ ಶಾಸಕರ ಈ ಕೆಲಸ ಬುದ್ದಿವಂತ ಮಂಗಳೂರಿನ ಜನತೆಗೆ ದಕ್ಕೆ ತಂದು ಕೊಡುತ್ತಿದೆ.
ಇಂತಹ ಫ್ಲೆಕ್ಸ್ ಗಳನ್ನು ತೆರವು ಮಾಡಬೇಕಾದ ಮನಪಾ ಅಧಿಕಾರಿಗಳು ಯಾವ ಕೆಲಸಕ್ಕೂ ಮುಂದೆ ಹೋಗದಿರುವುದು ಕುಡ್ಲದ ಜನರಲ್ಲಿ ಸಂದೇಹ ಮೂಡಿಸುವ ಕಾರ್ಯವಾಗುತ್ತಿದೆ. ಶಾಸಕರಿಗೊಂದು ನಿಯಮ ಜನರಿಗೊಂದು ನಿಯಮವೇ ಎಂದು ಕೇಳುವ ಹಂತಕ್ಕೆ ತಲುಪಿದೆ.
ಶಾಸಕರ ಅಭಿವೃದ್ಧಿ ಕಾರ್ಯಗಳು ಜನರಿಗೆ ಒಳ್ಳೆಯದಾಗಬೇಕೆ ಹೊರತು ಜನರಿಗೆ ಸಮಸ್ಯೆ ತಂದು ಹಾಕಕೂಡದು. ಬರೀ ಮಾತಿನ ಕೆಲಸ ಬಿಟ್ಟು ಶಾಸಕರು ತಮ್ಮ ಜವಾಬ್ದಾರಿ ಮೆರೆಯಬೇಕಾದ ಸಮಯವಿದು. ಕ್ಲೀನ್ ಮಂಗಳೂರು ಮಾಡಲು ಶಾಸಕರು ಮೊದಲು ಮನಸ್ಸು ಮಾಡಬೇಕು.