ಕುಡ್ಲ ಸಿಟಿಯಲ್ಲಿ ಆ.19ರಂದು ‘ಫ್ಲಾಸ್ಟಿಕ್ ಮುಕ್ತ ಕುಡ್ಲಕ್ಕೆ ಫ್ಲೆಕ್ಸ್ ಶಾಸಕರ ಕೊಡುಗೆ ಅಪಾರ’ ಎನ್ನುವ ಪೋಸ್ಟ್ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವೈರಲ್ ಆಗಿರುವ ಜತೆಯಲ್ಲಿ ಪರ-ವಿರೋಧಗಳ ಅಲೆಗಳಿಂದ ಮಂಗಳೂರು ದಕ್ಷಿಣ ಶಾಸಕ ಡಿ. ವೇದವ್ಯಾಸ ಕಾಮತ್ ಅವರ ಪರವಾಗಿ ನಗರದ ಉರ್ವ ಸೇರಿದಂತೆ ಕೆಲವು ಭಾಗದಲ್ಲಿ ಹಾಕಲಾಗಿರುವ ಫ್ಲೆಕ್ಸ್‌ವನ್ನು ಆ. 20 ರಂದು ಪೂರ್ಣ ಪ್ರಮಾಣದಲ್ಲಿ ತೆರವಿನ ಮೂಲಕ ನಗರ ಸ್ವಚ್ಛತೆಯಲ್ಲಿ ತಮ್ಮ ಜವಾಬ್ದಾರಿ ಏನೂ ಎನ್ನುವ ಮಾತನ್ನು ಶಾಸಕರ ಜತೆಗೆ ಅಭಿಮಾನಿಗಳು ಕಲಿತುಕೊಂಡಿದ್ದಾರೆ ಎನ್ನುವ ಮಾತು ಈ ತೆರವಿನ ಮೂಲಕ ರುಜುವಾತು ಆಗಿದೆ.
ಜನರಿಂದ ಆಯ್ಕೆಯಾದ ಮಂಗಳೂರಿನ ಶಾಸಕ ಡಿ.ವೇದವ್ಯಾಸ ಕಾಮತ್ ಅವರು ಇತರರಿಗೆ ಮಾದರಿಯಾಗಬೇಕು ಎನ್ನುವ ಸಂದೇಶ ನೀಡಲು ಹೊರಟ ಕುಡ್ಲಸಿಟಿಯ ಕಾಳಜಿ ಗೆದ್ದಿದೆ ಎನ್ನುವುದು ಇದರಿಂದ ಸಾಬೀತಾಗಿದೆ. ಇದರ ಜತೆಯಲ್ಲಿ ನಗರದ ಕೆಲವು ಭಾಗದಲ್ಲಿ ಹಬ್ಬಕ್ಕೆ, ಸಾವಿಗೂ ಫ್ಲೆಕ್ಸ್ ಹಾಕಿ ಗಮನ ಸೆಳೆಯುವ ಕಾರ‍್ಯಕ್ಕೆ ಶಾಸಕರು ಬುನಾದಿ ಹಾಕುವ ಮೂಲಕ ಮತ್ತಷ್ಟು ಸಮಸ್ಯೆಗೆ ಕಾಮತ್ ಅವರ ಅಭಿಮಾನಿಗಳು ಕಾರಣವಾಗುತ್ತಿರುವುದು ಬುದ್ದಿವಂತ ಕುಡ್ಲದ ಜನರಿಗೆ ಸಮಸ್ಯೆಯಾಗಿದೆ.
ಈ ಕುರಿತು ಈಗಾಗಲೇ ಮಹಾನಗರ ಪಾಲಿಕೆಯ ಜತೆಯಲ್ಲಿ ಇತರ ಅಧಿಕಾರಿ, ಇಲಾಖೆಗಳು ಎಚ್ಚರಗೊಳ್ಳದೇ ಹೋದರೆ ಕುಡ್ಲ ಸಿಟಿಯಲ್ಲಿ ಮತ್ತೆ ಫ್ಲೆಕ್ಸ್ ಸಂಸ್ಕೃತಿ ಗೆಲ್ಲುವ ಸಾಧ್ಯತೆಯಿದೆ.