Tagged: vedavyaskamathfanclub

ಕುಡ್ಲ ಸಿಟಿ ಇಂಪ್ಯಾಕ್ಟ್: ‘ಫ್ಲೆಕ್ಸ್’ ಶಾಸಕರ ಅಭಿಮಾನಿಗಳಿಂದ ತೆರವು

ಕುಡ್ಲ ಸಿಟಿಯಲ್ಲಿ ಆ.19ರಂದು ‘ಫ್ಲಾಸ್ಟಿಕ್ ಮುಕ್ತ ಕುಡ್ಲಕ್ಕೆ ಫ್ಲೆಕ್ಸ್ ಶಾಸಕರ ಕೊಡುಗೆ ಅಪಾರ’ ಎನ್ನುವ ಪೋಸ್ಟ್ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವೈರಲ್ ಆಗಿರುವ ಜತೆಯಲ್ಲಿ ಪರ-ವಿರೋಧಗಳ ಅಲೆಗಳಿಂದ ಮಂಗಳೂರು ದಕ್ಷಿಣ ಶಾಸಕ ಡಿ. ವೇದವ್ಯಾಸ ಕಾಮತ್ ಅವರ ಪರವಾಗಿ ನಗರದ ಉರ್ವ ಸೇರಿದಂತೆ ಕೆಲವು ಭಾಗದಲ್ಲಿ ಹಾಕಲಾಗಿರುವ ಫ್ಲೆಕ್ಸ್‌ವನ್ನು ಆ. 20 ರಂದು ಪೂರ್ಣ ಪ್ರಮಾಣದಲ್ಲಿ ತೆರವಿನ ಮೂಲಕ ನಗರ ಸ್ವಚ್ಛತೆಯಲ್ಲಿ ತಮ್ಮ ಜವಾಬ್ದಾರಿ ಏನೂ ಎನ್ನುವ ಮಾತನ್ನು ಶಾಸಕರ ಜತೆಗೆ ಅಭಿಮಾನಿಗಳು ಕಲಿತುಕೊಂಡಿದ್ದಾರೆ ಎನ್ನುವ ಮಾತು ಈ ತೆರವಿನ ಮೂಲಕ ರುಜುವಾತು ಆಗಿದೆ.

ಜನರಿಂದ ಆಯ್ಕೆಯಾದ ಮಂಗಳೂರಿನ ಶಾಸಕ ಡಿ.ವೇದವ್ಯಾಸ ಕಾಮತ್ ಅವರು ಇತರರಿಗೆ ಮಾದರಿಯಾಗಬೇಕು ಎನ್ನುವ ಸಂದೇಶ ನೀಡಲು ಹೊರಟ ಕುಡ್ಲಸಿಟಿಯ ಕಾಳಜಿ ಗೆದ್ದಿದೆ ಎನ್ನುವುದು ಇದರಿಂದ ಸಾಬೀತಾಗಿದೆ. ಇದರ ಜತೆಯಲ್ಲಿ ನಗರದ ಕೆಲವು ಭಾಗದಲ್ಲಿ ಹಬ್ಬಕ್ಕೆ, ಸಾವಿಗೂ ಫ್ಲೆಕ್ಸ್ ಹಾಕಿ ಗಮನ ಸೆಳೆಯುವ ಕಾರ‍್ಯಕ್ಕೆ ಶಾಸಕರು ಬುನಾದಿ ಹಾಕುವ ಮೂಲಕ ಮತ್ತಷ್ಟು ಸಮಸ್ಯೆಗೆ ಕಾಮತ್ ಅವರ ಅಭಿಮಾನಿಗಳು ಕಾರಣವಾಗುತ್ತಿರುವುದು ಬುದ್ದಿವಂತ ಕುಡ್ಲದ ಜನರಿಗೆ ಸಮಸ್ಯೆಯಾಗಿದೆ.

ಈ ಕುರಿತು ಈಗಾಗಲೇ ಮಹಾನಗರ ಪಾಲಿಕೆಯ ಜತೆಯಲ್ಲಿ ಇತರ ಅಧಿಕಾರಿ, ಇಲಾಖೆಗಳು ಎಚ್ಚರಗೊಳ್ಳದೇ ಹೋದರೆ ಕುಡ್ಲ ಸಿಟಿಯಲ್ಲಿ ಮತ್ತೆ ಫ್ಲೆಕ್ಸ್ ಸಂಸ್ಕೃತಿ ಗೆಲ್ಲುವ ಸಾಧ್ಯತೆಯಿದೆ.

ಪ್ಲಾಸ್ಟಿಕ್ ಮುಕ್ತ ಕುಡ್ಲಕ್ಕೆ ಫ್ಲೆಕ್ಸ್ ಶಾಸಕರ ಕೊಡುಗೆ ಅಪಾರ

ಪ್ಲಾಸ್ಟಿಕ್ ಮುಕ್ತ ಮಂಗಳೂರು ಕಲ್ಪನೆಯ ಬಹಳ ಸುಂದರ ವಿಶೇಷವಾಗಿ ಬೆಳೆಯುತ್ತಿರುವ ಮಂಗಳೂರಿನ ಜನತೆಯಲ್ಲಿ ಇಂತಹ ಜಾಗೃತಿ ಕಾರ್ಯಗಳು ನಿರಂತರವಾಗಿ ನಡೆಯುತ್ತಿದೆ. ಆದರೆ ಮಂಗಳೂರು ದಕ್ಷಿಣ ಶಾಸಕರಾದ ಡಿ.ವೇದವ್ಯಾಸ ಕಾಮತರು ಪ್ಲಾಸ್ಟಿಕ್ ಮುಕ್ತ ನಗರದ ಕಲ್ಪನೆಗೆ ಪೂರ್ಣ ಪ್ರಮಾಣದ ವಿರೋಧ ಕಾರ್ಯಗಳನ್ನು ನಿರಂತರವಾಗಿ‌ ಮಾಡಲು ಹೊರಟಿದ್ದಾರೆ.
ನಗರದ ಉರ್ವದ ಸರಕಾರಿ ಕ್ವಾರ್ಟಸ್ ಬಳಿಯ ಒಂದೇ ರಸ್ತೆಯಲ್ಲಿ ನಾಲ್ಕು ಫ್ಲೆಕ್ಸ್ ಗಳನ್ನು ತಮ್ಮ ಆಗಮನದ ಕೆಲಸಕ್ಕೆ ಹಾಕಿಕೊಂಡು ಪರಿಸರ ಪ್ರೇಮವನ್ನು ಮೊಳಗಿಸಿದ್ದಾರೆ. ವಿಶೇಷ ಎಂದರೆ ಶಾಸಕರ ಇಂತಹ‌ ಪ್ರೇಮವೇ ಮಂಗಳೂರಿನ ನಾನಾ ಕಡೆಯಲ್ಲಿ ಇಂತಹ ಫ್ಲೆಕ್ಸ್ ಸಂಸ್ಕೃತಿ ನಿಧಾನವಾಗಿ ತಲೆ ಎತ್ತುತ್ತಿದೆ. ಜನರಿಂದ ಆಯ್ಕೆಯಾದ ಜವಾಬ್ದಾರಿ ಸ್ಥಾನದಲ್ಲಿರುವ ಶಾಸಕರ ಈ ಕೆಲಸ ಬುದ್ದಿವಂತ ಮಂಗಳೂರಿನ ಜನತೆಗೆ ದಕ್ಕೆ ತಂದು ಕೊಡುತ್ತಿದೆ.

ಇಂತಹ ಫ್ಲೆಕ್ಸ್ ಗಳನ್ನು ತೆರವು ಮಾಡಬೇಕಾದ ಮನಪಾ ಅಧಿಕಾರಿಗಳು ಯಾವ ಕೆಲಸಕ್ಕೂ ಮುಂದೆ ಹೋಗದಿರುವುದು ಕುಡ್ಲದ ಜನರಲ್ಲಿ ಸಂದೇಹ ಮೂಡಿಸುವ ಕಾರ್ಯವಾಗುತ್ತಿದೆ. ಶಾಸಕರಿಗೊಂದು ನಿಯಮ ಜನರಿಗೊಂದು ನಿಯಮವೇ ಎಂದು ಕೇಳುವ ಹಂತಕ್ಕೆ ತಲುಪಿದೆ.
ಶಾಸಕರ ಅಭಿವೃದ್ಧಿ ಕಾರ್ಯಗಳು ಜನರಿಗೆ ಒಳ್ಳೆಯದಾಗಬೇಕೆ ಹೊರತು ಜನರಿಗೆ ಸಮಸ್ಯೆ ತಂದು ಹಾಕಕೂಡದು. ಬರೀ ಮಾತಿನ ಕೆಲಸ ಬಿಟ್ಟು ಶಾಸಕರು ತಮ್ಮ ಜವಾಬ್ದಾರಿ ಮೆರೆಯಬೇಕಾದ ಸಮಯವಿದು. ಕ್ಲೀನ್ ಮಂಗಳೂರು ಮಾಡಲು ಶಾಸಕರು ಮೊದಲು ಮನಸ್ಸು ಮಾಡಬೇಕು.