ಕ್ರೈಸ್ತರು ಬೆಳೆಸಿದ ತರಕಾರಿ, ಮುಸ್ಲಿಂಮರು ಬೆಳೆಸಿದ ಹಣ್ಣು ಹಂಪಲು, ಹಿಂದೂಗಳು ಮಾಡಿದ ಕುರುಕಲು ತಿಂಡಿ ತಿನಸು ಜತೆಗೆ ಅದನ್ನು ಹೆಕ್ಕಿ ತೆಗೆದುಕೊಳ್ಳಲು ಸರಕಾರಿ ಶಾಲೆಯಲ್ಲಿ ಓದುತ್ತಿರುವ ಪುಟಾಣಿಗಳು ಇದೆಲ್ಲ ಚಿತ್ರಣಗಳು ಕಾಣಿಸಿಕೊಂಡದ್ದು ಭಾನುವಾರ ಬೊಕ್ಕಪಟ್ಣ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಆವರಣದಲ್ಲಿ ನಡೆದ ವಸ್ತು ಸೂರೆ ಕಾರ‍್ಯಕ್ರಮದಲ್ಲಿ.
ಹೌದು. ಬೋಳೂರಿನ ಶ್ರೀಧರ್ಮಭೂಮಿ ಪ್ರತಿಷ್ಠಾನ ಕಳೆದ 14 ವರ್ಷಗಳಿಂದ ನಿರಂತರವಾಗಿ ಈ ಸಂಘಟನೆ ಇಂತಹ ವಸ್ತುಸೂರೆ ಕಾರ‍್ಯಕ್ರಮದ ಮೂಲಕ ಸಮಾಜದಲ್ಲಿ ಕೋಮು ಸಾಮರಸ್ಯ ಭಾವನೆಯನ್ನು ಅರಳಿಸುವ ಉದಾತ್ತವಾದ ಚಿಂತನೆಯ ಮೂಲಕ ಕಾರ‍್ಯಕ್ರಮವನ್ನು ಸಂಘಟನೆ ಮಾಡುತ್ತಿದೆ. ವಿಶಿಷ್ಟ ಎಂದರೆ ಕುದ್ರೋಳಿ, ಉರ್ವ, ಬೊಕ್ಕಪಟ್ಣ, ಬೆಂಗ್ರೆ, ತಣ್ಣೀರು ಬಾವಿ ಸೇರಿದಂತೆ ಹತ್ತು ಹಲವು ಪ್ರದೇಶದಿಂದ ಈ ಕಾರ‍್ಯಕ್ರಮಕ್ಕೆ ಸರಕಾರಿ ಶಾಲೆಯಲ್ಲಿ ಓದುತ್ತಿರುವ ತೀರಾ ಬಡ ಕುಟುಂಬದ ವಿದ್ಯಾರ್ಥಿಗಳು ಭಾಗವಹಿಸುತ್ತಾರೆ. ವಸ್ತು ಸೂರೆಯಲ್ಲಿ ಸಿಗುವ ವಸ್ತುಗಳನ್ನು ಪಡೆದುಕೊಂಡು ಖುಷಿಯಿಂದ ಮನೆ ಕಡೆಗೆ ಹೆಜ್ಜೆ ಹಾಕುತ್ತಾರೆ.
ಕೋಮು ಸಾಮರಸ್ಯ ಅರಳಿಸಿದ ವಸ್ತು ಸೂರೆ!
August 18, 2019