Tagged: christians

ಶಂಕರಪುರ ಮಲ್ಲಿಗೆ ರೇಟ್ ಭರ್ಜರಿ !

ಸುಗಂಧಯುಕ್ತ ಶ್ವೇತಪುಷ್ಪ ಶಂಕರಪುರ ಮಲ್ಲಿಗೆಗೆ ಈಗ ಚಿನ್ನದ ಬೆಲೆ ಬಂದಿದೆ. ಕಳೆದ 6 ದಿನಗಳಲ್ಲಿ 4 ಬಾರಿ ಕಟ್ಟೆಯ ಗರಿಷ್ಠ ಬೆಲೆ 1250 ರೂ. ತಲುಪಿದೆ.ವಾಡಿಕೆಗಿಂತ ಅತಿಯಾಗಿ ಸುರಿದ ನಿರಂತರ ಮಳೆಯಿಂದಾಗಿಮಲ್ಲಿಗೆ ಇಳುವರಿಯಲ್ಲಾದ ಕೊರತೆಯಿಂದ ಬೇಡಿಕೆಯಿದ್ದಷ್ಟುಹೂ ಸಿಗದ ಕಾರಣಮಾರುಕಟ್ಟೆಯಲ್ಲಿ ದರ ಏರುತ್ತಿದೆ.

ಆದರೆ ಮಾರುಕಟ್ಟೆಯಲ್ಲಿ ಹೂವಿಗೆ ಎಷ್ಟೇ ಬೇಡಿಕೆಹೆಚ್ಚಾದರೂ ಬೆಳೆಗಾರರಿಗೆ ಮಾತ್ರ 1250 ರೂ.ಗಿಂತ ಹೆಚ್ಚುಬೆಲೆ ಸಿಗುವುದಿಲ್ಲ. ಪೂರೈಕೆಗಿಂತ ಬೇಡಿಕೆ ಹೆಚ್ಚಾಗಿ ದರಏರಿಕೆಯಾದಾಗ ಇದರ ಲಾಭ ಬೆಳೆಗಾರರಿಗಿಂತ ಹೆಚ್ಚಾಗಿವ್ಯಾಪಾರಿಗಳಿಗೆ ಹೋಗುತ್ತದೆ.ಕಳೆದ ಒಂದು ತಿಂಗಳಲ್ಲಿ ಕಟ್ಟೆಯಲ್ಲಿ 12 ಬಾರಿ ಮಲ್ಲಿಗೆಬೆಲೆ ನಾಲ್ಕಂಕಿ ತಲುಪಿದ್ದು 6 ಬಾರಿ ಬೆಳೆಗಾರರಿಗೆ ಗರಿಷ್ಠ ದರ 1250 ರೂ. ಸಿಕ್ಕಿದೆ. ಈ ಅವಧಿಯಲ್ಲಿ ಕನಿಷ್ಠ ದರ 280 ರೂ. ಆಗಿತ್ತು. ಕಳೆದ 30 ದಿನಗಳಲ್ಲಿ ಬೆಳೆಗಾರರಿಗೆ ಸರಾಸರಿಅಟ್ಟೆಗೆ 818ರೂ. ಬೆಲೆ ಸಿಕ್ಕಿದೆ.

ಕೋಮು ಸಾಮರಸ್ಯ ಅರಳಿಸಿದ ವಸ್ತು ಸೂರೆ!

ಕ್ರೈಸ್ತರು ಬೆಳೆಸಿದ ತರಕಾರಿ, ಮುಸ್ಲಿಂಮರು ಬೆಳೆಸಿದ ಹಣ್ಣು ಹಂಪಲು, ಹಿಂದೂಗಳು ಮಾಡಿದ ಕುರುಕಲು ತಿಂಡಿ ತಿನಸು ಜತೆಗೆ ಅದನ್ನು ಹೆಕ್ಕಿ ತೆಗೆದುಕೊಳ್ಳಲು ಸರಕಾರಿ ಶಾಲೆಯಲ್ಲಿ ಓದುತ್ತಿರುವ ಪುಟಾಣಿಗಳು ಇದೆಲ್ಲ ಚಿತ್ರಣಗಳು ಕಾಣಿಸಿಕೊಂಡದ್ದು ಭಾನುವಾರ ಬೊಕ್ಕಪಟ್ಣ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಆವರಣದಲ್ಲಿ ನಡೆದ ವಸ್ತು ಸೂರೆ ಕಾರ‍್ಯಕ್ರಮದಲ್ಲಿ.
ಹೌದು. ಬೋಳೂರಿನ ಶ್ರೀಧರ್ಮಭೂಮಿ ಪ್ರತಿಷ್ಠಾನ ಕಳೆದ 14 ವರ್ಷಗಳಿಂದ ನಿರಂತರವಾಗಿ ಈ ಸಂಘಟನೆ ಇಂತಹ ವಸ್ತುಸೂರೆ ಕಾರ‍್ಯಕ್ರಮದ ಮೂಲಕ ಸಮಾಜದಲ್ಲಿ ಕೋಮು ಸಾಮರಸ್ಯ ಭಾವನೆಯನ್ನು ಅರಳಿಸುವ ಉದಾತ್ತವಾದ ಚಿಂತನೆಯ ಮೂಲಕ ಕಾರ‍್ಯಕ್ರಮವನ್ನು ಸಂಘಟನೆ ಮಾಡುತ್ತಿದೆ. ವಿಶಿಷ್ಟ ಎಂದರೆ ಕುದ್ರೋಳಿ, ಉರ್ವ, ಬೊಕ್ಕಪಟ್ಣ, ಬೆಂಗ್ರೆ, ತಣ್ಣೀರು ಬಾವಿ ಸೇರಿದಂತೆ ಹತ್ತು ಹಲವು ಪ್ರದೇಶದಿಂದ ಈ ಕಾರ‍್ಯಕ್ರಮಕ್ಕೆ ಸರಕಾರಿ ಶಾಲೆಯಲ್ಲಿ ಓದುತ್ತಿರುವ ತೀರಾ ಬಡ ಕುಟುಂಬದ ವಿದ್ಯಾರ್ಥಿಗಳು ಭಾಗವಹಿಸುತ್ತಾರೆ. ವಸ್ತು ಸೂರೆಯಲ್ಲಿ ಸಿಗುವ ವಸ್ತುಗಳನ್ನು ಪಡೆದುಕೊಂಡು ಖುಷಿಯಿಂದ ಮನೆ ಕಡೆಗೆ ಹೆಜ್ಜೆ ಹಾಕುತ್ತಾರೆ.