Tagged: managlore

ಕೋಮು ಸಾಮರಸ್ಯ ಅರಳಿಸಿದ ವಸ್ತು ಸೂರೆ!

ಕ್ರೈಸ್ತರು ಬೆಳೆಸಿದ ತರಕಾರಿ, ಮುಸ್ಲಿಂಮರು ಬೆಳೆಸಿದ ಹಣ್ಣು ಹಂಪಲು, ಹಿಂದೂಗಳು ಮಾಡಿದ ಕುರುಕಲು ತಿಂಡಿ ತಿನಸು ಜತೆಗೆ ಅದನ್ನು ಹೆಕ್ಕಿ ತೆಗೆದುಕೊಳ್ಳಲು ಸರಕಾರಿ ಶಾಲೆಯಲ್ಲಿ ಓದುತ್ತಿರುವ ಪುಟಾಣಿಗಳು ಇದೆಲ್ಲ ಚಿತ್ರಣಗಳು ಕಾಣಿಸಿಕೊಂಡದ್ದು ಭಾನುವಾರ ಬೊಕ್ಕಪಟ್ಣ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಆವರಣದಲ್ಲಿ ನಡೆದ ವಸ್ತು ಸೂರೆ ಕಾರ‍್ಯಕ್ರಮದಲ್ಲಿ.
ಹೌದು. ಬೋಳೂರಿನ ಶ್ರೀಧರ್ಮಭೂಮಿ ಪ್ರತಿಷ್ಠಾನ ಕಳೆದ 14 ವರ್ಷಗಳಿಂದ ನಿರಂತರವಾಗಿ ಈ ಸಂಘಟನೆ ಇಂತಹ ವಸ್ತುಸೂರೆ ಕಾರ‍್ಯಕ್ರಮದ ಮೂಲಕ ಸಮಾಜದಲ್ಲಿ ಕೋಮು ಸಾಮರಸ್ಯ ಭಾವನೆಯನ್ನು ಅರಳಿಸುವ ಉದಾತ್ತವಾದ ಚಿಂತನೆಯ ಮೂಲಕ ಕಾರ‍್ಯಕ್ರಮವನ್ನು ಸಂಘಟನೆ ಮಾಡುತ್ತಿದೆ. ವಿಶಿಷ್ಟ ಎಂದರೆ ಕುದ್ರೋಳಿ, ಉರ್ವ, ಬೊಕ್ಕಪಟ್ಣ, ಬೆಂಗ್ರೆ, ತಣ್ಣೀರು ಬಾವಿ ಸೇರಿದಂತೆ ಹತ್ತು ಹಲವು ಪ್ರದೇಶದಿಂದ ಈ ಕಾರ‍್ಯಕ್ರಮಕ್ಕೆ ಸರಕಾರಿ ಶಾಲೆಯಲ್ಲಿ ಓದುತ್ತಿರುವ ತೀರಾ ಬಡ ಕುಟುಂಬದ ವಿದ್ಯಾರ್ಥಿಗಳು ಭಾಗವಹಿಸುತ್ತಾರೆ. ವಸ್ತು ಸೂರೆಯಲ್ಲಿ ಸಿಗುವ ವಸ್ತುಗಳನ್ನು ಪಡೆದುಕೊಂಡು ಖುಷಿಯಿಂದ ಮನೆ ಕಡೆಗೆ ಹೆಜ್ಜೆ ಹಾಕುತ್ತಾರೆ.

ಪಿಜಿ, ಹೋಮ್‌ಸ್ಟೇಗೆ ಸರಕಾರದ ಹೊಸ ರೂಲ್ಸ್ !

ರಾಜ್ಯದ ನಗರ ಪ್ರದೇಶದಲ್ಲಿರುವ ಪೇಯಿಂಗ್ ಗೆಸ್ಟ್(ಪಿಜಿ) ಮತ್ತು ಹೋಮ್ ಸ್ಟೇಗಳಿಗೆ ಏಕರೂಪದ ಹೊಸ ಪಾಲಿಸಿಯನ್ನು ತರುವ ಕುರಿತು ಈಗಾಗಲೇ ಕರಡು ಸಿದ್ಧವಾಗಿದೆ. ರಾಜ್ಯ ಸರಕಾರ ಅದನ್ನು ಶೀಘ್ರದಲ್ಲಿಯೇ ಜಾರಿಗೆ ತರುವ ಕುರಿತು ಚಿಂತನೆ ನಡೆಸುತ್ತಿದೆ ಎಂದು ರಾಜ್ಯ ನಗರಾಭಿವೃದ್ಧಿ ಸಚಿವ ಯು.ಟಿ.ಖಾದರ್ ಹೇಳಿದ್ದಾರೆ.

ನಗರ ಪ್ರದೇಶದಲ್ಲಿ ಸಾಕಷ್ಟು ಪಿಜಿಗಳು ನಡೆಯುತ್ತಿದೆ. ಆದರೆ ಅದಕ್ಕೆ ಯಾವುದೇ ರೀತಿಯ ನೀತಿ-ನಿಯಮಗಳು ಇಲ್ಲ. ಭದ್ರತೆ ವಿಚಾರದಲ್ಲೂ ಅಷ್ಟೇ ಈ ಕಾರಣದಿಂದ ಪಿಜಿ ಹಾಗೂ ಹೋಮ್ ಸ್ಟೇಗೆ ಸೂಕ್ತವಾದ ನೀತಿ- ನಿಯಮಗಳನ್ನು ತರುವ ಕುರಿತು ಪಾಲಿಸಿ ಮಾಡಲಾಗುತ್ತದೆ. ಈ ಮೂಲಕ ಅಲ್ಲಿನವರಿಗೆ ಭದ್ರತೆ, ಕನಿಷ್ಟ ಮೂಲಭೂತ ಸವಲತ್ತು ನೀಡುವ ಕುರಿತು ಅದರಲ್ಲಿ ಉಲ್ಲೇಖವಾಗುತ್ತದೆ.

ನಗರದ ಪ್ರದೇಶ ವ್ಯಾಪ್ತಿಯಲ್ಲಿ ಮಾದರಿ ಪಾಲಿಸಿಯನ್ನು ತರುವ ಮೂಲಕ ಭದ್ರತೆ, ಸ್ಥಳೀಯ ಸಂಸ್ಥೆಗಳಿಗೆ ಅದರ ಮಾಹಿತಿ, ಎಷ್ಟು ಪಿಜಿಗಳಿವೆ, ಮಹಿಳಾ ಪಿಜಿಗಳಿಗೆ ಇರುವ ಭದ್ರತೆ, ರೋಡ್ ಸೈಡ್‌ನಿಂದ ಎಷ್ಟು ಒಳಭಾಗದಲ್ಲಿದೆ. ಯಾವ ಪ್ರದೇಶದಲ್ಲಿ ಪಿಜಿಗಳು ಇರಕೂಡದು, ಆರೋಗ್ಯ ವಿಚಾರ, ಪಿಜಿ ಮಾಡುವವರಿಗೆ ಇತರರ ನೀಡುವ ಕಿರುಕುಳಕ್ಕೆ ಕ್ರಮ ಹೀಗೆ ಹತ್ತಾರು ವಿಚಾರಗಳು ಇದರಲ್ಲಿ ಅಡಕವಾಗಿರುತ್ತದೆ.