ಮಂಗಳೂರು ಕ್ರೈಸ್ತ ಧರ್ಮಪ್ರಾಂತ್ಯದ ಬಿಷಪ್ ಡಾ.ಪೀಟರ್ ಪಾವ್ಲ್ ಸಲ್ಡಾನ್ಹಾ ಅವರ ನೀರಿನ ಕಾಳಜಿಗೆ ಮತ್ತೊಂದು ಹೊಸ ಸೇರ್ಪಡೆ ಯಾಗಿದೆ. ಜಲಬಂಧನ್ ಎನ್ನುವ ಯೋಜನೆ ಯ ಮೂಲಕ ಮಳೆ ನೀರನ್ನು ಹಿಡಿಯುವ ಜತೆಯಲ್ಲಿ ಜಿಲ್ಲೆಯ ಅಂರ್ತಜಲ ವೃದ್ಧಿ ಕಡೆಗೂ ಮಂಗಳೂರು ಕ್ರೈಸ್ತ ಧರ್ಮಪ್ರಾಂತ್ಯ ಮನಸ್ಸು ಮಾಡಿದೆ.
ಇದರ ಅಡಿಯಲ್ಲಿ ಈಗಾಗಲೇ ನೂರಕ್ಕೂ ಅಧಿಕ ಚರ್ಚ್ ಗಳ ಜತೆಗೆ ಅದರಡಿಯಲ್ಲಿ ಕೆಲಸ ಮಾಡುವ ಸಂಸ್ಥೆ ಗಳಲ್ಲಿ ಮಳೆಗಾಲದಲ್ಲಿ ನೀರನ್ನು ಹಿಡಿಯುವ ಕೆಲಸ ಆರಂಭವಾಗಲಿದೆ. ಇದಕ್ಕೆ ಜಲಯೋಧರ ತಂಡ ಸಾಥ್ ಕೊಡಲಿದೆ.