Tagged: Kudla

ಮಂಗಳೂರಿನ ಮೊದಲ ರಿಕ್ಷಾ ಚಾಲಕ ಮೊಂತು‌

ಇಳಿ ವಯಸ್ಸಲ್ಲೂ ಎಳೆಯರಂತಹ ಉತ್ಸಾಹ. 62 ವರ್ಷಗಳಿಂದ ಆಟೋ ರಿಕ್ಷಾ ಚಾಲಕ. ಈ ವರೆಗೆ ಒಂದೇ ಒಂದು ಪೊಲೀಸ್‌ ಕೇಸ್‌ ಇಲ್ಲದೆ, ಅಪಘಾತ ಎಸಗದೆ ನಿಷ್ಠೆಯಿಂದ ದುಡಿಯುತ್ತಿರುವ ಕಾಯಕಯೋಗಿ. ವಿಶೇಷವೆಂದರೆ ಮಂಗಳೂರಿನಲ್ಲಿ ಪ್ರಪ್ರಥಮವಾಗಿ ಓಡಾಟ ನಡೆಸಿದ ರಿಕ್ಷಾದ ಚಾಲಕ ಮೊಂತು‌ ಲೋಬೊ ಎನ್ನುವುದು ವಿಶೇಷ. ಈಗಲೂ ಮಂಗಳೂರಿನ ಪಡೀಲ್, ನಾಗುರಿ, ಕಂಕನಾಡಿ ಅಸುಪಾಸಿನ ರಿಕ್ಷಾ ನಿಲ್ದಾಣ ದಲ್ಲಿ ಅವರ ರಿಕ್ಷಾ ಕಾಣ ಸಿಗುತ್ತದೆ.

ಸಿಇಟಿ ಪರೀಕ್ಷಾ ಸೆಂಟರ್ ದ.ಕವೇ ರಾಜ್ಯಕ್ಕೆ ಸೆಕೆಂಡ್ !

ಇಂದು ರಾಜ್ಯವ್ಯಾಪಿ ಸಾಮಾನ್ಯ ಪ್ರವೇಶ ಪರೀಕ್ಷೆ(ಸಿಇಟಿ) ನಡೆಯಲಿದೆ. ರಾಜ್ಯದ ಬೆಂಗಳೂರಿನಲ್ಲಿ ಈ ಬಾರಿ 84 ಸಿಇಟಿ ಪರೀಕ್ಷಾ ಸೆಂಟರ್‌ಗಳಿದ್ದರೆ ಅದರ ನಂತರದ ಸ್ಥಾನ ಮಂಗಳೂರಿನಲ್ಲಿ 26 ಸಿಇಟಿ ಪರೀಕ್ಷಾ ಸೆಂಟರ್‌ಗಳನ್ನು ಹೊಂದುವ ಮೂಲಕ ರಾಜ್ಯದಲ್ಲಿ ಎರಡನೇ ಅತೀ ದೊಡ್ಡ ಪರೀಕ್ಷಾ ಸೆಂಟರ್‌ಗಳನ್ನು ಹೊಂದಿರುವ ಜಿಲ್ಲೆ ಎನ್ನುವ ಖ್ಯಾತಿಗೆ ಭಾಜನವಾಗಿದೆ.
ಅದರಲ್ಲೂ ಮುಖ್ಯವಾಗಿ ಮಂಗಳೂರು ತಾಲೂಕು ವ್ಯಾಪ್ತಿಯಲ್ಲೇ ಭರ್ತಿ 13 ಪರೀಕ್ಷಾ ಕೇಂದ್ರಗಳು ಇವೆ. ಮೂಡುಬಿದಿರೆಯಲ್ಲಿ 8, ಬೆಳ್ತಂಗಡಿಯಲ್ಲಿ 2, ಪುತ್ತೂರಿನ 3 ಕೇಂದ್ರಗಳು ಸೇರಿದಂತೆ ಒಟ್ಟು 26 ಕೇಂದ್ರಗಳಲ್ಲಿ ಪರೀಕ್ಷೆ ನಡೆಯಲಿದೆ.
ಸರಿಸುಮಾರು 13,290ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ. ಮಂಗಳೂರಿನ ಅಲೋಶಿಯಸ್ ಕಾಲೇಜಿನಲ್ಲಿ 771 ವಿದ್ಯಾರ್ಥಿಗಳು ಪರೀಕ್ಷೆ ಬರೆಯುವ ಮೂಲಕ ಜಿಲ್ಲೆಯಲ್ಲಿ ಅತೀ ಹೆಚ್ಚು ವಿದ್ಯಾರ್ಥಿಗಳು ಪರೀಕ್ಷೆ ಬರೆಯುವ ಸೆಂಟರ್ ಆಗಿ ಗುರುತಿಸಿಕೊಂಡಿದೆ.

ಸಾಕು ಪ್ರಾಣಿಗಳಿಂದ ವಿಶೇಷ ಮಕ್ಕಳಿಗೆ ಭಿನ್ನ ಟ್ರೀಟ್‌ಮೆಂಟ್

ಸಾಕು ಪ್ರಾಣಿಗಳಾದ ಕುದುರೆ, ನಾಯಿ, ಬೆಕ್ಕುಗಳ ಸಹಾಯದಿಂದ ಭಿನ್ನ ಸಾಮರ್ಥ್ಯದ ವಿಶೇಷ ಮಕ್ಕಳಿಗೆ ಚಿಕಿತ್ಸೆ ನೀಡುವಂಥ ಅನಿಮಲ್ ಅಸಿಸ್ಟೆಡ್ ಥೆರಪಿ ಎಂಬ ಹೊಸ ಪರಿಕಲ್ಪನೆಯೊಂದು ಮಂಗಳೂರಿನಲ್ಲಿ ಮೂಡಿಬರುತ್ತಿದೆ.

ವಿದೇಶ ದೇಶಗಳಲ್ಲಿ ಬಹಳ ಹಿಂದಿನಿಂದಲೂ ಇಂತಹ ಚಿಕಿತ್ಸಾ ವಿಧಾನ ಇತ್ತು. ದೇಶದ ನಾನಾ ಕಡೆಯಲ್ಲಿ ಇದು ನಿಧಾನವಾಗಿ ಮೊಳಕೆಯೊಡೆಯುತ್ತಿದೆ. ಆದ್ರೆ ಮಂಗಳೂರಿನಲ್ಲಿ ಈಗ ತಲೆ ಎತ್ತುತ್ತಿರುವ ಚಿಕಿತ್ಸಾ ವಿಧಾನ.

ಈ ಮೂಲಕ ವಿಶೇಷ ಮಕ್ಕಳು ಮಾತ್ರವಲ್ಲ, ಜನಸಮಾನ್ಯರು ಕೂಡಾ ಪ್ರಾಣಿಗಳ ಒಡನಾಟ ಇಟ್ಟುಕೊಂಡು ಬದುಕಿದರೆ, ಶಕ್ತಿ ಸಾಮರ್ಥ್ಯ ಹೆಚ್ಚುವ ಜತೆಗೆ ಭಾವನಾತ್ಮಕ ಸಂಬಂಧಗಳು ವೃದ್ಧಿಯಾಗುತ್ತವೆ ಎನ್ನುವುದು ವೈದ್ಯಲೋಕ ಹೇಳುವ ಮಾತು.

ರಾಜ್ಯದಲ್ಲಿರುವ ಏಕೈಕ ಹಡಗು ಚರ್ಚ್ ಗೊತ್ತಾ..?

ರಾಜ್ಯದ ಚರ್ಚ್‌ಗಳಲ್ಲಿ ಅತೀ ವಿಶಿಷ್ಟ ಚರ್ಚ್ ಎಂದರೆ ಅದು ಉಡುಪಿ ಕಲ್ಮಾಡಿ ಸ್ಟೆಲ್ಲಾ ಮಾರೀಸ್ ಚರ್ಚ್ ಎನ್ನಲಾಗುತ್ತಿದೆ. ಕಾರಣ ಈ ಚರ್ಚ್‌ನ ಕಟ್ಟಡವೇ ಹಡಗಿನ ರೂಪದಲ್ಲಿದೆ. ಇದನ್ನು ಸಮುದ್ರ ತಾರೆ ಎಂದೇ ಕರೆಯಲಾಗುತ್ತದೆ. ಮಲ್ಪೆ ಬಂದರಿನ ಸಮೀಪದಲ್ಲಿರುವುದರಿಂದ ಇದು ಹಡಗಿನ ರೂಪದ ಚರ್ಚ್ ಆಗಿ ನಿರ್ಮಾಣ ಮಾಡಲಾಗಿದೆ.
ಉಡುಪಿ- ಮಲ್ಪೆ ಕಡೆಗೆ ಹೋಗುವ ಬಸ್‌ಗಳು ಕಲ್ಮಾಡಿ ಮೂಲಕವೇ ಹಾದು ಹೋಗಬೇಕಾಗುತ್ತದೆ. ವೆಲಂಕಣಿ ಮಾತೆಯನ್ನು ಇಲ್ಲಿ ವಿಶೇಷವಾಗಿ ಪೂಜಿಸಲಾಗುತ್ತದೆ.

ಅವೇಂಜರ್ಸ್ ದಿ ಎಂಡ್ ಸುಚಿತ್ರಾದಲ್ಲಿ ಮಾತ್ರ ನೋಡಿ

ಮಂಗಳೂರಿನ ಕೆ.ಎಸ್ ರಾವ್ ರಸ್ತೆಯಲ್ಲಿರುವ ಸುಚಿತ್ರಾ ಹಾಗೂ ಪ್ರಭಾತ್ ಸಿನಿಮಾ ಮಂದಿರಗಳು ತಮ್ಮಚಹರೆ ಬದಲಾಯಿಸಿಕೊಂಡು ಹೊಸ ತಂತ್ರಜ್ಞಾನ ಹಾಗೂ ವಿಶೇಷ ಆಸನ ವ್ಯವಸ್ಥೆ ಯಿಂದ ಸಿನಿಮಾ‌ ಪ್ರೇಕ್ಷಕರ ಮನಸ್ಸು ಗೆದ್ದಿದೆ. ಅದರಲ್ಲೂ ವಿಶೇಷವಾಗಿ ಈ ಚಿತ್ರಮಂದಿರದಲ್ಲಿರುವ ತಂತ್ರಜ್ಞಾನ ಮಂಗಳೂರು ಬಿಡಿ ಆಸುಪಾಸಿನಲ್ಲಿರುವ ಯಾವುದೇ ಸಿನಿಮಾ ಮಂದಿರದಲ್ಲಿ ಇಲ್ಲ ಎನ್ನಬಹುದು. ಆದರೆ ಮಲ್ಟಿಪ್ಲೆಕ್ಸ್ ಸಿನಿಮಾ ಮಂದಿರ ದ ಎರಡು ಪಟ್ಟು ಸವಲತ್ತುಗಳನ್ನು ಹೊಂದಿರುವ ಸುಚಿತ್ರಾ ಹಾಗೂ ಪ್ರಭಾತ್ ನ ಟಿಕೆಟ್ ರೇಟು ಕೂಡಾ ಕಡಿಮೆ ಯಿದೆ. ಹಾಲಿವುಡ್ ಚಿತ್ರವಾದ ಅವೇಂಜರ್ಸ್ ದೀ ಎಂಡ್ ಗೇಮ್ ಸಿನಿಮಾ ವನ್ನು ತ್ರೀಡಿ ಯಲ್ಲಿ‌ ನೋಡಬೇಕಾದರೆ ನೀವು ಇಲ್ಲಿಗೆ ಬರಬೇಕು. ಚಿತ್ರದ ನೈಜತೆಯ‌ ಜತೆಯಲ್ಲಿ ಸೌಂಡ್ ಎಫೆಕ್ಟ್ ನಿಂದ ನೀವೇ ಸಿನಿಮಾದೊಳಗೆ ಎಂಟ್ರಿ ಪಡೆದುಕೊಂಡ ಅನುಭವ ಸಿಗಲಿದೆ. ನವೀಕೃತ ಈ ಸಿನಿಮಾ ಮಂದಿರದ ಉದ್ಘಾಟನೆಯಂದು ಸಿನಿಮಾ‌ಮಂದಿರಲ್ಲಿ‌ ಆವೇಂಜರ್ಸ್ ದೀ ಇನ್ಪಿನಿಟಿ ಪ್ರದರ್ಶನ ಮಾಡಲಾಗಿತ್ತು. ಈಗ ಸುಚಿತ್ರಾ ಕ್ಕೆ ಒಂದು ವರ್ಷ ತುಂಬಿದೆ ಈಗ ಆವೇಂಜರ್ಸ್ ನ ಹೊಸ ಸರಣಿಯ ಚಿತ್ರವನ್ನು ಪ್ರದರ್ಶನ ಮಾಡಲಾಗುತ್ತಿದೆ.