ಮಂಗಳೂರಿನ ಕೆ.ಎಸ್ ರಾವ್ ರಸ್ತೆಯಲ್ಲಿರುವ ಸುಚಿತ್ರಾ ಹಾಗೂ ಪ್ರಭಾತ್ ಸಿನಿಮಾ ಮಂದಿರಗಳು ತಮ್ಮಚಹರೆ ಬದಲಾಯಿಸಿಕೊಂಡು ಹೊಸ ತಂತ್ರಜ್ಞಾನ ಹಾಗೂ ವಿಶೇಷ ಆಸನ ವ್ಯವಸ್ಥೆ ಯಿಂದ ಸಿನಿಮಾ ಪ್ರೇಕ್ಷಕರ ಮನಸ್ಸು ಗೆದ್ದಿದೆ. ಅದರಲ್ಲೂ ವಿಶೇಷವಾಗಿ ಈ ಚಿತ್ರಮಂದಿರದಲ್ಲಿರುವ ತಂತ್ರಜ್ಞಾನ ಮಂಗಳೂರು ಬಿಡಿ ಆಸುಪಾಸಿನಲ್ಲಿರುವ ಯಾವುದೇ ಸಿನಿಮಾ ಮಂದಿರದಲ್ಲಿ ಇಲ್ಲ ಎನ್ನಬಹುದು. ಆದರೆ ಮಲ್ಟಿಪ್ಲೆಕ್ಸ್ ಸಿನಿಮಾ ಮಂದಿರ ದ ಎರಡು ಪಟ್ಟು ಸವಲತ್ತುಗಳನ್ನು ಹೊಂದಿರುವ ಸುಚಿತ್ರಾ ಹಾಗೂ ಪ್ರಭಾತ್ ನ ಟಿಕೆಟ್ ರೇಟು ಕೂಡಾ ಕಡಿಮೆ ಯಿದೆ. ಹಾಲಿವುಡ್ ಚಿತ್ರವಾದ ಅವೇಂಜರ್ಸ್ ದೀ ಎಂಡ್ ಗೇಮ್ ಸಿನಿಮಾ ವನ್ನು ತ್ರೀಡಿ ಯಲ್ಲಿ ನೋಡಬೇಕಾದರೆ ನೀವು ಇಲ್ಲಿಗೆ ಬರಬೇಕು. ಚಿತ್ರದ ನೈಜತೆಯ ಜತೆಯಲ್ಲಿ ಸೌಂಡ್ ಎಫೆಕ್ಟ್ ನಿಂದ ನೀವೇ ಸಿನಿಮಾದೊಳಗೆ ಎಂಟ್ರಿ ಪಡೆದುಕೊಂಡ ಅನುಭವ ಸಿಗಲಿದೆ. ನವೀಕೃತ ಈ ಸಿನಿಮಾ ಮಂದಿರದ ಉದ್ಘಾಟನೆಯಂದು ಸಿನಿಮಾಮಂದಿರಲ್ಲಿ ಆವೇಂಜರ್ಸ್ ದೀ ಇನ್ಪಿನಿಟಿ ಪ್ರದರ್ಶನ ಮಾಡಲಾಗಿತ್ತು. ಈಗ ಸುಚಿತ್ರಾ ಕ್ಕೆ ಒಂದು ವರ್ಷ ತುಂಬಿದೆ ಈಗ ಆವೇಂಜರ್ಸ್ ನ ಹೊಸ ಸರಣಿಯ ಚಿತ್ರವನ್ನು ಪ್ರದರ್ಶನ ಮಾಡಲಾಗುತ್ತಿದೆ.