Tagged: mangalore

ನೀರನ್ನು ಹಿಡಿಯುವ ಬಿಷಪ್ ರ ಜಲ ಬಂಧನ್

ಮಂಗಳೂರು ಕ್ರೈಸ್ತ ಧರ್ಮಪ್ರಾಂತ್ಯದ ಬಿಷಪ್ ಡಾ.ಪೀಟರ್ ಪಾವ್ಲ್ ಸಲ್ಡಾನ್ಹಾ ಅವರ ನೀರಿನ ಕಾಳಜಿಗೆ ಮತ್ತೊಂದು ಹೊಸ ಸೇರ್ಪಡೆ ಯಾಗಿದೆ. ಜಲಬಂಧನ್ ಎನ್ನುವ ಯೋಜನೆ ಯ ಮೂಲಕ ಮಳೆ ನೀರನ್ನು ಹಿಡಿಯುವ ಜತೆಯಲ್ಲಿ ಜಿಲ್ಲೆಯ ಅಂರ್ತಜಲ ವೃದ್ಧಿ ಕಡೆಗೂ ಮಂಗಳೂರು ಕ್ರೈಸ್ತ ಧರ್ಮಪ್ರಾಂತ್ಯ ಮನಸ್ಸು ಮಾಡಿದೆ.

ಇದರ ಅಡಿಯಲ್ಲಿ ಈಗಾಗಲೇ ನೂರಕ್ಕೂ ಅಧಿಕ ಚರ್ಚ್ ಗಳ ಜತೆಗೆ ಅದರಡಿಯಲ್ಲಿ ಕೆಲಸ ಮಾಡುವ ಸಂಸ್ಥೆ ಗಳಲ್ಲಿ ಮಳೆಗಾಲದಲ್ಲಿ‌ ನೀರನ್ನು ಹಿಡಿಯುವ ಕೆಲಸ ಆರಂಭವಾಗಲಿದೆ. ಇದಕ್ಕೆ ಜಲಯೋಧರ ತಂಡ ಸಾಥ್ ಕೊಡಲಿದೆ.

ಕುಡ್ಲದ ಹಾಟ್ ವೆದರ್‌ಗೆ ಹೀಗೊಂದು ತಂತ್ರ !

ಕುಡ್ಲ ಮಾತ್ರವಲ್ಲ ಇಡೀ ಕರಾವಳಿ ನಗರಿಯೇ ಬಿಸಿಲಿನ ಬೇಗೆಯಲ್ಲಿ ನಿತ್ಯನೂ ಸುಡುತ್ತಿದೆ. ಒಂದೆಡೆ ಮಳೆ ಇಲ್ಲದೇ ನೀರಿಗೆ ತಾತ್ವರ ಕಾಣಿಸಿಕೊಂಡರೆ ಇನ್ನು ದೇವಸ್ಥಾನ, ಹೋಟೆಲ್‌ಗಳಲ್ಲಿಯೂ ನೀರಿನ ಬರ ಕಾಣಿಸಿಕೊಂಡಿದೆ.

ಹೆಚ್ಚುತ್ತಿರುವ ಬಿಸಿಲಿನ ತಾಪಮಾನ ನೋಡಿದರೆ ತಕ್ಷಣವೇ ಒಂದು ಬಿಂದಿಗೆ ನೀರನ್ನು ಮೈಗೆ ಹಾಕಿಕೊಂಡು ಬಿಡೋಣ ಎನ್ನುವ ಭಾವನೆ ಕುಡ್ಲದ ಮಂದಿಗೆ ಮೂಡಿದರೆ ಅದರಲ್ಲಿ ಯಾವುದೇ ವಿಶೇಷ ಇಲ್ಲ ಮಾರಾಯ್ರೆ.

ಕರಾವಳಿ ಮೀನುಗಾರರ ಹೆಸರು ಕೆಡಿಸಿದ ಕ್ಲಾತಿ!

ಕೆಲವು ತಿಂಗಳ ಹಿಂದೆ ಕೇರಳ ಸೇರಿದಂತೆ ನೆರೆಯ ರಾಜ್ಯಗಳಿಗೆ ಅಪ್ಪಳಿಸಿದ ಓಖಿ ಚಂಡಮಾರುತದ ಪ್ರಭಾವ ಕಡಿಮೆಯಾದರೂ ಕರಾವಳಿಯ ಮೀನುಗಾರರು ಮಾತ್ರ ಇನ್ನು ಕೂಡ ಅದರ ಪ್ರಭಾವದಿಂದ ಹೊರಬಂದಿಲ್ಲ.

ಈ ಚಂಡಮಾರುತದ ಬಳಿಕ ಕರಾವಳಿ ಗೆ ಹೊಸ ಮೀನೊಂದು ಎಂಟ್ರಿ‌ಪಡೆದುಕೊಂಡಿದೆ ಇದು ಬರೀ ಫಿಶ್ ಮಿಲ್ ಗೆ ಮಾತ್ರ ಸಾಗಬೇಕಾದ ಕ್ಲಾತಿ ಮೀನು ಅತಿಯಾದ ವಾಸನೆ ಇರುವ ಈ ಮೀನು ಕರಾವಳಿಯ ಮೀನುಗಾರರ ಬಲೆಗೆ ದಿನಕ್ಕೆ 60 ಟನ್ ಗಳ ಬೀಳುತ್ತಿದೆ. ಇದರ ಪರಿಣಾಮ ಇತರ ಮೀನು ರುಚಿ ಕಳೆದು ಕೊಳ್ಳುತ್ತಿಕೊಳ್ಳುತ್ತಿದೆ ಎನ್ನುವುಮೀನುಗಾರರ ವಾದ.

ಹೆಗ್ಗಡೆಯವರು ಬರೆದ ಶಾಕಿಂಗ್ ಪತ್ರ!

ಸ್ವಾಮಿ ದಯಮಾಡಿ ಧರ್ಮಸ್ಥಳಕ್ಕೆ ಸಧ್ಯಕ್ಕೆ ಬರಬೇಡಿ. ಇಲ್ಲಿ‌ ನೀರಿನ ಸಮಸ್ಯೆ ತೀವ್ರವಾಗಿದೆ. ನಿಮ್ಮ ಪ್ರವಾಸ ಮುಂದಕ್ಕೆ ಹಾಕಿಬಿಡಿ ಎನ್ನುವ ಮೂಲಕ ಧಾರ್ಮಿಕ ಕ್ಷೇತ್ರದಲ್ಲಿ ನೀರಿನ ಸಮಸ್ಯೆ ಯನ್ನು ಪತ್ರದ ಮೂಲಕ ಬಿಚ್ಚಿಟ್ಟವರು ಧರ್ಮಸ್ಥಳದ‌ ಧರ್ಮಾಧಿಕಾರಿ ಡಿ.ವೀರೇಂದ್ರ ಹೆಗ್ಗಡೆಯವರು ಈ ಮೂಲಕ ಕುಡ್ಲ ಮಾತ್ರವಲ್ಲದೆ ಗ್ರಾಮಾಂತರ ಪ್ರದೇಶದಲ್ಲೂ ಸಮಸ್ಯೆ ಯ ಚಿತ್ರಣ ಈ ಪತ್ರದ ಮೂಲಕ ಅನಾವರಣ ಗೊಂಡಿತು.

ಐಟಿ ಓದಿದವರು ಸಿಗ್ತಾರೆ ತೆಂಗಿನ ಕಾಯಿ ಕೀಳುವರಿಲ್ಲ !

ಮಂಗಳೂರು ಮಾತ್ರವಲ್ಲ ಇದು ಎಲ್ಲ ನಗರ, ಗ್ರಾಮಾಂತರ ಪ್ರದೇಶಗಳಲ್ಲಿರುವ ಎಲ್ಲರೂ ಹೇಳುವ ಮಾತು. ಐಟಿ, ಬಿಟಿ ಓದಿ ಬಂದವರು ಎಲ್ಲ ಕಡೆಯಲ್ಲೂ ಸಿಗ್ತಾರೆ ಮಾರಾಯ್ರೆ. ಈ ಕಾಯಿ ಕೀಳುವ ಮಂದಿಯಂತೂ ಸಿಗ್ತಾ ಇಲ್ಲ. ಸಿಕ್ಕರೂ ಕೂಡ ಒಳ್ಳೆಯ ಮೊತ್ತವನ್ನು ಕೀಳುತ್ತಾರೆ ಎನ್ನುವ ಮಾತು ಕಾಮನ್ ಆಗಿ ಸಿಗುತ್ತದೆ.