Tagged: mangalore

ಕುಡ್ಲದಲ್ಲಿ ಮಳೆರಾಯನ ಕೆಲಸ ಆರಂಭ

ಒಂದೆಡೆ ಸಿಡಿಲು ಜತೆಗೆ ಕಾಣಿಸುವ ಗುಡುಗು ಇವುಗಳ ಜತೆಯಲ್ಲಿ ಗಾಳಿ ಜತೆಗೆ ಹನಿಯ ಲೀಲೆಗಳ ಜತೆಗೆ ಆರಂಭವಾದ ಮಳೆ ರಾತ್ರಿಯ ಸೆಕೆಯನ್ನು ತಣ್ಣಗೆ ಮಾಡುತ್ತಾ ಮಲಗುವ ಮಂದಿಯ ನಿದ್ರೆಗೆ ಜಾಗ ನೀಡಿದ ಅನುಭವ ಶನಿವಾರ ಮುಂಜಾನೆ ಹೊತ್ತಿಗೆ ನಡೆದಿದೆ.

ಹೌದು. ಕುಡ ಸಿಟಿಯೊಳಗೆ ಮಳೆರಾಯ ಭರ್ಜರಿ ಯಾಗಿ ಮಳೆ ಸುರಿಸಿ ಇಡೀ ಸಿಟಿಯನ್ನು ತಣ್ಣಗೆ ಮಾಡಿ ಹೋಗಿದ್ದಾನೆ.

ವಿಮಾನ ನಿಲ್ದಾಣ ದುರಂತಕ್ಕೆ ಭರ್ತಿ 9

ಜಾಗತಿಕ ಮಟ್ಟದಲ್ಲಿ ಭಾರಿ ಸುದ್ದಿ ಮಾಡಿದ ಮಂಗಳೂರು ವಿಮಾನ ದುರಂತಕ್ಕೆ ಇದೀಗ 9 ವರ್ಷ ಕಳೆದಿದೆ. 2010 ಮೇ 22ರಂದು ಬಜಪೆ ವಿಮಾನ ನಿಲ್ದಾಣದಲ್ಲಿ ಇಳಿಯುತ್ತಿದ್ದ ಏರ್ ಇಂಡಿಯಾ ಎಕ್ಸ್‌ಪ್ರಸ್ ವಿಮಾನ ದುರಂತಕ್ಕೀಡಾಗಿತ್ತು.

ವಿಮಾನ ದುಬೈಯಿಂದ ಮಂಗಳೂರಿಗೆ ಆಗಮಿಸಿತ್ತು. ಇನ್ನೇನು ವಿಮಾನ ಲ್ಯಾಂಡ್ ಆಗಲಿದೆ ಎನ್ನುವಷ್ಟರಲ್ಲಿ ರನ್ ವೇಯಿಂದ ಜಿಗಿದು ಇಬ್ಭಾಗವಾಗಿತ್ತು. ವಿಮಾನದಲ್ಲಿದ್ದ 166 ಮಂದಿಯಲ್ಲಿ 158 ಮಂದಿ ಸುಟ್ಟು ಕರಕಲಾಗಿದ್ದರು. ಸತ್ತವರಲ್ಲಿ ಏರ್ ಇಂಡಿಯಾದ ಪೈಲಟ್ ಸೇರಿದಂತೆ ಎಂಟು ಸಿಬ್ಬಂದಿಗಳಿದ್ದರು. ವಿಮಾನದಿಂದ ಜಿಗಿದು 8 ಮಂದಿ ಪವಾಡಸದೃಶ ಪಾರಾಗಿದ್ದರು.

ಸಾವಿಗೀಡಾದವರಲ್ಲಿ 135 ಮಂದಿ ವಯಸ್ಕರು, 19 ಮಂದಿ ಮಕ್ಕಳು ಹಾಗೂ 4 ಮಂದಿ ಪುಟಾಣಿಗಳಿದ್ದರು. ದುರಂತದ ಭೀಕರತೆ ಎಷ್ಟಿತೆಂದರೆ ಕೇವಲ 22 ಮೃತದೇಹಗಳ ಗುರುತು ಪತ್ತೆ ಹಚ್ಚಲು ಮಾತ್ರ ಸಾಧ್ಯವಾಗಿತ್ತು. ಡಿಎನ್‌ಎ ಪರೀಕ್ಷೆಯ ಬಳಿಕವೂ 12 ಮೃತದೇಹಗಳು ಅನಾಥವಾಗಿದ್ದವು.

ನಂತರ ಕೂಳೂರು- ತಣ್ಣೀರುಬಾವಿ ರಸ್ತೆಯ ಪಕ್ಕದಲ್ಲೇ ಇರುವ ಸರಕಾರಿ ಜಾಗದಲ್ಲಿ ಅನಾಥ ಮೃತದೇಹಗಳಿಗೆ ಸರ್ವಧರ್ಮ ಪ್ರಾರ್ಥನೆ ಮೂಲಕ ಅಂತ್ಯ ಸಂಸ್ಕಾರ ನಡೆಸಲಾಗಿತ್ತು. ನಂತರ ಆ ಸ್ಥಳಕ್ಕೆ ವಿಮಾನ ದುರಂತ ಉದ್ಯಾನವನ ಎಂದು ಹೆಸರಿಟ್ಟು ದುರಂತದಲ್ಲಿ ಮಡಿದವರ ಸ್ಮರಣಾರ್ಥವಾಗಿ ಸ್ಮಾರಕವನ್ನು ನಿರ್ಮಿಸಲಾಯಿತು.

ಮಂಗಳೂರಿನ ಮತ ಏಣಿಕೆ ಕೇಂದ್ರ ಹೇಗಿದೆ ಗೊತ್ತಾ?

ಲೋಕಸಭೆಯ ಚುನಾವಣೆ ಮುಗಿದು ಇನ್ನು ಒಂದೇ ದಿನದಲ್ಲಿ ಫಲಿತಾಂಶ ಹೊರಬರಲಿದೆ. ಸಾಕಷ್ಟು ಕುತೂಹಲ ಕಾತರದ ಜತೆಯಲ್ಲಿ ಇಷ್ಟು ದಿನ ಮಂಗಳೂರಿನ ಲೋಕಸಭೆಯ ಮತದಾರ ಹಾಕಿದ ಮತಗಳನ್ನು ಯಾವ ರೀತಿಯಲ್ಲಿ ಜೋಪಾನ ಮಾಡಲಾಗಿದೆ ಹಾಗೂ ಅದರ ಭದ್ರತೆಯ ವಿಚಾರವಂತೂ ಬಹಳಷ್ಟು ಮಂದಿಗೆ ಗೊತ್ತಿಲ್ಲ.

ಮಂಗಳೂರಿನ ಎನ್‌ಐಟಿಕೆಯಲ್ಲಿ ವಿಶಿಷ್ಟ ಭದ್ರತೆಯ ಜತೆಯಲ್ಲಿ ಈ ಮತ ಏಣಿಕೆಯ ಕಾರ‍್ಯಗಳು ಸಾಗಲಿದೆ. ಮೇ 22ರ ಸಂಜೆ 6ರಿಂದ ಮೇ 24ರ ಸಂಜೆ 6 ಗಂಟೆಯ ತನಕ ಜಿಲ್ಲೆಯಲ್ಲಿ ನಿಷೇಧಾಜ್ಞೆ ಜಾರಿಯಲ್ಲಿರುತ್ತದೆ.

ಕುಡ್ಲ ಸಿಟಿಯ ಟ್ರಾಫಿಕ್ ನಿಯಂತ್ರಕ ರವೂಫ್ ಭಾಯಿಗೊಂದು ಸಲಾಂ !

ಅಬ್ದುಲ್ ರವೂಫ್ ಎಂದರೆ ಬಹಳಷ್ಟು ಮಂದಿಗೆ ಗೊತ್ತಿಲ್ಲ. ಟ್ರಾಫಿಕ್‌ನ ರವೂಫ್ ಭಾಯಿ ಎಂದರೆ ತಕ್ಷಣ ಮಂಗಳೂರಿನಲ್ಲಿ ವಾಹನ ಓಡಿಸುವವರಿಗೆ ಗೊತ್ತಿರುವ ಮನುಷ್ಯ.

ಕಳೆದ 26 ವರ್ಷಗಳಿಂದ ಕುಡ್ಲ ಸಿಟಿಯ ಸಂಚಾರ ನಿಯಂತ್ರಣದಲ್ಲಿ ಪ್ರಮುಖ ಪಾತ್ರವಹಿಸುವ ರವೂಫ್ ಈಗ ಹೋಮ್ ಗಾರ್ಡ್‌ನಲ್ಲಿ ನೌಕರಿ ಮಾಡುತ್ತಿದ್ದಾರೆ. ಈಗ ರಂಜಾನ್ ಉಪವಾಸದ ಸಮಯದಲ್ಲಿ ನಮಾಜ್ ಮಾಡಲು ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಬರುತ್ತಾರೆ ಹೆಚ್ಚಾಗಿ ಸಂಜೆಯ ಹೊತ್ತು ಮಸೀದಿ ಸುತ್ತಮುತ್ತ ಹೆಚ್ಚು ವಾಹನಗಳ ಜತೆಗೆ ಟ್ರಾಫಿಕ್ ಸಮಸ್ಯೆ ಉಂಟಾಗುತ್ತದೆ.

ಈಗ ರವೂಫ್ ಮಾಡುತ್ತಿರುವ ಮುಖ್ಯ ಕೆಲಸ ಎಂದರೆ ನಗರದ ಪ್ರಮುಖ ನಾಲ್ಕು ಮಸೀದಿಗಳ ಟ್ರಾಫಿಕ್ ಸಮಸ್ಯೆಗೆ ಪರಿಹಾರ ನೀಡಲು ಬೆಳಗ್ಗೆ 8ರಿಂದ ರಾತ್ರಿ 10ರ ವರೆಗೆ ನಿರಂತರವಾಗಿ ಕೆಲಸ ಮಾಡುತ್ತಿದ್ದಾರೆ. ಬಿಸಿಲು, ಮಳೆ ಎನ್ನದೇ ಕಡಿಮೆ ಸಂಬಳದಲ್ಲಿ ದುಡಿಯುವ ಟ್ರಾಫಿಕ್‌ನ ಅಬ್ದುಲ್ ರವೂಫ್ ನಿಜವಾಗಿಯೂ ‘ಕುಡ್ಲ ಸಿಟಿ’ಯ ಹೆಮ್ಮೆಯ ನಾಗರಿಕ ಎನ್ನಬಹುದು.

90ರ ಹರೆಯದ ರುಕ್ಮಯ್ಯ ಮೂಲ್ಯರ ಆದರ್ಶ ಬದುಕು ಈಗ ನೆನಪು ‌ಮಾತ್ರ

ಒಂದಲ್ಲ ಎರಡಲ್ಲ ತಮ್ಮ ಬದುಕಿನ ಕೊನೆಯ ತನಕನೂ ಭೂಮಿ, ಕೃಷಿ,ಪರಿಸರ ಜತೆಗೆ ಇಂದಿನ ಯುವಜನತೆಗೊಂದು ಮಾದರಿ ವ್ಯಕ್ತಿ ಎಂದೇ ಗುರುತಿಸಿಕೊಂಡ ಪಾವಂಜೆಯ ರುಕ್ಮಯ್ಯ ಮೂಲ್ಯರು ಇನ್ನು ಮುಂದೆ ಬರೀ ನೆನಪು ಮಾತ್ರ.

90ರ ಹರೆಯದಲ್ಲೂ ಮುಂಜಾನೆ ಯಿಂದ ಸಂಜೆಯ ತನಕ ಗದ್ದೆಯಲ್ಲಿ ದುಡಿಯುತ್ತಾ ಅವರು ಬಹಳಷ್ಟು ಮಂದಿಗೆ ಆದರ್ಶರಾಗಿದ್ದರು. ಎಂದಿನಂತೆ ಕೆಲಸಮಾಡಿಕೊಂಡು ಮನೆಗೆ ಹಿಂದಿರುಗುತ್ತಿದ್ದಾಗ ಭಾನುವಾರ ವಾಹನವೊಂದು ಡಿಕ್ಕಿಯಾದ ಪರಿಣಾಮ ಅವರು ಮೃತಪಟ್ಟರು.

ವಿಶೇಷ ಎಂದರೆ ಅವರು ಕೃಷಿ ಮೇಲಿಟ್ಟ ಅಪಾರ ಪ್ರೀತಿಯಿಂದ ಅವರು ಎಲ್ಲರ ಮೆಚ್ಚುಗೆಗೆ ಅರ್ಹರಾಗಿದ್ದರು. ಕುಡ್ಲ‌ಸಿಟಿ ಅವರ ಆತ್ಮಕ್ಕೆ ಭಗವಂತನಲ್ಲಿ ಶಾಂತಿ ಕೋರುತ್ತದೆ.